Asianet Suvarna News Asianet Suvarna News

ಪತ್ನಿಯ ಚಿನ್ನ ಮಾರಿ ಆಟೋವನ್ನೇ ‘ಆ್ಯಂಬುಲೆನ್ಸ್‌’ ಆಗಿ ಪರಿವರ್ತಿಸಿದ!

ಆಟೋವನ್ನೇ ‘ಆ್ಯಂಬುಲೆನ್ಸ್‌’ ಆಗಿ ಪರಿವರ್ತಿಸಿದ| ಇದಕ್ಕಾಗಿ ಪತ್ನಿಯ ಚಿನ್ನ ಮಾರಿದ| ಸೋಂಕಿತರ ಸೇವೆಗಾಗಿ ತ್ಯಾಗ

Covid Hero from Bhopal Javed takes patients to hospitals for free in his auto ambulance pod
Author
Bangalore, First Published May 1, 2021, 12:26 PM IST | Last Updated May 1, 2021, 2:46 PM IST

ಭೋಪಾಲ್‌(ಮೇ.01): ಆ್ಯಂಬುಲೆನ್ಸ್‌ಗಳ ತೀವ್ರ ಕೊರತೆಯಿಂದ ಕೊರೋನಾಕ್ಕೆ ತುತ್ತಾಗುವ ರೋಗಿಗಳು ಆಸ್ಪತ್ರೆಗೆ ತೆರಳಲು ದುಸ್ತರವಾಗಿರುವ ಬೆನ್ನಲ್ಲೇ, ಮಧ್ಯಪ್ರದೇಶದ ಆಟೋ ಚಾಲಕರೊಬ್ಬರು ಪತ್ನಿಯ ಚಿನ್ನಾಭರಣಗಳನ್ನು ಮಾರಾಟ ಮಾಡಿ ತಮ್ಮ ಆಟೋವನ್ನು ಉಚಿತ ಆ್ಯಂಬುಲೆನ್ಸ್‌ ಸೇವೆಗೆ ಮೀಸಲಿಟ್ಟಿದ್ದಾರೆ. ಅಲ್ಲದೆ ಈ ಆಟೋದಲ್ಲಿ ಅವರು ಆಮ್ಲಜನಕ ನೆರವಿನ ವ್ಯವಸ್ಥೆಯನ್ನೂ ಮಾಡಿದ್ದಾರೆ!

"

- ಆಟೋ ಬಾಡಿಗೆಯಿಂದ ದಿನಕ್ಕೆ 200-300 ರು. ಸಂಪಾದನೆ ಮಾಡುವ ಜಾವೇದ್‌ ಖಾನ್‌ ಎಂಬುವರೇ ಈ ಪುಣ್ಯದ ಕೆಲಸ ಮಾಡುತ್ತಿರುವವರು.

ಈ ಬಗ್ಗೆ ಪ್ರತಿಕ್ರಿಯಿಸಿದ ಖಾನ್‌ ಅವರು, ‘ಸಾಮಾಜಿಕ ಜಾಲತಾಣಗಳು ಮತ್ತು ಸುದ್ದಿ ವಾಹಿನಿಗಳಲ್ಲಿ ಆ್ಯಂಬುಲೆನ್ಸ್‌ಗಳಿಲ್ಲದೆ ಆಸ್ಪತ್ರೆಗೆ ಹೋಗಲು ಪರದಾಡುತ್ತಿದ್ದನ್ನು ನೋಡಿದೆ. ಹೀಗಾಗಿ ನನ್ನ ರಿಕ್ಷಾವನ್ನೇ ಆ್ಯಂಬುಲೆನ್ಸ್‌ ಆಗಿ ಪರಿವರ್ತಿಸಿದೆ. ಇದಕ್ಕೆ ಹಣದ ಕೊರತೆಯಾದಾಗ ಪತ್ನಿಯ ಚಿನ್ನಾಭರಣ ಮಾರಿದ್ದೇನೆ. ಕಳೆದ 15-20 ದಿನದಲ್ಲಿ ತೀವ್ರ ಅನಾರೋಗ್ಯದಲ್ಲಿದ್ದ 9ಕ್ಕೂ ಹೆಚ್ಚು ರೋಗಿಗಳನ್ನು ಆಸ್ಪತ್ರೆಗೆ ಸೇರಿಸಿದ್ದೇನೆ’ ಎಂದಿದ್ದಾರೆ.
 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Latest Videos
Follow Us:
Download App:
  • android
  • ios