ಸತತ 3ನೇ ದಿನವೂ 50 ಲಕ್ಷ ಡೋಸ್‌ಗಿಂತ ಅಧಿಕ ಲಸಿಕೆ ನೀಡಿಕೆ 64.89 ಲಕ್ಷ ಡೋಸ್ ಲಸಿಕೆ
ನವದೆಹಲಿ(ಜೂ.24): 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ನೀಡಿಕೆ ಆರಂಭವಾದ ಬಳಿಕ ಸತತ ಮೂರನೇ ದಿನವೂ 50 ಲಕ್ಷ ಡೋಸ್ಗಿಂತಲೂ ಅಧಿಕ ಕೊರೋನಾ ಲಸಿಕೆಯನ್ನು ನೀಡಲಾಗಿದೆ.
ಬುಧವಾರ ಒಟ್ಟು 63 ಲಕ್ಷ ಡೋಸ್ ಲಸಿಕೆಯನ್ನು ಕೊಡಲಾಗಿದೆ. ಈ ಮೂಲಕ ಇದುವರೆಗೆ ಲಸಿಕೆ ನೀಡಿಕೆ 30 ಕೋಟಿ ಡೋಸ್ ಸನಿಹಕ್ಕೆ ತಲುಪಿದೆ.
'ಲಸಿಕೆ 75% ಜನಕ್ಕೆ ಉಚಿತ, 25% ಜನಕ್ಕೆ ಶುಲ್ಕ ಏಕೆ?
ರಾಜ್ಯವಾರು ಮಧ್ಯಪ್ರದೇಶದಲ್ಲಿ ಅತ್ಯಧಿಕ 11.17 ಲಕ್ಷ ಡೋಸ್ ಲಸಿಕೆ ನೀಡಲಾಗಿದ್ದರೆ, ಕರ್ನಾಟಕದಲ್ಲಿ 3.77 ಲಕ್ಷ ಡೋಸ್ ಲಸಿಕೆಯನ್ನು ನೀಡಲಾಗಿದೆ. ಮಂಗಳವಾರ 52 ಲಕ್ಷ ಹಾಗೂ ಸೋಮವಾರ 88 ಲಕ್ಷ ಡೋಸ್ ಲಸಿಕೆಯನ್ನು ವಿತರಿಸಲಾಗಿತ್ತು.
ಜೂನ್ 23 ರಂದು ವ್ಯಾಕ್ಸಿನೇಷನ್ ಚಾಲನೆಯ 159 ನೇ ದಿನದಂದು 58.52 ಲಕ್ಷ ಫಲಾನುಭವಿಗಳು ತಮ್ಮ ಮೊದಲ ಶಾಟ್ ಪಡೆದರು ಮತ್ತು 6.37 ಲಕ್ಷ ಜನರಿಗೆ ಎರಡನೇ ಡೋಸ್ ನೀಡಲಾಯಿತು.
ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ತಯಾರಿಸುತ್ತಿರುವ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ ಕೋವಿಶೀಲ್ಡ್ಗಾಗಿ ಎರಡು ಪ್ರಮಾಣಗಳ ನಡುವಿನ ಅಂತರವನ್ನು 12-16 ವಾರಗಳಿಗೆ ಸರ್ಕಾರ ಪರಿಷ್ಕರಿಸಿದೆ. ಆದಾಗ್ಯೂ, ಭಾರತ್ ಬಯೋಟೆಕ್‌ನ ಕೊವಾಕ್ಸಿನ್‌ನ ಎರಡನೇ ಡೋಸ್‌ನ ಮಧ್ಯಂತರವು ಬದಲಾಗದೆ ಉಳಿದಿದೆ.
