18 ವರ್ಷ ಮೇಲ್ಪಟ್ಟವರ ಲಸಿಕೆ ನೋಂದಣಿ ಇಂದಿನಿಂದ ಶುರು| ಲಸಿಕೆಗಾಗಿ ಕೋವಿನ್‌/ಆರೋಗ್ಯ ಸೇತುನಲ್ಲಿ ಹೆಸರು ನೋಂದಾಯಿಸಿ| ನೇರವಾಗಿ ಲಸಿಕೆ ಕೇಂದ್ರಕ್ಕೆ ತೆರಳಿದವರಿಗೆ ಕೋವಿಡ್‌ ಲಸಿಕೆ ಭಾಗ್ಯವಿಲ್ಲ

ನವದೆಹಲಿ(ಏ.28): 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಮೇ 1ರಿಂದ ಆರಂಭವಾಗಲಿದ್ದು, ಅದಕ್ಕೆ ಅರ್ಹರು ಹೆಸರು ನೊಂದಾಯಿಸುವ ಪ್ರಕ್ರಿಯೆಗೆ ಬುಧವಾರದಿಂದ ಚಾಲನೆ ನೀಡಲಾಗುವುದು.

18-45 ವರ್ಷ ವಯೋಮಿತಿಯ ಎಲ್ಲಾ ಅರ್ಹ ಭಾರತೀಯ ಪ್ರಜೆಗಳು ಕೇಂದ್ರ ಸರ್ಕಾರ ಆರಂಭಿಸಿರುವ ಕೋವಿನ್‌ ಅಥವಾ ಆರೋಗ್ಯ ಸೇತು ಆ್ಯಪ್‌ ಮೂಲಕ ಹೆಸರು ನೊಂದಾಯಿಸಿ, ಲಸಿಕೆ ಪಡೆಯುವ ಸಮಯವನ್ನು ನಿಗದಿ ಮಾಡಬಹುದು. ಈ ವಯೋಮಿತಿಯವರು ನೇರವಾಗಿ ಆಸ್ಪತ್ರೆಗೆ ಬಂದು ಅಲ್ಲಿಯೇ ಹೆಸರು ನೊಂದಾಯಿಸುವ ಅವಕಾಶವನ್ನು ಸರ್ಕಾರ ಕಲ್ಪಿಸಿಲ್ಲ.

ಲಸಿಕೆ ಪಡೆಯೋದಾ? ಡೌಟ್‌ ಇರುವವರು ಈ ಫೋಟೋ ತಪ್ಪದೇ ನೋಡಿ: ಹೀಗಾಗುತ್ತೆ ಶ್ವಾಸಕೋಶ!

ಲಸಿಕಾ ಕೇಂದ್ರಗಳ ಬಳಿ ಜನದಟ್ಟಣೆ ತಡೆಯುವ ಉದ್ದೇಶದಿಂದ ಸರ್ಕಾರ ಈ ನಿಯಮ ಜಾರಿಗೆ ತಂದಿದ್ದು, ಆನ್‌ಲೈನ್‌ ಮೂಲಕ ಹೆಸರು ನೊಂದಾಯಿಸಿದವರಿಗೆ ಮಾತ್ರವೇ ಲಸಿಕೆ ನೀಡಲಾಗುವುದು.

ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟಎಲ್ಲಾ ಅರ್ಹ ನಾಗರಿಕರಿಗೆ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ವಿತರಿಸುತ್ತಿದೆ. ಆದರೆ ಖಾಸಗಿ ಆಸ್ಪತ್ರೆಗಳು 2 ಡೋಸ್‌ ಲಸಿಕೆಗೆ ತಲಾ 250 ರು.ನಂತೆ ಶುಲ್ಕ ವಿಧಿಸಲು ಅವಕಾಶ ಮಾಡಿಕೊಟ್ಟಿದೆ.

ಆದರೆ 18-45 ವಯೋಮಿತಿಯವರಿಗೆ ಉಚಿತವಾಗಿ ಲಸಿಕೆ ನೀಡಲು ನಿರಾಕರಿಸಿದೆ. ಅದರ ಬದಲು ಲಸಿಕಾ ಕಂಪನಿಗಳಿಂದ ರಾಜ್ಯ ಸರ್ಕಾರ ಮತ್ತು ಖಾಸಗಿ ಆಸ್ಪತ್ರೆ, ಸಂಸ್ಥೆಗಳು ನೇರವಾಗಿ ಖರೀದಿಸಿ ಲಸಿಕೆ ವಿತರಣೆಗೆ ಅವಕಾಶ ಕಲ್ಪಿಸಿದೆ. ಹೀಗಾಗಿ ಈ ವಯೋಮಿತಿಯವರು ಖಾಸಗಿ ಆಸ್ಪತ್ರೆಯಲ್ಲಿ ಲಸಿಕೆ ಪಡೆದುಕೊಂಡರೆ ದುಬಾರಿ ಶುಲ್ಕ ನೀಡಬೇಕಾಗುತ್ತದೆ.

ಆದರೆ ಜನಸಾಮಾನ್ಯರ ಹೊರೆ ಕಡಿಮೆ ಮಾಡುವ ನಿಟ್ಟಿನಲ್ಲಿ ಕರ್ನಾಟಕ ಸೇರಿದಂತೆ ಸುಮಾರು 23 ರಾಜ್ಯಗಳು 18-45ರ ವಯೋಮಿತಿಯವರಿಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಸಿಕೆ ವಿತರಿಸುವ ಅವಕಾಶ ಕಲ್ಪಿಸಿವೆ.

ರಕ್ತದಾನ ಮಾಡ್ತೀರಾ? ಲಸಿಕೆ ಪಡೆವ ಮುನ್ನವೇ ಮಾಡಿಬಿಡಿ

ಕೋವಿನ್ ಪೋರ್ಟಲ್ ಮೂಲಕ ಕೋವಿಡ್-19 ಲಸಿಕೆಗೆ ನೋಂದಾಯಿಸುವುದು ಹೇಗೆ..?

- www.cowin.gov.in ಲಾಗಿನ್ ಆಗಿ.

- ಮೊಬೈಲ್ ಸಂಖ್ಯೆಯನ್ನು ನಮೂದಿಸಿ.]

- ನಿಮ್ಮ ಖಾತೆಯನ್ನು ರಚಿಸಲು ಒಟಿಪಿ ಪಡೆಯಿರಿ.

- ಒಟಿಪಿ ನಮೂದಿಸಿ ಮತ್ತು 'ವೆರಿಫೈ' ಬಟನ್ ಮೇಲೆ .

- ಲಸಿಕೆಯ ಪುಟದ ನೋಂದಣಿಗೆ ನಿಮಗೆ ನಿರ್ದೇಶಿಸಲಾಗುತ್ತದೆ. ಈ ಪುಟದಲ್ಲಿ, ಒಂದು ಫೋಟೋ ಐಡಿ ಪ್ರೂಫ್ ಅನ್ನು ಆಯ್ಕೆ ಮಾಡುವ ಆಯ್ಕೆ ಇರುತ್ತದೆ.

- ನಿಮ್ಮ ಹೆಸರು, ವಯಸ್ಸು, ಲಿಂಗವನ್ನ ಭರ್ತಿ ಮಾಡಿ ಮತ್ತು ಗುರುತಿನ ದಾಖಲೆಯನ್ನ ಅಪ್ ಲೋಡ್ ಮಾಡಿ.

- 'ರಿಜಿಸ್ಟರ್' ಬಟನ್ ಮೇಲೆ .

- ನೋಂದಣಿ ಪೂರ್ಣಗೊಂಡ ನಂತರ, 'ಖಾತೆ ವಿವರಗಳು' ಅನ್ನು ತೋರಿಸುತ್ತದೆ.

- ಒಬ್ಬ ನಾಗರಿಕನು 'ಇನ್ನಷ್ಟು ಸೇರಿಸು' ಬಟನ್ ಅನ್ನು ಕ್ಲಿಕ್ ಮಾಡುವ ಮೂಲಕ ಈ ಮೊಬೈಲ್ ಸಂಖ್ಯೆಯೊಂದಿಗೆ ಲಿಂಕ್ ಮಾಡಲಾದ ಇನ್ನೂ ಮೂರು ಜನರನ್ನ ಸೇರಿಸಬಹುದು.

- 'ಶೆಡ್ಯೂಲ್ ಅಪಾಯಿಂಟ್ಮೆಂಟ್' ಸೂಚಿಸುವ ಬಟನ್ ಇರುತ್ತದೆ. ಈಗ ಅದರ ಮೇಲೆ .

- ರಾಜ್ಯ, ಜಿಲ್ಲೆ, ಬ್ಲಾಕ್ ಮತ್ತು ಪಿನ್ ಕೋಡ್ ಮೂಲಕ ಆಯ್ಕೆಯ ಲಸಿಕೆ ಕೇಂದ್ರವನ್ನು ಹುಡುಕಿ.

- ದಿನಾಂಕ ಮತ್ತು ಲಭ್ಯತೆಯನ್ನು ಸಹ ಪ್ರದರ್ಶಿಸಲಾಗುವುದು.'

- 'ಬುಕ್' ಬಟನ್ ಮೇಲೆ .

- ಬುಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡ ನಂತ್ರ, ನೀವು ಸಂದೇಶವನ್ನ ಸ್ವೀಕರಿಸುತ್ತೀರಿ. ಆ ದೃಢೀಕರಣ ವಿವರಗಳನ್ನ ಲಸಿಕೆ ಕೇಂದ್ರದಲ್ಲಿ ತೋರಿಸಬೇಕಾಗುತ್ತದೆ.