Asianet Suvarna News Asianet Suvarna News

ಎಲ್ಲರಿಗೂ ಉಚಿತ ಲಸಿಕೆ ಏಕಿಲ್ಲ?: ರಾಹುಲ್‌ ಗಾಂಧಿ ಕಿಡಿ!

ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲ ಕೊರೋನಾ ಲಸಿಕೆ ಪಡೆಯಲು ಅರ್ಹರೆಂದು ಕೇಂದ್ರದ ಘೋಷಣೆ| ಎಲ್ಲರಿಗೂ ಉಚಿತ ಲಸಿಕೆ ಏಕಿಲ್ಲ?: ರಾಹುಲ್‌ ಗಾಂಧಿ ಕಿಡಿ!

COVID 19 vaccine policy discriminatory says Rahul Gandhi pod
Author
Bengaluru, First Published Apr 21, 2021, 11:19 AM IST

ನವದೆಹಲಿ(ಏ.21): ಕೇಂದ್ರ ಸರ್ಕಾರ ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲ ಕೊರೋನಾ ಲಸಿಕೆ ಪಡೆಯಲು ಅರ್ಹರೆಂದು ಘೋಷಿಸಿದ್ದರೂ 18ರಿಂದ 45 ವರ್ಷದೊಳಗಿನವರಿಗೆ ಉಚಿತ ಲಸಿಕೆ ನೀಡುತ್ತಿಲ್ಲ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್‌ ಗಾಂಧಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಕೇಂದ್ರದ ಲಸಿಕೆ ನೀತಿ ತಾರತಮ್ಯದಿಂದ ಕೂಡಿದೆ. 18-45 ವರ್ಷದವರಿಗೆ ಉಚಿತ ಲಸಿಕೆ ಇಲ್ಲ. ಬೆಲೆಯ ಮೇಲೆ ನಿಯಂತ್ರಣವಿಲ್ಲದೆ ಮಧ್ಯವರ್ತಿಗಳನ್ನು ತರಲಾಗಿದೆ. ದುರ್ಬಲ ವರ್ಗದವರಿಗೆ ಲಸಿಕೆ ಸಿಗುವ ಗ್ಯಾರಂಟಿ ಇಲ್ಲ. ಕೇಂದ್ರದ್ದು ಲಸಿಕೆ ವಿತರಣೆ ನೀತಿಯಲ್ಲ, ಲಸಿಕೆ ತಾರತಮ್ಯ ನೀತಿ’ ಎಂದು ಮಂಗಳವಾರ ಟ್ವೀಟ್‌ ಮಾಡಿದ್ದಾರೆ.

‘ಕೆಲವೆಡೆ ಲಾಕ್‌ಡೌನ್‌ ಜಾರಿಯಾಗುತ್ತಿದ್ದಂತೆ ಮತ್ತೆ ವಲಸಿಗರು ತಮ್ಮ ಊರುಗಳಿಗೆ ವಲಸೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಅವರ ಬ್ಯಾಂಕ್‌ ಖಾತೆಗೆ ಹಣ ಹಾಕುವುದು ಕೇಂದ್ರ ಸರ್ಕಾರದ ಜವಾಬ್ದಾರಿ’ ಎಂದೂ ಹೇಳಿದ್ದಾರೆ.

Follow Us:
Download App:
  • android
  • ios