ಇಂದು, ನಾಳೆ ಕೊರೋನಾ ಲಸಿಕೆ ವಿತರಣೆ ತಾಲೀಮು| 4 ರಾಜ್ಯಗಳಲ್ಲಿ ನೋಂದಣಿ, ಸಾಗಣೆ ಅಣಕು ಪರೀಕ್ಷೆ

ನವದೆಹಲಿ(ಡಿ.28): ದೇಶಾದ್ಯಂತ ಜನವರಿಯಲ್ಲಿ ಜನರಿಗೆ ಕೊರೋನಾ ಲಸಿಕೆ ನೀಡುವ ಅಭಿಯಾನ ಚಾಲನೆಗೆ ಮುಂದಾಗಿರುವ ಕೇಂದ್ರ ಸರ್ಕಾರ, ಇದಕ್ಕೆ ಪೂರ್ವಭಾವಿಯಾಗಿ ನಾಲ್ಕು ರಾಜ್ಯಗಳಲ್ಲಿ ಸೋಮವಾರ ಮತ್ತು ಮಂಗಳವಾರ ಲಸಿಕೆ ನೀಡಿಕೆಯ ಅಣಕು ಕಾರಾರ‍ಯಚರಣೆ ನಡೆಸಲಿದೆ.

Add Asianetnews Kannada as a Preferred SourcegooglePreferred

ಇದರನ್ವಯ ಪಂಜಾಬ್‌, ಅಸ್ಸಾಂ, ಆಂಧ್ರಪ್ರದೇಶ ಮತ್ತು ಗುಜರಾತ್‌ ರಾಜ್ಯಗಳ ತಲಾ 2 ಜಿಲ್ಲೆಗಳಲ್ಲಿ 2 ದಿನಗಳ ಲಸಿಕೆ ನೀಡಿಕೆಯ ಅಣಕು ಕಾರ್ಯಾಚರಣೆ ನಡೆಯಲಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಕೊರೋನಾ ಲಸಿಕೆ ಅಭಿಯಾನಕ್ಕೆ ಅಗತ್ಯವಿರುವ ಕ್ರಮಗಳಾದ ಕೋ-ವಿನ್‌ ಆ್ಯಪ್‌ನಲ್ಲಿ ಲಸಿಕೆ ಫಲಾನುಭವಿಗಳ ಹೆಸರು ನೋಂದಣಿ, ಲಸಿಕೆ ಸಾಗಣೆಯ ಆನ್‌ಲೈನ್‌ ಮೇಲ್ವಿಚಾರಣೆ, ಲಸಿಕೆ ಪಡೆಯುವವರ ಆಯ್ಕೆ, ಲಸಿಕೆ ಕೇಂದ್ರಗಳಲ್ಲಿ ಫಲಾನುಭವಿಗಳಿಗೆ ಅಣಕು ಲಸಿಕೆ ಹಾಕುವುದು ಸೇರಿದಂತೆ ಇನ್ನಿತರ ಪ್ರಕ್ರಿಯೆಗಳನ್ನು ಈ ಅಣಕು ಕಾರ್ಯಾಚರಣೆ ಒಳಗೊಂಡಿರಲಿದೆ.

ಅಂದರೆ ನಿಜವಾದ ಕೊರೋನಾ ಲಸಿಕೆ ಹಾಕುವುದು ಒಂದನ್ನು ಹೊರತುಪಡಿಸಿ ಉಳಿದೆಲ್ಲಾ ಅಂಶಗಳನ್ನು ಈ ಲಸಿಕೆಯ ಅಣಕು ತಾಲೀಮು ಒಳಗೊಂಡಿರಲಿದೆ.