ನವದೆಹಲಿ (ಏ. 25):  ಲಭ್ಯ ಆರ್ಥಿಕ ಸಂಪನ್ಮೂಲವನ್ನೆಲ್ಲಾ ಕೊರೋನಾ ನಿರ್ವಹಣೆಗೆ ವಿನಿಯೋಗಿಸಬೇಕಾದ ಅನಿವಾರ್ಯತೆಗೆ ಕೇಂದ್ರ ಸರ್ಕಾರ ಸಿಲುಕಿರುವ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಈ ವರ್ಷ ಯಾವುದೇ ಹೊಸ ಖರೀದಿ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇಲ್ಲ.

ಭಾರತೀಯರಿಗೊಂದು ಸಂತೋಷದ ಸುದ್ದಿ: 80 ಜಿಲ್ಲೆಯಲ್ಲಿ 14 ದಿನಗಳಿಂದ ಕೊರೋನಾ ಕೇಸ್ ಇಲ್ಲ

ಅದರಲ್ಲೂ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಂತೂ ಯಾವುದೇ ದೊಡ್ಡ ಒಪ್ಪಂದಕ್ಕೆ ಸೇನೆ ಸಹಿ ಹಾಕುವ ಸಾಧ್ಯತೆ ಇಲ್ಲ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕ ಎಂಬಂತೆ ಮೊದಲ ತ್ರೈಮಾಸಿಕದಲ್ಲಿ ಒಟ್ಟಯೋಜಿತ ವೆಚ್ಚದಲ್ಲಿ ಶೇ.15-20 ರಷ್ಟನ್ನು ಮಾತ್ರ ವಿನಿಯೋಗಿಸುವಂತೆ ಸರ್ಕಾರ ಈಗಾಗಲೇ ಸೇನೆಗೆ ಸೂಚಿಸಿದೆ. ಜೊತೆಗೆ ಇರುವ ಹಣಕಾಸಿನ ಲಭ್ಯತೆಯನ್ನು ಈಗಾಗಲೇ ಮಾಡಿರುವ ಖರೀದಿಯ ಕಂತುಪಾವತಿಗೆ ಬಳಸಿಕೊಳ್ಳುವಂತೆ ಸರ್ಕಾರ ಸೂಚಿಸಿದೆ.

30 ವರ್ಷಗಳ ನಂತರ ಮರಳಿ ಬಂದ ಡಾಲ್ಫಿನ್, ಇದೆಕ್ಕೆಲ್ಲ ಕಾರಣ ಕೊರೋನಾ!

ಈ ಪೈಕಿ ಫ್ರಾನ್ಸ್‌ನ ರಫೇಲ್‌, ರಷ್ಯಾದ ಟ್ರಯಂಫ್‌ ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿಗೆ ಮಾಡಿದ್ದಕ್ಕೆ ಮಾಡಬೇಕಾದ ಪಾವತಿ ದೊಡ್ಡ ಮಟ್ಟದಲ್ಲಿದೆ. ಹೀಗಾಗಿ ಹೊಸ ಹೊಸ ಯೋಜನೆಗಳನ್ನು ಹಾಕಿಕೊಂಡಿದ್ದ ಸೇನೆ ಸದ್ಯಕ್ಕೆ ಕೈಕಟ್ಟಿಕೂರಬೇಕಾದ ಪರಿಸ್ಥಿಯಲ್ಲಿದೆ ಎನ್ನಲಾಗಿದೆ. ಅಲ್ಲದೆ ಈಗಾಗಲೇ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಂದ ಮತ್ತು ವಿದೇಶ ಕಂಪನಿಗಳಿಂದ ಮಾಡಿರುವ ಖರೀದಿಗೆ ಮಾಡಬೇಕಿರುವ ಪಾವತಿಯಲ್ಲೂ ವಿಳಂಬವಾಗುವ ಸಾಧ್ಯತೆ ಇದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಪ್ರಸಕ್ತ ವರ್ಷ ಸೇನೆ ಒಟ್ಟಾರೆ 1.75 ಲಕ್ಷ ಕೋಟಿ ರು. ನೆರವನ್ನು ಸರ್ಕಾರದಿಂದ ಯಾಚಿಸಿತ್ತಾದರೂ, ಬಜೆಟ್‌ನಲ್ಲಿ ನೀಡಿದ್ದು 1.13 ಲಕ್ಷ ಕೋಟಿ ರು. ಅಂದರೆ ಕೇಳಿದ್ದರಲ್ಲಿ ಶೇ.65ರಷ್ಟುಮಾತ್ರ. ಹೀಗಾಗಿ ಮೊದಲೇ ಹಣಕಾಸಿನ ಕೊರತೆ ಎದುರಿಸುತ್ತಿದ್ದ ಸೇನೆಗೆ, ಕೊರೋನಾ ಮತ್ತಷ್ಟುಹೊಡೆತ ನೀಡಿದೆ.