ದೇಶಾದ್ಯಂತ ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೋನಾ ಲಸಿಕೆ ವಿತರಣೆಗೆ ನಿರ್ಧಾರ| ಅಸ್ಸಾಂ, ಉತ್ತರ ಪ್ರದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಕೊರೋನಾ ಲಸಿಕೆ!

ಲಖನೌ(ಏ.21): ದೇಶಾದ್ಯಂತ ಮೇ 1ರಿಂದ 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಕೊರೋನಾ ಲಸಿಕೆ ವಿತರಣೆಗೆ ನಿರ್ಧಾರದ ಬೆನ್ನಲ್ಲೇ, 18 ವರ್ಷ ಮೇಲ್ಪಟ್ಟವರೆಲ್ಲರಿಗೂ ಉಚಿತ ಲಸಿಕೆ ನೀಡಲು ಉತ್ತರ ಪ್ರದೇಶ ಮತ್ತು ಅಸ್ಸಾಂ ಸರ್ಕಾರಗಳು ಮುಂದಾಗಿವೆ.

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲು ಅವಕಾಶ ಕಲ್ಪಿಸಿಕೊಟ್ಟಕೇಂದ್ರದ ಮೋದಿ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದೆ.

Scroll to load tweet…

ಈ ಬಗ್ಗೆ ಮಂಗಳವಾರ ಟ್ವೀಟ್‌ ಮಾಡಿದ ಅಸ್ಸಾಂ ಸಚಿವ ಹಿಮಂತಾ ಬಿಶ್ವಾ ಶರ್ಮಾ, ‘45 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಉಚಿತ ಲಸಿಕೆ ನೀಡುತ್ತಿದೆ. ಕಳೆದ ವರ್ಷ ಆರೋಗ್ಯ ನಿಧಿಗೆ ಹರಿದುಬಂದ ಹಣವನ್ನು 18 ವರ್ಷ ಮೇಲ್ಪಟ್ಟವರ ಲಸಿಕೆಗೆ ವಿನಿಯೋಗಿಸಲಾಗುತ್ತದೆ. ತನ್ಮೂಲಕ 18-45 ವರ್ಷದವರಿಗೆ ಉಚಿತ ಲಸಿಕೆ ನೀಡಲಾಗುತ್ತದೆ’ ಎಂದಿದ್ದಾರೆ.