18 ಮೇಲ್ಪಟ್ಟವರಿಗೆ ಲಸಿಕೆ ನೀಡಿಕೆ ಶುರು| ಕೆಲವು ರಾಜ್ಯಗಳಲ್ಲಿ ಮಾತ್ರ ಚಾಲನೆ| ಲಸಿಕೆ ಕೊರತೆ ಕಾರಣ ಹಲವು ರಾಜ್ಯಗಳಲ್ಲಿ ವಿಳಂಬ| ಈವರೆಗೆ 2.45 ಕೋಟಿ ಜನರ ನೋಂದಣಿ

ನವದೆಹಲಿ(ಮೇ.01): 18 ವರ್ಷ ಮೇಲ್ಪಟ್ಟವರಿಗೆ ಕೊರೋನಾ ಲಸಿಕೆ ನೀಡಿಕೆ ಶನಿವಾರದಿಂದ ಆರಂಭವಾಗಲಿದೆ. ದೇಶದನ್ನು ಕೊರೋನಾ ಮುಕ್ತ ಮಾಡುವತ್ತ ಇದು ಪ್ರಮುಖ ಹೆಜ್ಜೆಯಾಗಿದೆ. ಆದರೆ ಲಸಿಕೆ ಕೊರತೆಯ ಕಾರಣ ಕೆಲವೇ ಕೆಲವು ರಾಜ್ಯಗಳಲ್ಲಿ ಈ ಅಭಿಯಾನ ಮೇ 1ರಿಂದ ಆರಂಭವಾಗಲಿದ್ದು, ಉಳಿದ ರಾಜ್ಯಗಳಲ್ಲಿ ವಿಳಂಬವಾಗಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಈಗಾಗಲೇ ತಾವು ಲಸಿಕೆ ಸ್ವೀಕರಿಸಿದ್ದು ಶನಿವಾರದಿಂದಲೇ ಲಸಿಕೆ ನೀಡಿಕೆ ಆರಂಭಿಸಲಾಗುತ್ತದೆ ಎಂದು ಗುಜರಾತ್‌ ಸರ್ಕಾರ ಹೇಳಿದೆ. ಉತ್ತರ ಪ್ರದೇಶ ಸರ್ಕಾರವು ರಾಜ್ಯದ 7 ಜಿಲ್ಲೆಗಳಲ್ಲಿ 18 ವರ್ಷ ಮೇಲಿನವರಿಗೆ ಲಸಿಕೆ ನೀಡಿಕೆ ಆರಂಭಿಸುವುದಾಗಿ ತಿಳಿಸಿದೆ.

ಆದರೆ, ಲಸಿಕೆ ಲಭ್ಯ ಇರದ ಕಾರಣ ಈಗಾಗಲೇ ಕರ್ನಾಟಕ, ಮಹಾರಾಷ್ಟ್ರ, ತಮಿಳುನಾಡು, ಛತ್ತೀಸ್‌ಗಢ, ದಿಲ್ಲಿ, ಜಮ್ಮು-ಕಾಶ್ಮೀರ, ಪಂಜಾಬ್‌ ಸೇರಿದಂತೆ ಹಲವಾರು ರಾಜ್ಯಗಳು ಮೇ 1ರಿಂದ 18 ವರ್ಷ ಮೇಲಿನವರಿಗೆ ಲಸಿಕೆ ನೀಡಲಾಗದು ಎಂದು ಹೇಳಿಕೊಂಡಿವೆ. ಲಸಿಕೆಗಾಗಿ ಈ ರಾಜ್ಯಗಳು, ಲಸಿಕಾ ಕಂಪನಿಗಳಿಗೆ ಮನವಿ ಮಾಡಿದ್ದರೂ ಲಸಿಕೆ ಪೂರೈಕೆ ಆಗಿಲ್ಲ. ಇದು ಸಮಸ್ಯೆಯ ಮೂಲ.

"

2.45 ಕೋಟಿ ನೋಂದಣಿ:

ಈ ನಡುವೆ, ಕೋವಿನ್‌ ಪೋರ್ಟಲ್‌ನಲ್ಲಿ ಶುಕ್ರವಾರದವರೆಗೆ 18 ಮೇಲ್ಪಟ 2.45 ಕೋಟಿ ಜನರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona