Asianet Suvarna News Asianet Suvarna News

Covid Crisis| ಕೋವಿಡ್‌ ಸಾಂಕ್ರಾಮಿಕ ವೇಳೆ ಕೇರಳದಲ್ಲಿ ಕುಸಿದ ಜನನ ದರ!

* ಕೋವಿಡ್‌ 19 ಸಾಂಕ್ರಾಮಿಕದ ಘೋಷಣೆಯಾದ ನಂತರ ಭಾರತದಲ್ಲಿ ಉಲ್ಟಾ ಆದ ಲೆಕ್ಕಾಚಾರ

* ಕೋವಿಡ್‌ ಸಾಂಕ್ರಾಮಿಕ ವೇಳೆ ಕೇರಳದಲ್ಲಿ ಕುಸಿದ ಜನನ ದರ

* 2020ರ ಜುಲೈನಲ್ಲಿ 37,138 ಮಕ್ಕಳು, 2021ರ ಜುಲೈನಲ್ಲಿ 10,684 ಮಕ್ಕಳು ಜನಿಸಿದ್ದಾರೆ.

Covid 19 Kerala witnesses sharp decline in births during pandemic year pod
Author
Bangalore, First Published Nov 24, 2021, 4:00 AM IST

ತಿರುವನಂತಪುರ(ನ.24): ಕೋವಿಡ್‌ 19 ಸಾಂಕ್ರಾಮಿಕದ (Covid 19 Pandemic) ಘೋಷಣೆಯಾದ ನಂತರ ಭಾರತದಲ್ಲಿ ಜನನ ದರ ಹೆಚ್ಚಾಗುತ್ತದೆ ಎಂದು ಭಾವಿಸಲಾಗಿತ್ತು. ಆದರೆ ಕಳೆದ 9 ತಿಂಗಳಿನಲ್ಲಿ ಕೇರಳದಲ್ಲಿ ಜನನ ದರ (Birth Rate In Kerala) ತೀವ್ರವಾಗಿ ಇಳಿಕೆಯಾಗಿದೆ. ಕೇರಳ ರಾಜ್ಯದ ದತ್ತಾಂಶದ ಪ್ರಕಾರ ರಾಜ್ಯದಲ್ಲಿ ಜನನ ದರ ಸಾಕಷ್ಟು ಕುಸಿತ ಕಂಡಿದೆ. ಲಾಕ್‌ಡೌನ್‌ (Lockdown) ಸಮಯದಲ್ಲಿ ದಂಪತಿಗಳು ಮನೆಯಲ್ಲಿಯೇ ಇರುವುದರಿಂದ ಜನನ ಪ್ರಮಾಣ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಕೇರಳದಲ್ಲಿ ಈ ಪ್ರಮಾಣ ಕುಸಿತ ಕಂಡಿದೆ.  2020ರ ಜುಲೈನಲ್ಲಿ ಕೇರಳದಲ್ಲಿ 37,138 ಮಕ್ಕಳು ಜನಿಸಿದ್ದರು. ಆದರೆ 2021ರ ಜುಲೈನಲ್ಲಿ ಕೇವಲ 10,684 ಮಕ್ಕಳು ಜನಿಸಿದ್ದಾರೆ. ಇದು ಕೋವಿಡ್‌ ಸಮಯದಲ್ಲಿ ಜನನ ದರ ತೀಕ್ಷವಾಗಿ ಇಳಿಕೆ ಕಂಡಿರುವುದನ್ನು ಸೂಚಿಸುತ್ತಿದೆ.

2020ರ ಜನವರಿಯಲ್ಲಿ ಕೇರಳದಲ್ಲಿ 36,414 ಮಕ್ಕಳು ಜನಿಸಿದ್ದರು. ಆದರೆ 2021ರ ಜನವರಿಯಲ್ಲಿ ಶಿಶು ಜನನ 30,335ಕ್ಕೆ ಇಳಿದಿದೆ. ಕೇರಳದಲ್ಲಿ ಸೆಪ್ಟೆಂಬರ್‌ನಲ್ಲಿ ಅತಿ ಕಡಿಮೆ ಜನನ ದರ ದಾಖಲಾಗಿದೆ. ಕೋವಿಡ್‌ ಸಾಂಕ್ರಾಮಿಕದ ಸಮಯದಲ್ಲಿ ಭಾರತದಲ್ಲಿ 11.6 ಕೋಟಿ ಮಕ್ಕಳು ಜನಿಸಲಿದ್ದಾರೆ ಎಂದು ಮಾರ್ಚ್ 2020ರಲ್ಲಿ ಯುನಿಸೆಫ್‌ (UNISEF) ಅಂದಾಜಿಸಿತ್ತು.

ಕೇರಳವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಶೇಕಡಾ 100 ರಷ್ಟು ಜನನ ನೋಂದಣಿಯನ್ನು ಮಾಡುತ್ತಿದೆ, ಅವುಗಳಲ್ಲಿ 98.96 ಶೇಕಡಾ ಸಾಂಸ್ಥಿಕ ಹೆರಿಗೆಗಳಾಗಿವೆ. 2019 ರಲ್ಲಿ ಕೇರಳದಲ್ಲಿ 87.03 ಪ್ರತಿಶತದಷ್ಟು ಜನನಗಳು ಹುಟ್ಟಿದ 21 ದಿನಗಳಲ್ಲಿ ನೋಂದಾಯಿಸಲ್ಪಟ್ಟಿವೆ. ಅನಿವಾಸಿ ಕೇರಳೀಯರ ವ್ಯವಹಾರಗಳ ಇಲಾಖೆಯ (NORKA) ದತ್ತಾಂಶವು ಮೇ 2020 ರಿಂದ ಪ್ರಾರಂಭವಾದ 13 ತಿಂಗಳುಗಳಲ್ಲಿ 14.63 ಲಕ್ಷ ವಲಸಿಗರು ಕೇರಳಕ್ಕೆ ಮುಖ್ಯವಾಗಿ ಮಧ್ಯಪ್ರಾಚ್ಯದಿಂದ ಬಂದಿದ್ದಾರೆ ಎಂದು ತೋರಿಸುತ್ತದೆ.

 1 ವರ್ಷದ ಮಗುವಿಗಾಗಿ ಕೇರಳ- ಆಂಧ್ರ ಜಗಳ, DNA ಟೆಸ್ಟ್‌ವರೆಗೆ ತಲುಪಿದ ಕೇಸ್

 

ಇತ್ತೀಚೆಗಷ್ಟೇ ಕೇರಳದಲ್ಲಿ (Kerala) ಮಗುವನ್ನು ಅಕ್ರಮವಾಗಿ ದತ್ತು (Child Adoption) ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಈ ಮಗುವನ್ನು ಆಂಧ್ರಪ್ರದೇಶದ (Andhra Pradesh) ದಂಪತಿ ದತ್ತು ಪಡೆದು ಒಂದು ವರ್ಷದಿಂದ ಆರೈಕೆ ಮಾಡುತ್ತಿದ್ದರು. ಅದೇ ಸಮಯದಲ್ಲಿ, ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿಯ (KSCCW) ಅಧಿಕಾರಿಗಳು ಇದೀಗ ಈ ಮಗುವನ್ನು ದಂಪತಿಯಿಂದ ವಾಪಸ್ ಪಡೆದು ತಮ್ಮೊಂದಿಗೆ ಮಗುವನ್ನು ಕೇರಳಕ್ಕೆ ಕರೆತಂದಿದ್ದಾರೆ. ಕೇರಳ ರಾಜ್ಯ ಮಕ್ಕಳ ಕಲ್ಯಾಣ ಮಂಡಳಿ (Kerala State Council for Child Welfare) ಅಧಿಕಾರಿಗಳು ತಡರಾತ್ರಿ ಆಂಧ್ರಪ್ರದೇಶ ತಲುಪಿ ಮಗುವನ್ನು ರಾಜ್ಯಕ್ಕೆ ಕರೆತಂದಿದ್ದಾರೆ. ಈ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ (Child welfare Committee) ಮಕ್ಕಳ ಆರೈಕೆ ಸಂಸ್ಥೆಗೆ ಹಸ್ತಾಂತರಿಸಿದೆ.

ಏನಿದು ಪ್ರಕರಣ?

ಆಂಧ್ರಪ್ರದೇಶದ ದಂಪತಿ ಒಂದು ವರ್ಷದ ಗಂಡು ಮಗುವನ್ನು ನೋಡಿಕೊಳ್ಳುತ್ತಿದ್ದರು. ಆದರೆ ಈ ಮಗು ಅನುಪಮಾ ಎಸ್ ಚಂದ್ರನ್ (Anupama S Chandran) ಅವರದ್ದು ಎಂಬ ಸಂದೇಶವಿತ್ತು. ಅನುಪಮಾ ಎಸ್ ಚಂದ್ರನ್ ಪ್ರಕಾರ, ಆಕೆಯ ಪೋಷಕರು ಹುಟ್ಟಿದ ಕೂಡಲೇ ಮಗುವನ್ನು ಅವಳಿಂದ ಬೇರ್ಪಡಿಸಿದರು ಮತ್ತು ಅವಳನ್ನು ಅಪಹರಿಸಿದ್ದರೆನ್ನಲಾಗಿದೆ. ಹೆತ್ತವರ ಒಪ್ಪಿಗೆ ಇಲ್ಲದೇ ಒಂದು ವರ್ಷದ ಹಿಂದೆ ಕೆಎಸ್‌ಸಿಸಿಡಬ್ಲ್ಯು  (KSCCW) ಮೂಲಕ ಮಗುವನ್ನು ದತ್ತು ಕೊಡಲಾಗಿತ್ತು. ಈ ಮಗು ಆಂಧ್ರಪ್ರದೇಶದ ದಂಪತಿಯ ಆರೈಕೆಯಲ್ಲಿತ್ತು.

ಧರಣಿ ನಡೆಸುತ್ತಿದ್ದಾರೆ ಅನುಪಮಾ 

ಅನುಪಮಾ ಎಸ್ ಚಂದ್ರನ್ ಮತ್ತು ಅವರ ಸಂಗಾತಿ ಅಜಿತ್ (Ajith) ತಮ್ಮ ಮಗುವನ್ನು ಹಿಂತಿರುಗಿಸುವಂತೆ ಒತ್ತಾಯಿಸಿ ಕೆಎಸ್‌ಸಿಸಿಡಬ್ಲ್ಯೂ(KSCCW)ಕಚೇರಿಯ ಎದುರು ಕೆಲವು ದಿನಗಳಿಂದ ಧರಣಿ ನಡೆಸುತ್ತಿದ್ದಾರೆ. ಅದೇ ಸಮಯದಲ್ಲಿ, ಮಕ್ಕಳ ಕಲ್ಯಾಣ ಆಯೋಗವು ನವೆಂಬರ್ 18 ರಂದು ಆದೇಶವನ್ನು ಹೊರಡಿಸಿ, ಮಗುವನ್ನು ಮರಳಿ ರಾಜ್ಯಕ್ಕೆ ಕರೆತರಲು KSCCW ಗೆ ನಿರ್ದೇಶನ ನೀಡಿದೆ.

ಆದೇಶದ ನಂತರ ಕೆಎಸ್‌ಸಿಸಿಡಬ್ಲ್ಯು ಅಧಿಕಾರಿಗಳ ನೇತೃತ್ವದ ತಂಡ ಆಂಧ್ರಪ್ರದೇಶಕ್ಕೆ ತೆರಳಿ ದಂಪತಿಯಿಂದ ಮಗುವನ್ನು ಶನಿವಾರ ವಾಪಸ್ ಪಡೆದಿದೆ. ಭಾನುವಾರ ರಾತ್ರಿ ಮಗುವಿನೊಂದಿಗೆ ತಂಡವು ತಿರುವನಂತಪುರಂ ವಿಮಾನ ನಿಲ್ದಾಣ ತಲುಪಿದೆ. CWC ಯ ನಿರ್ದೇಶನದಂತೆ ಮಗುವನ್ನು ಮಕ್ಕಳ ಆರೈಕೆ ಸಂಸ್ಥೆಗೆ ನಿಯೋಜಿಸಲಾಗಿದೆ. CWC ಯ ಆದೇಶದ ಪ್ರಕಾರ, ಮಗುವಿನ ಜೈವಿಕ ಪೋಷಕರನ್ನು ಕಂಡುಹಿಡಿಯಲು DNA ಪರೀಕ್ಷೆಯ ಸಹಾಯವನ್ನು ತೆಗೆದುಕೊಳ್ಳಲಾಗುತ್ತದೆ.

 

Follow Us:
Download App:
  • android
  • ios