Asianet Suvarna News Asianet Suvarna News

ದೇಶದಲ್ಲಿ 70,421 ಕೇಸ್‌: 74 ದಿನದ ಕನಿಷ್ಠ!

* 70,421 ಕೇಸ್‌: 74 ದಿನದ ಕನಿಷ್ಠ, 3921 ಸಾವು

* ಪಾಸಿಟಿವಿಟಿ ದರ 4.72%ಗೆ ಇಳಿಕೆ

* ಸಕ್ರಿಯ ಕೇಸ್‌ 10 ಲಕ್ಷಕ್ಕಿಂತ ಕಡಿಮೆ

* 10 ಲಕ್ಷಕ್ಕಿಂತ ಕಡಿಮೆ 2 ತಿಂಗಳ ಬಳಿಕ ಮೊದಲು

Covid 19 India reports 70421 new cases 3921 deaths in last 24 hours pod
Author
Bangalore, First Published Jun 15, 2021, 8:11 AM IST

ನವದೆಹಲಿ(ಜೂ.15): ಭಾರತದಲ್ಲಿ ಸೋಮವಾರ ಬೆಳಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ 70,421 ಕೋವಿಡ್‌ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 74 ದಿನಗಳಲ್ಲೇ ದಾಖಲಾದ ಕನಿಷ್ಠ ಸಂಖ್ಯೆ. ಇನ್ನು ಇದೇ ಅವಧಿಯಲ್ಲಿ 3,921 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.

ಇದರೊಂದಿಗೆ ದೇಶದ ಒಟ್ಟು ಸೋಂಕಿತರ ಸಂಖ್ಯೆ 2.95 ಕೋಟಿಗೆ ಏರಿಕೆಯಾಗಿದೆ. ಒಟ್ಟು ಸಾವಿಗೀಡಾದವರ ಸಂಖ್ಯೆ 3,74,305ಕ್ಕೆ ತಲುಪಿದೆ.

ಚೀನಾ ಲ್ಯಾಬ್‌ನಲ್ಲೇ ಕೊರೋನಾ ಹುಟ್ಟು, ಅಮೆರಿಕಾದ ಫಂಡಿಂಗ್: ಮೋಸ ಮಾಡಿದ್ದ ಡ್ರ್ಯಾಗನ್!

ದೈನಂದಿನ ಸೋಂಕಿತರ ಪ್ರಮಾಣ ಕೆಲ ದಿನಗಳಿಂದ ಲಕ್ಷಕ್ಕಿಂತ ಕಡಿಮೆ ದಾಖಲಾಗುತ್ತಿರುವ ಪರಿಣಾಮ ಸತತ 2 ತಿಂಗಳ ನಂತರ ಸಕ್ರಿಯ ಸೋಂಕಿತರ ಸಂಖ್ಯೆ 10 ಲಕ್ಷಕ್ಕಿಂತ ಕಡಿಮೆ (9.73 ಲಕ್ಷ ) ದಾಖಲಾಗಿದೆ. ಚೇತರಿಕೆ ಪ್ರಮಾಣ ಶೇ.95.43ಕ್ಕೆ ಏರಿಕೆಯಾಗಿದೆ. ದೈನಂದಿನ ಪಾಸಿಟಿವಿಟಿ ದರವೂ ಶೇ.4.72ಕ್ಕೆ ಕುಸಿದಿದೆ. ದೇಶದ ಒಟ್ಟು ಸೋಂಕಿತರ ಪೈಕಿ 2.81 ಕೋಟಿ ಮಂದಿ ಗುಣಮುಖರಾಗಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Follow Us:
Download App:
  • android
  • ios