ಕೊರೋನಾ ಮಾರ್ಗಸೂಚಿ ಜ.31ರವರೆಗೆ ಮುಂದುವರಿಕೆ| ಹೊಸವರ್ಷಾಚರಣೆ ವೇಳೆ ನಿಗಾ ಇಡಿ: ಕೇಂದ್ರ
ನವದೆಹಲಿ(ಡಿ.29): ಜಾಗತಿಕವಾಗಿ ಕೊರೋನಾ ಪ್ರಕರಣಗಳ ಏರಿಕೆ ಹಾಗೂ ಬ್ರಿಟನ್‌ನಲ್ಲಿ ಕೊರೋನಾ ವೈರಸ್‌ನ ಹೊಸ ಪ್ರಭೇದ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಕೋವಿಡ್-19 ನಿಯಂತ್ರಣ ಕ್ರಮಗಳು ಈಗಿನಂತೆಯೇ ಜ.31ರವರೆಗೂ ಮುಂದುವರಿಯಲಿವೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಸೋಮವಾರ ಹೊಸದಾಗಿ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.
ದೇಶದಲ್ಲಿ ಸದ್ಯ ಕೊರೋನಾ ವೈರಸ್ ಪ್ರಕರಣಗಳ ಸಂಖ್ಯೆ ನಿರಂತರವಾಗ ಇಳಿಕೆ ಕಾಣುತ್ತಿದೆ. ಆದರೆ, ಚಳಿಗಾಲ ಹಾಗೂ ಹೊಸ ವರ್ಷದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಕೋರೋನಾ ಪ್ರಕರಣಗಳು ಏರಿಕೆ ಆಗದಂತೆ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಕಟ್ಟುನಿಟ್ಟಿನ ನಿಗಾ ಇಡಬೇಕು. ಅಲ್ಲದೇ ನಿರೀಕ್ಷಿತ ಲಸಿಕೆ ಅಭಿಯಾನದ ಸಿದ್ಧತೆ ಕೇಂದ್ರದ ಜೊತೆ ಸಹಕರಿಸಬೇಕು ಎಂದು ಸೂಚಿಸಲಾಗಿದೆ.
ಈ ಹಿಂದೆ ಇರುವಂತೆ ಕಂಟೇನ್ಮೆಂಟ್ ವಲಯಗಳನ್ನು ಗುರುತಿಸಿ ನಿಗಾ ವಹಿಸುವ ಕೆಲಸವನ್ನು ಮುಂದುವರಿಸಬೇಕು. ಜೊತೆಗೆ ಈ ವಲಯಗಳಲ್ಲಿ ನಿಯಮಾವಳಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ. ಹೊಸ ವರ್ಷದ ಸಂಭ್ರಮಾಚರಣೆಯ ವೇಳೆ ಸೋಂಕು ಹರಡದಂತೆ ತಡೆಗಟ್ಟಲು ನೈಟ್ ಕಫä್ರ್ಯ ಸೇರಿದಂತೆ ಅಗತ್ಯವಿರುವ ಕ್ರಮಗಳನ್ನು ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕೈಗೊಳ್ಳಬಹುದಾಗಿದೆ. ಆದರೆ, ಕಂಟೇನ್ಮೆಟ್ ವಲಯದ ಹೊರಗಡೆ ಲಾಕ್‌ಡೌನ್ ಹೇರಲು ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯಬೇಕಿದೆ.
Read Exclusive COVID-19 Coronavirus News updates, from Karnataka, India and World at Asianet News Kannada.
Last Updated Dec 29, 2020, 9:38 AM IST