Asianet Suvarna News Asianet Suvarna News

4 ಪಟ್ಟು ಹೆಚ್ಚು ಆಕ್ಸಿಜನ್‌ಗೆ ಬೇಡಿಕೆ ಇಟ್ಟಿದ್ದ ದೆಹಲಿ: ಇತರ ರಾಜ್ಯದಲ್ಲಿ ಹಾಹಾಕಾರ!

* ದೇಶದಲ್ಲಿ ಕೊರೋನಾ ಎರಡನೇ ಅಲೆ ಮಧ್ಯೆ ದೆಹಲಿ ಸರ್ಕಾರದ ಶಾಕಿಂಗ್ ನಡೆ

* 4 ಪಟ್ಟು ಹೆಚ್ಚು ಆಮ್ಲಜನಕ್ಕೆ ಬೇಡಿಕೆ ಇಟ್ಟಿದ್ದ ದೆಹಲಿ

* ಸುಪ್ರಿಂ ಕೋರ್ಟ್‌ ಸಮಿತಿಯ ವರದಿಯಲ್ಲಿ ಬಯಲಾಯ್ತು ಸತ್ಯ

Covid 19 Delhi inflated oxygen need by 4 times during peak says SC panel pod
Author
Bangalore, First Published Jun 25, 2021, 12:34 PM IST

ನವದೆಹಲಿ(ಜೂ.25): ಕೊರೋನಾ ಮೊದಲನೇ ಅಲೆ ಬೆನ್ನಲ್ಲೇ ದೇಶವನ್ನು ಕಾಡಿದ್ದ ಎರಡನೇ ಅಲೆ ಗಾಯದ ಮೇಲೆ ಬರೆ ಎಳೆದಂತಿತ್ತು. ಈ ಮಧ್ಯೆ ಅನೇಕ ರಾಜ್ಯಗಳಲ್ಲಿ ಆಮ್ಲಜನಕ ಹಾಗೂ ಔಷಧಗಳ ಕೊರತೆಯೂ ಎದುರಾಗಿತ್ತು. ಆದರೀಗ ಆಮ್ಲಜನಕ ಪೂರೈಕೆ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ ವರದಿಯಲ್ಲಿ ಶಾಕಿಂಗ್ ಮಾಹಿತಿ ಬಯಲಾಗಿದೆ. ಹೌದು ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿ ದೆಹಲಿ ಸರಕಾರ ಆಕ್ಸಿಜನ್ ಕೊರತೆಯನ್ನು ಮುಂದಿಟ್ಟುಕೊಂಡು 4 ಪಟ್ಟು ಹೆಚ್ಚು ಆಮ್ಲಕಜನಕ್ಕೆ ಬೇಡಿಕೆ ಇಟ್ಟಿತ್ತು ಎಂದು ಸುಪ್ರೀಂಕೋರ್ಟ್‌ನ ಸಮಿತಿಯೊಂದು ತನ್ನ ಮಧ್ಯಂತರ ವರದಿಯಲ್ಲಿ ಹೇಳಿದೆ.

ಹೌದು ಪ್ರತಿ ಬೆಡ್​ಗೆ  ಆಕ್ಸಿಜನ್ ಬಳಕೆ  289 ಮೆಟ್ರಿಕ್ ಟನ್ ಎಂದು ಆಗಿದ್ದರೂ ಇದರ ನಾಲ್ಕು ಪಟ್ಟು ಅಂದರೆ  1,140 ಮೆಟ್ರಿಕ್ ಟನ್ ಅಗತ್ಯ ಬಂದಿದೆ ಎಂದು ದೆಹಲಿ ಸರ್ಕಾರ ಹೇಳುತ್ತಿರುವುದಾಗಿ ಸುಪ್ರೀಂಕೋರ್ಟ್ ನಿಯುಕ್ತ  ಆಕ್ಸಿಜನ್ ಲೆಕ್ಕ ಪರಿಶೋಧನಾ ಸಮಿತಿ ಮಧ್ಯಂತರ ವರದಿಯಲ್ಲಿ ಹೇಳಿದೆ. ಕೋವಿಡ್ 19 ಎರಡನೆಯ ಅಲೆ ವಿಕೋಪಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಕ್ಸಿಜನ್ ಕೊರತೆಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ವಿರುದ್ಧ ಆರೋಪಗಳನ್ನು ಮಾಡಿದ್ದ ದಿಲ್ಲಿಯ ಅರವಿಂದ್ ಕೇಜ್ರಿವಾಲ್ ಸರಕಾರ ಈ ವರದಿಯಿಂದ ಇಕ್ಕಟ್ಟಿಗೆ ಸಿಲುಕಿದೆ.

ಸುಪ್ರೀಂ ಕೋರ್ಟ್‌ನ ಈ ಸಮಿತಿಯಲ್ಲಿ ಏಮ್ಸ್ ನಿರ್ದೇಶಕ ರಣ್​ದೀಪ್ ಗುಲೇರಿಯಾ ನೇತೃತ್ವದ ಸಮಿತಿಯಲ್ಲಿ ದೆಹಲಿ ಸರ್ಕಾರದ ಪ್ರಧಾನ ಗೃಹ ಕಾರ್ಯದರ್ಶಿ ಭೂಪಿಂದರ್ ಭಲ್ಲಾ, ಮ್ಯಾಕ್ಸ್ ಹೆಲ್ತ್‌ಕೇರ್ ನಿರ್ದೇಶಕ ಸಂದೀಪ್ ಬುದ್ಧಿರಾಜ ಮತ್ತು ಕೇಂದ್ರ ಜಲಶಕ್ತಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಸುಬೋಧ್ ಯಾದವ್ ಇದ್ದಾರೆ.

ಇತರ ರಾಜ್ಯಗಳಲ್ಲಿ ಆಮ್ಲಜನಕ ಕೊರತೆ: 

ಏಪ್ರಿಲ್ 25 ರಿಂದ ಮೇ 10ರ ಅವಧಿಯಲ್ಲಿ ದೆಹಲಿಯ ಸರಾಸರಿ ಆಕ್ಸಿಜನ್ ಬಳಕೆಯು 284 ಮೆಟ್ರಿಕ್ ಟನ್‌ನಿಂದ 372 ಮೆಟ್ರಿಕ್ ಟನ್‌ ನಡುವೆ ಇತ್ತು. ಈ ವೇಳೆ ಅಗತ್ಯಕ್ಕಿಂತಲೂ ಹೆಚ್ಚಿನ ಪ್ರಮಾಣದ ಆಕ್ಸಿಜನ್ ದೆಹಲಿಗೆ ಪೂರೈಸಿದ್ದರಿಂದ ಅತ್ಯಧಿಕ ಪ್ರಕರಣಗಳ ಸಮಸ್ಯೆ ಎದುರಿಸುತ್ತಿದ್ದ 12 ಇತರೆ ರಾಜ್ಯಗಳಿಗೆ ಆಕ್ಸಿಜನ್ ಬಿಕ್ಕಟ್ಟು ಎದುರಾಗಿತ್ತು ಎಂದು ಸುಪ್ರೀಂಕೋರ್ಟ್ ನೇಮಿಸಿರುವ ಆಕ್ಸಿಜನ್ ಆಡಿಟ್ ಸಬ್ ಗ್ರೂಪ್ ವರದಿ ಹೇಳಿದೆ.

ಕಡಿಮೆ ಹಾಸಿಗೆಗಳನ್ನು ಹೊಂದಿರುವ ಆಮ್ಲಜನಕದ ಹೆಚ್ಚಿನ ಬಳಕೆಗಾಗಿ ನಾಲ್ಕು ದೆಹಲಿ ಆಸ್ಪತ್ರೆಗಳನ್ನು ಕರೆಸಲಾಗಿದೆ. ಸಿಂಘಾಲ್ ಆಸ್ಪತ್ರೆ, ಅರುಣಾ ಆಸಿಫ್ ಅಲಿ ಆಸ್ಪತ್ರೆ, ಇಎಸ್ಐಸಿ ಮಾದರಿ ಆಸ್ಪತ್ರೆ ಮತ್ತು ಲಿಫೆರೆ ಆಸ್ಪತ್ರೆ ಕೆಲವು ಹಾಸಿಗೆಗಳನ್ನು ಹೊಂದಿದ್ದವು ಮತ್ತು ಅವುಗಳ ಡೇಟಾ ತಪ್ಪಾಗಿದೆ. ಇದು ದೆಹಲಿಯಲ್ಲಿ ಆಮ್ಲಜನಕದ ಅಗತ್ಯಕ್ಕಿಂತ ಹೆಚ್ಚು  ಬಳಕೆಗೆ ಕಾರಣವಾಯಿತು ಎಂದು ವರದಿ ಹೇಳುತ್ತದೆ. ದೆಹಲಿ ಆಸ್ಪತ್ರೆಗಳು ನೀಡಿದ ದತ್ತಾಂಶದಲ್ಲಿನ ವ್ಯತ್ಯಾಸಗಳನ್ನು ಸಮಿತಿ ಗಮನಿಸಿದೆ.

Follow Us:
Download App:
  • android
  • ios