ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ವಿವಿಧ ರಾಜ್ಯಗಳಿಂದ ನಾನಾ ಕ್ರಮ| ತೆಲಂಗಾಣ ನೈಟ್‌ ಕರ್ಫ್ಯೂ; ಜಾರ್ಖಂಡ್‌, ಮಿಜೋರಂ ಲಾಕ್!‌

ನವದೆಹಲಿ(ಏ.21): ಕೊರೋನಾ ಸೋಂಕಿನ ನಿಯಂತ್ರಣಕ್ಕಾಗಿ ವಿವಿಧ ರಾಜ್ಯಗಳು ನಾನಾ ಕ್ರಮ ಜರುಗಿಸುತ್ತಿವೆ. ತೆಲಂಗಾಣದಲ್ಲಿ ರಾತ್ರಿ ಕಫä್ರ್ಯ, ಮಿಜೋರಂ ಹಾಗೂ ಜಾರ್ಖಂಡ್‌ನಲ್ಲಿ ಲಾಕ್‌ಡೌನ್‌ ಘೋಷಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

‘ರಾಜ್ಯಾದ್ಯಂತ ಮಂಗಳವಾರದಿಂದಲೇ ರಾತ್ರಿ ಕರ್ಫ್ಯೂ ಜಾರಿಯಾಗಿದ್ದು, ಏ.30ರವರೆಗೆ ಮುಂದುವರಿಯಲಿದೆ. ನಿತ್ಯ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ’ ಎಂದು ತೆಲಂಗಾಣ ಹೇಳಿದೆ.

ಮತ್ತೊಂದೆಡೆ ಏ.22ರಿಂದ 29ರವರೆಗೆ ‘ಸುರಕ್ಷತಾ ಸಪ್ತಾಹ’ದ ಹೆಸರಿನಲ್ಲಿ ಜಾರ್ಖಂಡ್‌ನಲ್ಲಿ ಲಾಕ್‌ಡೌನ್‌ ಪ್ರಕಟಿಸಲಾಗಿದೆ. ಮಿಜೋರಂನಲ್ಲೂ ಏ.20ರಿಂದ 26ರವರೆಗೆ ಕೊರೋನಾ ನಿಗ್ರಹಕ್ಕಾಗಿ ಐಜ್ವಾಲ್‌ ಸೇರಿದಂತೆ 10 ಜಿಲ್ಲಾ ಕೇಂದ್ರಗಳಲ್ಲಿ 7 ದಿನಗಳ ಲಾಕ್‌ಡೌನ್‌ ಘೋಷಣೆ ಮಾಡಲಾಗಿದೆ.

ಆದಾಗ್ಯೂ, ಗ್ರಾಮಗಳ ಮಧ್ಯೆ ಹಾಗೂ ರಾಜ್ಯದ ಒಳಗಿನ ಚಟುವಟಿಕೆಗಳಿಗಾಗಿ ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.