ನವದೆಹಲಿ(ಸೆ.16): ದಿನದಿಂದ ದಿನಕ್ಕೆ ಏರುಗತಿಯಲ್ಲಿ ಸಾಗುತ್ತಿರುವ ಕೊರೋನಾ ವೈರಸ್‌ ಪ್ರಕರಣಗಳು ಭಾರತದಲ್ಲಿ ಮಂಗಳವಾರ 50 ಲಕ್ಷದ ಗಡಿ ದಾಟಿವೆ. ಈ ಮೂಲಕ ಅಮೆರಿಕ ಬಳಿಕ 50 ಲಕ್ಷ ಪ್ರಕರಣಗಳು ದಾಖಲಾದ ಎರಡನೇ ದೇಶ ಭಾರತವಾಗಿದೆ.

ಮಾಸ್ಕ್‌ ಧರಿಸೋವಾಗ ಎಚ್ಚರ, ಬಿಗಿಯಾದ್ರೆ ಕೆಡುತ್ತೆ ಮುಖದ ಅಂದ!

ಮಂಗಳವಾರ 90,417 ಕೊರೋನಾ ವೈರಸ್‌ ಪ್ರಕರಣಗಳು ದೇಶದಲ್ಲಿ ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 50.05 ಲಕ್ಷಕ್ಕೆ ಏರಿಕೆ ಆಗಿದೆ. 67.54 ಲಕ್ಷ ಸೋಂಕಿತರೊಂದಿಗೆ ಅಮೆರಿಕ ಅಗ್ರ ಸ್ಥಾನದಲ್ಲಿದೆ. ಇನ್ನು ಸೋಂಕಿನಿಂದ ಭಾರತದಲ್ಲಿ ಮಂಗಳವಾರ 1282 ಮಂದಿ ಮೃತಪಟ್ಟಿದ್ದು, ಸಾವಿಗೀಡಾದವರ ಒಟ್ಟು ಸಂಖ್ಯೆ 81,989ಕ್ಕೆ ತಲುಪಿದೆ.

ಮಾಸ್ಕ್ ಧರಿಸದ ಮಂದಿಗೆ ಕೊರೋನಾದಿಂದ ಸತ್ತವರ ದೇಹ ಹೂಳುವ ಗುಂಡಿ ತೋಡುವ ಶಿಕ್ಷೆ!

ಗುಣಮುಖರು 40 ಲಕ್ಷ ಸನಿಹಕ್ಕೆ:

ಇದೇ ವೇಳೆ ಕೊರೋನಾದಿಂದ ಒಂದೇ ದಿನ 80,502 ಮಂದಿ ಚೇತರಿಸಿಕೊಂಡಿದ್ದು, ಗುಣಮುಖರಾದವರ ಸಂಖ್ಯೆ 39.26 ಲಕ್ಷಕ್ಕೆ ತಲುಪಿದೆ. ಈ ಮೂಲಕ ಜಾಗತಿಕವಾಗಿ ಅತಿ ಹೆಚ್ಚು ಮಂದಿ ಕೊರೋನಾದಿಂದ ಗುಣಮುಖರಾದ ದೇಶಗಳ ಪೈಕಿ ಭಾರತವೂ ಒಂದೆನಿಸಿದೆ. ಅಮೆರಿಕದಲ್ಲಿ ಅತಿ ಹೆಚ್ಚು ಅಂದರೆ 40.29 ಲಕ್ಷ ಮಂದಿ ಕೊರೋನಾದಿಂದ ಗುಣಮುಖರಾಗಿದ್ದಾರೆ. ಇನ್ನು ಭಾರತದಲ್ಲಿ ಕೊರೋನಾ ಚೇತರಿಕೆ ಪ್ರಮಾಣ ಶೇ.78.28ರಷ್ಟಿದೆ. 10 ಲಕ್ಷದಷ್ಟುಸಕ್ರಿಯ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ.