ಕೊರೋನಾ ಮಾನವ ನಿರ್ಮಿತ, ನೈಸರ್ಗಿಕ ವೈರಸ್ ಅಲ್ಲ: ನಿತಿನ್ ಗಡ್ಕರಿ
ಕೋರೋನಾ ವೈರಸ್ ನಿಸರ್ಗದಿಂದ ಬಂದಿದ್ದಲ್ಲ/ ಇದು ಮಾನವ ನಿರ್ಮಿತ/ ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿಕೆ/ ಸಂದರ್ಶನವೊಂದರಲ್ಲಿ ಮಾತನಾಡಿದ ಗಡ್ಕರಿ
ನವದೆಹಲಿ(ಮೇ 14) ಚೀನಾದಿಂದ ಹೊರಟ ಕೊರೋನಾ ವೈರಸ್ ಎಂಬ ಮಹಾಮಾರಿ ಜಗತ್ತನ್ನೇ ಸುಡುತ್ತಿದೆ. ಕೊರೋನಾ ವೈರಸ್ ನೈಸರ್ಗಿಕವಾದ್ದಲ್ಲ.. ಇದು ಮಾನವ ನಿರ್ಮಿತ ಹೌದು ಹೀಗೇಂದು ಹೇಳಿಕೆ ನೀಡಿರುವುದು ಕೇಂದ್ರ ಸಚಿವ ನಿತಿನ್ ಗಡ್ಕರಿ
ಲ್ಯಾಬ್‌ನಲ್ಲಿ ಈ ವೈರಸ್‌ಗೆ ಜನ್ಮ ನೀಡಲಾಗಿದೆ ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಕೊರೋನಾ ವೈರಸ್‌ನೊಂದಿಗೆ ಬದುಕುವುದನ್ನು ನಾವು ಕಲಿಯಬೇಕಿದೆ ಎಂದು ಹೇಳಿದ್ದಾರೆ.
ಇದೇ ಮೊದಲ ಸಾರಿ ಕೇಂದ್ರ ಸರ್ಕಾರ ಕೊರೋನಾ ವೈರಸ್ ಬಗ್ಗೆ ಬಹಿರಂಗ ಹೇಳಿಕೆ ನೀಡಿದೆ. ಸಾಮಾಜಿಕ ಅಂತರ ಹಾಗೂ ಸ್ಯಾನಿಟೈಸರ್ ಬಳಕೆಯನ್ನು ಮುಂದುವರೆಸಿಕೊಂಡು ಹೋಗಬೇಕಿದೆ ಎಂದು ಗಡ್ಕರಿ ಸಲಹೆ ನೀಡಿದ್ದಾರೆ.
ಗೋವಾಕ್ಕೆ ಶುರುವಾಯಿತು ಕೊರೋನಾ ಕಂಟಕ
ಕೇಂದ್ರ ಸರ್ಕಾರ ಜನರ ರಕ್ಷಣೆಗೆ ಬದ್ಧವಾಗಿದೆ. ವಿಶೇಷ ಪ್ಯಾಕೇಜ್ ಸಹ ನೀಡಲಾಗಿದೆ. ಲಸಿಕೆ ಸಿದ್ಧಮಾಡುವ ಕೆಲಸವೂ ಚಾಲ್ತಿಯಲ್ಲಿದೆ ಎಂದು ತಿಳಿಸಿದ್ದಾರೆ.
ಚೀನಾದ ವುಹಾನ್ ಲ್ಯಾಬ್ ನಲ್ಲಿ ವೈರಸ್ ಕಾಣಿಸಿಕೊಂಡಿದ್ದು ಮೊದಲು ವರದಿಯಾಗಿತ್ತು. ಅದಾದ ಮೇಲೆ ಇಡೀ ಪ್ರಪಂಚಕ್ಕೆ ವ್ಯಾಪಿಸಿತ್ತು. ವಿಶ್ವದ 180ಕ್ಕೂ ಅಧಿಕ ರಾಷ್ಟ್ರಗಳಲ್ಲಿ ಮರಣ ಮೃದಂಗ ಮುಂದುವರೆಸಿರುವ ಮಾರಕ ಕೊರೋನಾ ಸೋಂಕಿನಿಂದ ಈವರೆಗೆ ಮೃತಪಟ್ಟವರ ಸಂಖ್ಯೆ 290,269 ಹಾಗೂ ಸೋಂಕಿತರ ಸಂಖ್ಯೆ 4,238,703ಕ್ಕೆ ಏರಿಕೆಯಾಗಿದ್ದು ಅಟ್ಟಹಾಸ ಮುಂದುವರಿದೇ ಇದೆ.