ಕೋವಿಡ್ ಎನ್ನುವ ವೈರಸ್ ದೇಹವನ್ನು ಹೊಕ್ಕು ಕಾಡುತ್ತಿದೆ. ಲಕ್ಷಾಂತರ ಮಂದಿಯ ಪ್ರಾಣ ಹರಣ ಮಾಡಿದೆ. ಎಚ್ಚರ ತಪ್ಪಿದ್ರೆ ಕಾಡೋದು ಖಚಿತ. ಇದೇ ವೇಳೆ ಸಮೀಕ್ಷೆಯೊಂದು ಮುಂಬೈ ಮಹಿಳೆಯರಲ್ಲಿ ಪ್ರತಿಕಾಯ ಶಕ್ತಿ ಹೆಚ್ಚೆಂದು ಹೇಳಿದೆ.
ಮುಂಬೈ (ಏ.26): ಕೊರೋನಾ ವೈರಸ್ ದ್ವಿತೀಯ ಅಲೆಯಲ್ಲಿ ದೇಶದಲ್ಲೇ ಮುಂಚೂಣಿಯಲ್ಲಿರುವ ನಗರಗಳಲ್ಲಿ ಒಂದಾದ ಮುಂಬೈನಲ್ಲಿ ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚು ಪ್ರತಿಕಾಯ ಶಕ್ತಿಗಳಿವೆ ಎಂದು ಸೀರೋ ಸಮೀಕ್ಷೆಯಲ್ಲಿ ತಿಳಿದುಬಂದಿದೆ.
ಜನರ ರಕ್ತ ಪರೀಕ್ಷೆ ನಡೆಸಿದಾಗ ಬರುವ ಪ್ರತಿಕಾಯದ ಪಾಸಿಟಿವಿಟಿ ಆಧರಿಸಿ ಸೀರೋ ಸಮೀಕ್ಷೆಯ ಫಲಿತಾಂಶ ನಿರ್ಧರಿಸಲಾಗುತ್ತದೆ. ಪಾಸಿಟಿವಿಟಿ ಅಂಶ ಹೆಚ್ಚಿದ್ದರೆ ಅದು ಉತ್ತಮ ಎಂದರ್ಥ.
ಸಸ್ಯಾಹಾರಿಗಳು, ಧೂಮಪಾನಿಗಳಲ್ಲಿ ಕೊರೋನಾ ಕಮ್ಮಿ .
ಮುಂಬೈ ಮಹಾನಗರ ಪಾಲಿಕೆ ನಡೆಸಿದ ಈ ಸಮೀಕ್ಷೆಯಲ್ಲಿ ಮಹಿಳೆಯರಲ್ಲಿ ಶೇ.37.12 ಪಾಸಿಟಿವಿಟಿ ಕಂಡುಬಂದಿದೆ. ಪುರುಷರಲ್ಲಿ ಪಾಸಿಟಿವಿಟಿ ಪ್ರಮಾಣ ಕೇವಲ ಶೇ.35.2 ಕಂಡುಬಂದಿದೆ.
14 ದಿನ ಕರ್ನಾಟಕ ಲಾಕ್‌ಡೌನ್: ಏನಿರುತ್ತೆ? ಏನಿರಲ್ಲ? ಇಲ್ಲಿದೆ ಮಾಹಿತಿ ...
ಅಂತೆಯೇ ಮುಂಬೈನ ಕೊಳೆಗೇರಿಗಳಿಗಿಂತ ಸುಸಜ್ಜಿತ ಪ್ರದೇಶಗಳಲ್ಲಿ ಸೋಂಕು ಅಧಿಕವಾಗಿ ಏರುತ್ತಿದೆ ಎಂದೂ ಗೊತ್ತಾಗಿದೆ. 10,197 ರಕ್ತದ ಮಾದರಿ ಪರೀಕ್ಷಿಸಿ ಸಮೀಕ್ಷೆ ನಡೆಸಲಾಗಿತ್ತು.
ಈಗಾಗಲೇ ದೇಶದಲ್ಲಿ ಕೊರೋನಾ ಮಹಾಮಾರಿ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಭಾರೀ ಪ್ರಮಾಣದಲ್ಲಿ ಕಾಡುತ್ತಿದೆ. ಸೋಂಕು ಸಾವಿನ ಪ್ರಮಾಣವೂ ಅತ್ಯಧಿಕವಾಗುತ್ತಿದೆ.
