ಹೈದ್ರಾಬಾದ್‌(ಜ.06): ಕೇಂದ್ರ ಸರ್ಕಾರದ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿರುವ ಸ್ವದೇಶಿ ಕೊರೋನಾ ಲಸಿಕೆ, ಕೋವ್ಯಾಕ್ಸಿನ್‌ ಅನ್ನು 2 ವರ್ಷದ ಮಕ್ಕಳ ಮೇಲೂ ಪ್ರಯೋಗಕ್ಕೆ ಒಳಪಡಿಸಲು ನಿರ್ಧರಿಸಲಾಗಿದೆ. ಇಂಥ ಪ್ರಯತ್ನ ವಿಶ್ವದಲ್ಲೇ ಮೊದಲಾದ ಕಾರಣ, ಈ ಬೆಳವಣಿಗೆ ಸಾಕಷ್ಟುಮಹತ್ವ ಪಡೆದುಕೊಂಡಿದೆ.

ಈ ಕುರಿತು ಹೇಳಿಕೆ ನೀಡಿರುವ ಕೋವ್ಯಾಕ್ಸಿನ್‌ ಉತ್ಪಾದನಾ ಸಂಸ್ಥೆಯಾಗಿರುವ ಹೈದ್ರಾಬಾದ್‌ ಮೂಲದ ಭಾರತ್‌ ಬಯೋಟೆಕ್‌ ಮುಖ್ಯಸ್ಥ ಡಾ.ಕೃಷ್ಣಾ ಎಲ್ಲಾ, ಮುಂದಿನ ಹಂತದಲ್ಲಿ ನಾವು 2ರಿಂದ 15 ವರ್ಷ ವಯಸ್ಸಿನ ಮಕ್ಕಳ ಮೇಲೆ ಲಸಿಕೆ ಪ್ರಯೋಗ ಮಾಡಲಿದ್ದೇವೆ. ಈ ಸಂಬಂಧ ನಾವು ವಿಷಯ ತಜ್ಞರ ಸಮಿತಿಗೆ ಶೀಘ್ರವೇ ಅರ್ಜಿ ಸಲ್ಲಿಸಲಿದ್ದೇವೆ’ ಎಂದು ತಿಳಿಸಿದ್ದಾರೆ.

ಈಗಾಗಲೇ 12 ವರ್ಷದ ಮಕ್ಕಳ ಮೇಲೆ ಪ್ರಯೋಗಿಸಿದ ವಿಶ್ವದ ಮೊದಲ ಕೊರೋನಾ ಲಸಿಕೆ ಎಂಬ ದಾಖಲೆಯನ್ನೂ ಕೋವ್ಯಾಕ್ಸಿನ್‌ ಹೊಂದಿದೆ.