Asianet Suvarna News Asianet Suvarna News

ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಬೆಲೆ ನಿಗದಿ: ಇಲ್ಲಿದೆ ದರ ಪಟ್ಟಿ

ಭಾರತ್ ಬಯೋಟೆಕ್ ಕಂಪನಿ ಉತ್ಪಾದಿಸುತ್ತಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಮಾರಾಟಕ್ಕೆ ಸಂಸ್ಥೆ ಬೆಲೆ ನಿಗದಿ ಮಾಡಿದೆ.

Covaxin To Cost Rs 1200 For Private Hospitals 600 For States rbj
Author
Bengaluru, First Published Apr 24, 2021, 11:21 PM IST

ನವದೆಹಲಿ, (ಏ.24): ಭಾರತ್ ಬಯೋಟೆಕ್ ಕಂಪನಿ ಉತ್ಪಾದಿಸುತ್ತಿರುವ ಕೊರೋನಾ ಲಸಿಕೆ ಕೋವ್ಯಾಕ್ಸಿನ್ ಮಾರಾಟಕ್ಕೆ ಸಂಸ್ಥೆ ಬೆಲೆ ನಿಗದಿ ಮಾಡಿದ್ದು, ಸರ್ಕಾರಗಳಿಗೆ, ಖಾಸಗಿ ಆಸ್ಪತ್ರೆಗಳಿಗೆ ಬೇರೆ-ಬೇರೆ ದರ ನಿಗದಿಪಡಿಸಿದೆ.

ಹೌದು.. ಒಂದು ಡೋಸ್​​ಗೆ ರಾಜ್ಯ ಸರ್ಕಾರಗಳಿಗೆ 600 ರೂಪಾಯಿ, ಖಾಸಗಿ ಆಸ್ಪತ್ರೆಗೆ 1,200 ರೂಪಾಯಿ ದರದಲ್ಲಿ ಪೂರೈಕೆ ಮಾಡುವುದಾಗಿ ಭಾರತ್ ಬಯೋಟೆಕ್ ಕಂಪನಿ ತಿಳಿಸಿದೆ.

ಸ್ವದೇಶಿ ಕೋವ್ಯಾಕ್ಸಿನ್‌ ಲಸಿಕೆ ಶೇ.78ರಷ್ಟು ಪರಿಣಾಮಕಾರಿ!

ಕೇಂದ್ರ ಸರ್ಕಾರ ನೀತಿಯಂತೆ ಸಂಸ್ಥೆ ಉತ್ಪಾದಿಸುವ ಲಸಿಕೆಯ ಡೋಸ್​​ಗಳ ಪ್ರಮಾಣದಲ್ಲಿ ಶೇ. 50ರಷ್ಟು ಲಸಿಕೆಗಳನ್ನು 150 ರೂಪಾಯಿಯಂತೆ ಕೇಂದ್ರ ಸರ್ಕಾರಕ್ಕೆ ಪೂರೈಕೆ ಮಾಡಲಿದೆ. 

ಇನ್ನುಳಿದ ಲಸಿಕೆಗಳಲ್ಲಿ ರಾಜ್ಯ ಸರ್ಕಾರ ಹಾಗೂ ಖಾಸಗಿ ಆಸ್ಪತ್ರೆಗಳಿಗೆ ಹಾಗೂ ವಿದೇಶಗಳಿಗೆ ಪೂರೈಕೆ ಆಗಲಿದೆ. ಇನ್ನು ಪ್ರತಿ ಡೋಸ್​ ವಿದೇಶಿ ರಫ್ತಿಗೆ 15 ರಿಂದ 20 ಡಾಲರ್​ ದರವನ್ನು ಭಾರತ್ ಬಯೋಟೆಕ್ ನಿಗದಿ ಮಾಡಿದೆ. 

ಅಂದಹಾಗೆ ಕೋವಿಶೀಲ್ಡ್ ಪ್ರತಿ ಡೋಸ್​ ಲಸಿಕೆ ಬೆಲೆ ರಾಜ್ಯ ಸರ್ಕಾರಕ್ಕೆ 400 ರೂಪಾಯಿ ಮತ್ತು ಖಾಸಗಿ ಆಸ್ಪತ್ರೆಗೆ 600 ರೂಪಾಯಿ ಬೆಲೆ ನಿಗದಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Follow Us:
Download App:
  • android
  • ios