ಚಿನ್ನ ಹೂಡಿಕೆ ಸ್ಕೀಂ ವಂಚನೆ: ಶಿಲ್ಪಾ ಶೆಟ್ಟಿ ವಿರುದ್ಧ ತನಿಖೆಗೆ ಮುಂಬೈ ಕೋರ್ಟ್ ಆದೇಶ
2019ರಲ್ಲಿ ಪೃಥ್ವಿರಾಜ್ ಕೊಠಾರಿ ಎಂಬುವರು ಶಿಲ್ಪಾ ಶೆಟ್ಟಿ ಅವರ ಕಂಪನಿಯಲ್ಲಿ 90 ಲಕ್ಷ ರು. ಹೂಡಿಕೆ ಮಾಡಿದ್ದರು. ಆದರೆ ಇದರ ಅವಧಿ ಪೂರ್ಣಗೊಂಡ ಬಳಿಕ ಹಣದ ಮೌಲ್ಯದಷ್ಟು ಚಿನ್ನವನ್ನು ಶಿಲ್ಪಾ ಶೆಟ್ಟಿ ಅವರ ಕಂಪನಿ ನೀಡಿಲ್ಲ.
ಮುಂಬೈ(ಜೂ.14): ಹಣ ಹೂಡಿಕೆ ಮಾಡಿ ಚಿನ್ನ ಪಡೆಯುವ ಯೋಜನೆಯಲ್ಲಿ ವಂಚನೆ ಮಾಡಲಾಗಿದೆ ಎಂಬ ಆರೋಪದ ಪ್ರಕರಣದಲ್ಲಿ ನಟಿ ಶಿಲ್ಪಾ ಶೆಟ್ಟಿ, ಅವರ ಪತಿ ರಾಜ್ ಕುಂದ್ರಾ, ಹಾಗೂ ಇನ್ನಿತರೆ ಮೂವರ ವಿರುದ್ಧ ತನಿಖೆ ನಡೆಸುವಂತೆ ಸ್ಥಳೀಯ ನ್ಯಾಯಾಲಯ ಪೊಲೀಸರಿಗೆ ಸೂಚಿಸಿದೆ.
ಮೇಲ್ನೋಟಕ್ಕೆ ಆರೋಪ ಕಾಣಿಸುತ್ತಿದೆ. ಈ ಕುರಿತು ತನಿಖೆ ಮಾಡಬೇಕು ಎಂದು ಕೋರ್ಟ್ ಹೇಳಿದೆ.
ಇಡಿಯಿಂದ ಜುಹುವಿನಲ್ಲಿರುವ ಶಿಲ್ಪಾ ಶೆಟ್ಟಿ ಫ್ಲಾಟ್, ರಾಜ್ ಕುಂದ್ರಾಗೆ ಸೇರಿದ 97 ಕೋಟಿ ಆಸ್ತಿ ಜಪ್ತಿ
2019ರಲ್ಲಿ ಪೃಥ್ವಿರಾಜ್ ಕೊಠಾರಿ ಎಂಬುವರು ಶಿಲ್ಪಾ ಶೆಟ್ಟಿ ಅವರ ಕಂಪನಿಯಲ್ಲಿ 90 ಲಕ್ಷ ರು. ಹೂಡಿಕೆ ಮಾಡಿದ್ದರು. ಆದರೆ ಇದರ ಅವಧಿ ಪೂರ್ಣಗೊಂಡ ಬಳಿಕ ಹಣದ ಮೌಲ್ಯದಷ್ಟು ಚಿನ್ನವನ್ನು ಶಿಲ್ಪಾ ಶೆಟ್ಟಿ ಅವರ ಕಂಪನಿ ನೀಡಿಲ್ಲ. ಇದು ವಂಚಿಸಿದೆ ಎಂದು ಪ್ರಕರಣ ದಾಖಲಿಸಿದ್ದರು.