Asianet Suvarna News Asianet Suvarna News

ಐತಿಹಾಸಿಕ ಜಿ20 ಶೃಂಗ ಸಭೆಗೆ ಕ್ಷಣಗಣನೆ: ವಿಶ್ವದ ಗಣ್ಯಾತಿಗಣ್ಯರ ಆಗಮನ: ಎಲ್ಲೆಡೆ ಬಿಗಿ ಭದ್ರತೆ

ಜಿ20 ಶೃಂಗ ಸಭೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಗುರುವಾರವೇ ನವದೆಹಲಿಗೆ ಬಂದಿಳಿದಿದ್ದಾರೆ. ಇನ್ನು ಕೆಲ ದೇಶಗಳ ಗಣ್ಯರು ಈಗಾಗಲೇ ಆಗಮಿಸಿದ್ದರೆ, ಉಳಿದ ಕೆಲವರು ಶನಿವಾರ ಆಗಮಿಸಲಿದ್ದಾರೆ.

Countdown to historic G20 summit Arrival of world dignitaries to national capital Tight security everywhere in delhi akb
Author
First Published Sep 8, 2023, 8:57 AM IST

ನವದೆಹಲಿ: ಜಿ20 ಶೃಂಗ ಸಭೆಯಲ್ಲಿ ಭಾಗವಹಿಸುವ ನಿಟ್ಟಿನಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ಕೆನಡಾ ಪ್ರಧಾನಿ ಜಸ್ಟಿನ್‌ ಟ್ರುಡೋ ಗುರುವಾರವೇ ನವದೆಹಲಿಗೆ ಬಂದಿಳಿದಿದ್ದಾರೆ. ಇನ್ನು ಕೆಲ ದೇಶಗಳ ಗಣ್ಯರು ಈಗಾಗಲೇ ಆಗಮಿಸಿದ್ದರೆ, ಉಳಿದ ಕೆಲವರು ಶನಿವಾರ ಆಗಮಿಸಲಿದ್ದಾರೆ.

ನವದೆಹಲಿ: ಜಾಗತಿಕ ಭೂಪಟದಲ್ಲಿ ಭಾರತದ ಸ್ಥಾನಮಾನವನ್ನು ಇನ್ನಷ್ಟುಎತ್ತರಿಸಲಿದೆ ಎಂಬ ಆಶಾಭಾವನೆ ಹುಟ್ಟುಹಾಕಿರುವ ಮಹತ್ವದ ಹಾಗೂ ಐತಿಹಾಸಿಕ ಜಿ20 ಶೃಂಗಸಭೆ ಆಯೋಜನೆಗೆ ನವದೆಹಲಿ ಸಜ್ಜುಗೊಂಡಿದೆ. ಸೆ.9-10ರಂದು ನಡೆಯಲಿರುವ 2 ದಿನಗಳ ಸಭೆಗೆ ವಿಶ್ವದ ಗಣ್ಯಾತಿಗಣ್ಯರು ಆಗಮಿಸುತ್ತಿದ್ದು, ರಾಜಧಾನಿ ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. ಜೊತೆಗೆ ಇಡೀ ನಗರದಲ್ಲಿ ಹಿಂದೆಂದೂ ಕಂಡುಕೇಳರಿಯದ ಪ್ರಮಾಣದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗಿದೆ. ಕಳೆದೊಂದು ವರ್ಷದಿಂದ ವಿವಿಧ ಹಂತದಲ್ಲಿ ನಡೆಯುತ್ತಿದ್ದ ಸಭೆಗಳು ಇದೀಗ ಅಂತಿಮ ಹಂತಕ್ಕೆ ತಲುಪಿದ್ದು, ಇದರಲ್ಲಿ ಭಾಗಿಯಾಗಲು ಜಿ20 ದೇಶಗಳ ಪ್ರಮುಖರು ಮತ್ತು ಕೆಲ ಮಿತ್ರ ರಾಷ್ಟ್ರಗಳ ಗಣ್ಯರು ನವದೆಹಲಿಯತ್ತ ಪ್ರಯಾಣ ಆರಂಭಿಸಿದ್ದಾರೆ.

G20 Summit: ಮಹತ್ವದ ಶೃಂಗಸಭೆಗೆ ಭಾರತದ ಪ್ರಮುಖ ಶಾಶ್ವತ ಕೊಡುಗೆ ಏನು? ಇದರ ಉದ್ದೇಶ, ಕೊಡುಗೆಗಳು ಹೀಗಿದೆ..

ಭಾರೀ ಭದ್ರತೆ:

ಮುಂಜಾಗ್ರತಾ ಕ್ರಮವಾಗಿ ಗುರುವಾರ ರಾತ್ರಿಯಿಂದಲೇ ನವದೆಹಲಿ (New delhi) ಜಿಲ್ಲೆಯಲ್ಲಿ ಸಂಚಾರ ನಿರ್ಬಂಧಗಳು ಆರಂಭವಾಗಿವೆ. ಗುರುವಾರ ರಾತ್ರಿ 9ರಿಂದ ಭಾನುವಾರ ಮಧ್ಯರಾತ್ರಿಯವರೆಗೆ ಭಾರೀ, ಮಧ್ಯಮ ಮತ್ತು ಲಘು ಸರಕು ವಾಹನಗಳಿಗೆ ದೆಹಲಿ ಪ್ರವೇಶಿಸಲು ಅವಕಾಶವಿರುವುದಿಲ್ಲ. ಶನಿವಾರ ಬೆಳಗ್ಗೆ 5 ಗಂಟೆಯಿಂದ ಹೊರಗಿನ ಟ್ಯಾಕ್ಸಿ (Taxi)ಮತ್ತು ಆಟೋಗಳಿಗೂ (Auto riksha) ಇದೇ ನಿರ್ಬಂಧ ಅನ್ವಯವಾಗಲಿದೆ.

ನವದೆಹಲಿ ಜಿಲ್ಲೆಯ ಸಂಪೂರ್ಣ ಪ್ರದೇಶವನ್ನು ಶುಕ್ರವಾರ ಬೆಳಗ್ಗೆಯಿಂದ ಭಾನುವಾರದವರೆಗೆ ನಿಯಂತ್ರಿತ ವಲಯ ಎಂದು ಪರಿಗಣಿಸಲಾಗುತ್ತದೆ. ಹೋಟೆಲುಗಳು, ಆಸ್ಪತ್ರೆಗಳು, ಮನೆಕೆಲಸಗಾರರು, ಅಡುಗೆ, ತ್ಯಾಜ್ಯ ನಿರ್ವಹಣೆಯಂತಹ ಸೇವೆಗಳಲ್ಲಿ ತೊಡಗಿರುವ ನೌಕರರು, ಅಧಿಕೃತ ವಾಹನಗಳಿಗೆ ಮಾತ್ರ ಇಂಡಿಯಾ ಗೇಟ್‌ (India Gate) ಹಾಗೂ ನಿರ್ಬಂಧಿತ ನವದೆಹಲಿ ವಲಯದಲ್ಲಿ ಪ್ರಯಾಣಿಸಲು ಅನುಮತಿ ಇರುತ್ತದೆ.

ಜಿಲ್ಲೆಯ ಹೋಟೆಲ್‌, ವಾಣಿಜ್ಯ ಸಂಸ್ಥೆಗಳು, ಮಾರುಕಟ್ಟೆಗಳು, ಆಹಾರ ವಿತರಣೆ ಮತ್ತು ವಾಣಿಜ್ಯ ವಿತರಣಾ ಸೇವೆಗಳನ್ನು ನಾಳೆಯಿಂದ ಭಾನುವಾರದವರೆಗೆ ಮುಚ್ಚಲಾಗುತ್ತದೆ. ನಿಯಂತ್ರಿತ ವಲಯದಲ್ಲಿ ಸ್ವಿಗ್ಗಿ(Swiggy), ಝೊಮ್ಯಾಟೊ, ಅಮೆಜಾನ್‌ (Amazon) ಮತ್ತು ಫ್ಲಿಪ್‌ಕಾರ್ಟ್‌ನಂತಹ (Flipkart) ಸೇವೆಗಳಿಂದ ವಿತರಣೆಗಳನ್ನು ಅನುಮತಿಸಲಾಗುವುದಿಲ್ಲ, ಆದರೆ ಔಷಧಿಗಳು ಮತ್ತು ಅಗತ್ಯ ವಸ್ತುಗಳ ವಿತರಣೆಗೆ ಅನುಮತಿ ಇರಲಿದೆ.

ಜಿ20 ಆರಂಭಕ್ಕೂ ಮುನ್ನ ಮೋದಿ ಜಕರ್ತಾ ಪ್ರಯಾಣ, ಇಲ್ಲಿದೆ ಬಿಡುವಿಲ್ಲದ 3 ದಿನದ ವೇಳಾಪಟ್ಟಿ!

ಭದ್ರತಾ ಪಡೆ ಸರ್ವಸನ್ನದ್ಧ:

ಜಿ20 ಶೃಂಗಸಭೆಗಾಗಿ ಮೊದಲ ಬಾರಿಗೆ ಭಾರತವು ಜಗತ್ತಿನ ಪ್ರಬಲ ನಾಯಕರ ಗುಂಪಿಗೆ ಆತಿಥ್ಯ ವಹಿಸಲಿದೆ. ಹೀಗಾಗಿ ಭದ್ರತಾ ಸರ್ಪಗಾವಲು ಹಾಕಲಾಗಿದೆ. ಸ್ನೈಪರ್‌ಗಳು ಸೇರಿದಂತೆ ಸಾವಿರಾರು ಸಿಬ್ಬಂದಿಯನ್ನು ಭದ್ರತಾ ಪಡೆಗಳು ಒಳಗೊಂಡಿರುತ್ತವೆ. ಭಾರತೀಯ ವಾಯುಪಡೆಯ (Indian Airforce) ಯುದ್ಧ ವಿಮಾನಗಳು ಸನ್ನದ್ಧ ಸ್ಥಿತಿಯಲ್ಲಿರಲಿವೆ. ಡ್ರೋನ್‌ಗಳ (Drone) ಮೇಲೆ ನಿಗಾ ವಹಿಸಲಾಗುತ್ತದೆ.

ಸೊಳ್ಳೆ, ಮಂಗ ನಿಯಂತ್ರಣ:

ಇನ್ನು ಸೊಳ್ಳೆ ಹಾವಳಿ ನಿಯಂತ್ರಣಕ್ಕೆ ಸುಮಾರು 180 ಕೆರೆಗಳು ಮತ್ತು ಕಾರಂಜಿ ಕೊಳಗಳಿಗೆ ಲಾರ್ವಾ ತಿನ್ನುವ ಮೀನುಗಳನ್ನು ಜಲಮೂಲಗಳಲ್ಲಿ ಹರಿಬಿಡಲಾಗಿದೆ ಹಾಗೂ ಸೊಳ್ಳೆ ಕೀಟನಾಶಕಗಳನ್ನು ಸಿಂಪಡಿಸಲಾಗುತ್ತದೆ. ಲೂಟನ್ಸ್‌ ವಲಯದ ಮಂಗಗಳ (Monkey) ಹಾವಳಿ ತಪ್ಪಿಸಲು ಮಂಗಗಳ ಬೆದರುಗೊಂಬೆಗಳನ್ನು ಹಾಕಲಾಗಿದೆ ಹಾಗೂ ಮಂಗಗಳಂತೆ ಕೂಗುವ 40 ಜನರನ್ನು ನಿಯೋಜಿಸಿ ಅವನ್ನು ಬೆದರಿಸಲಾಗುತ್ತದೆ.

Follow Us:
Download App:
  • android
  • ios