Asianet Suvarna News Asianet Suvarna News

ಮುಂದಿನ 2 ತಿಂಗಳಲ್ಲಿ ಲಸಿಕೆ ಸಮಸ್ಯೆ ಅಂತ್ಯ; AIIMS ಭರವಸೆ!

  • ಲಸಿಕೆ ಸಿಗುತ್ತಿಲ್ಲ ಎಂದು ಆತಂಕ ಬೇಡ ಎಂದ ಏಮ್ಸ್
  • ಮುಂದಿನ 2 ತಿಂಗಳಲ್ಲಿ ಲಸಿಕೆ ಸಮಸ್ಯೆ ಅಂತ್ಯ
  • ಎಚ್ಚರಿಕೆಯಿಂದ ಇರಿ ಎಂದು ಏಮ್ಸ್ ಸಲಹೆ
Coronvirus vaccine will be available in large amounts in 2 months says AIIMS ckm
Author
Bengaluru, First Published May 15, 2021, 4:00 PM IST

ನವದೆಹಲಿ(ಮೇ.15): ಕೊರೋನಾ ವೈರಸ್ ಪ್ರಕರಣ ಹೆಚ್ಚಾಗುತ್ತಿರುವ ಬೆನ್ನಲ್ಲೇ ಲಸಿಕೆ ಕೊರತೆ ಕೂಡ ಭಾರತಕ್ಕೆ ತೀವ್ರವಾಗಿ ಕಾಡುತ್ತಿದೆ. ಲಸಿಕೆ ಕೊರತೆಯಿಂದ 18 ವರ್ಷ ಮೇಲ್ಪಟ್ಟ ಲಸಿಕಾ ಅಭಿಯಾನ ಹಲವು ರಾಜ್ಯಗಳಲ್ಲಿ ಸ್ಥಗಿತಗೊಂಡಿದೆ. ಇದೀಗ ಲಸಿಕೆ ಕೊರತೆ ಆತಂಕಕ್ಕೆ ದೆಹಲಿ ಏಮ್ಸ್ ನಿರ್ದೇಶಕ ರಂದೀಪ್ ಗುಲೇಯಾ ಉತ್ತರ ನೀಡಿದ್ದಾರೆ. ಮುಂದಿನ 2 ತಿಂಗಳಲ್ಲಿ ಲಸಿಕೆ ಕೊರತೆ ನೀಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.

ಮೈಲ್ಡ್ ಕೊರೋನಾಗೆ X-ray ಉತ್ತಮ; CT ಸ್ಕ್ಯಾನ್‌ನಿಂದ ಕ್ಯಾನ್ಸರ್ ಅಪಾಯ!

ಭಾರತದಲ್ಲಿ ಉತ್ಪಾದನೆಯಾಗುತ್ತಿರುವ ಲಸಿಕೆ ಜೊತೆಗೆ ವಿದೇಶಗಳಿಂದಲೂ ಲಸಿಕೆಯನ್ನು ಆಮದು ಮಾಡಿಕೊಳ್ಳಲಾಗುತ್ತಿದೆ. ದೇಶದಲ್ಲಿ ಲಸಿಕೆ ಉತ್ಪಾದನೆ ಮಟ್ಟವನ್ನು ಹೆಚ್ಚಿಸಲು ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೀಗಾಗಿ ಮುಂದಿನ 2 ತಿಂಗಳಲ್ಲಿ ದೇಶದ ಲಸಿಕೆ ಸಮಸ್ಯೆ ಅಂತ್ಯವಾಗಲಿದೆ ಎಂದು ಗುಲೇರಿಯಾ ಹೇಳಿದ್ದಾರೆ.

ಆರೋಗ್ಯ ಸಮಸ್ಯೆ ಇರುವ ಪ್ರತಿಯೊಬ್ಬರು ಮೊದಲು ಲಸಿಕೆ ತೆಗೆದುಕೊಳ್ಳಬೇಕು. ಕೊರೋನಾ ತಗುಲಿದಾಗ ಇತರ ಆರೋಗ್ಯ ಸಮಸ್ಯೆಯಿಂದ ನಿಧನರಾಗುತ್ತಿರುವವರ ಸಂಖ್ಯೆ ಹೆಚ್ಚಿದೆ. ಈ ಸಾವಿಗೆ ಕೊರೋನಾ ಕಾರಣವಾಗುತ್ತಿದೆ. ಹೀಗಾಗಿ ಹಲವು ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಮೊದಲು ಲಸಿಕೆ ನೀಡಬೇಕು ಎಂದು ಗುಲೇರಿಯಾ ಸಲಹೆ ನೀಡಿದ್ದಾರೆ.

ಡಬಲ್ ಮಾಸ್ಕ್ ಅವಶ್ಯಕವೇ? ಮನೆಯಲ್ಲೂ ಧರಿಸಬೇಕಾ? ಕೊರೋನಾ ಆತಂಕಕ್ಕೆ AIIMS ಉತ್ತರ!.

ಭಾರತದ ಜನಸಂಖ್ಯೆಗೆ ಅನುಗುಣವಾಗಿ ಅದೆಷ್ಟೇ ಮುಂದುವರಿದ ದೇಶಕ್ಕೂ ಲಸಿಕೆ ಉತ್ಪಾದನೆ ಮಾಡಿ ಪೂರೈಕೆ ಮಾಡಲು ಸಾಧ್ಯವಿಲ್ಲ. ಆದರೂ ಭಾರತ ತನ್ನದೇ ಆದ ನೀತಿ ನಿಯಮಗಳಿಂದ ಲಸಿಕೆ ಉತ್ಪಾದನೆ, ಪೂರೈಕೆ ಮಾಡುತ್ತಿದೆ. ಇದೀಗ ಹೆಚ್ಚುವರಿ ಉತ್ಪಾದಾನ ಘಟಕಗಳು ಸ್ಥಾಪನೆಯಾಗುತ್ತಿದೆ. ಇತರ ಲಸಿಕೆ ಉತ್ಪಾದಕರು ಭಾರತದ ಕೋವಾಕ್ಸಿನ್ ಉತ್ಪಾದನೆ ಮಾಡಲಿದ್ದಾರೆ. ಹೀಗಾಗಿ 2 ತಿಂಗಳ ಅವಧಿಯಲ್ಲಿ ಎಲ್ಲಾ ರಾಜ್ಯಗಳು ಸುಲಭವಾಗಿ ಲಸಿಕೆ ಪಡೆಯಲು ಸಾಧ್ಯವಾಗುತ್ತದೆ ಎಂದು ಗುಲೇರಿಯಾ ಹೇಳಿದ್ದಾರೆ.

ಲಸಿಕೆ ಸಿಗುತ್ತಿಲ್ಲ ಎಂದು ಜನರು ಆತಂಕಗೊಳ್ಳುವ ಅಗತ್ಯವಿಲ್ಲ. ಎಚ್ಚರಿಕೆ, ಮುಂಜಾಗ್ರತೆ ಅತೀ ಅಗತ್ಯವಾಗಿದೆ. ದೇಶದ ಎಲ್ಲರಿಗೂ ಲಸಿಕೆ ಸಿಗಲಿದೆ. ಆದರೆ ಪರಿಸ್ಥಿತಿ ಅತ್ಯಂತ ಸವಾಲಿನಿಂದ ಕೂಡಿದೆ. ಹೀಗಾಗಿ ವಿಳಂಬವಾಗುತ್ತಿದೆ ಎಂದು ಗುಲೇರಿಯಾ ಹೇಳಿದ್ದಾರೆ.

Follow Us:
Download App:
  • android
  • ios