ಕೊರೋನಾ ಲಸಿಕೆ ಪಡೆದರೆ ಮಕ್ಕಳಾಗುವುದಿಲ್ಲ; ಬಾಂಬ್ ಸಿಡಿಸಿದ ಸಮಾಜವಾದಿ ನಾಯಕ!
ಲಸಿಕೆ ಮೂಲಕ ಕೊರೋನಾ ಹೊಡೆದೋಡಿಸಲು ಭಾರತ ಸಜ್ಜಾಗಿದೆ. ಹಲವು ರಾಜ್ಯಗಳಲ್ಲಿ ಲಸಿಕೆ ಡ್ರೈ ರನ್ ನಡೆಯುತ್ತಿದೆ. ಎರಡೂ ಲಸಿಕೆ ತುರ್ತು ಬಳಕೆಗೆ ಅನುಮತಿ ನೀಡಲಾಗಿದೆ. ಇದರ ನಡುವೆ ರಾಜಕೀಯ ನಾಯಕರ ಹೇಳಿಕೆ ಜನರನ್ನು ಮತ್ತಷ್ಟು ಆತಂಕಕ್ಕೆ ತಳ್ಳಿದೆ.
ಲಕ್ನೋ(ಜ.02): ಕೊರೋನಾ ಲಸಿಕೆಗಾಗಿ ಕೇಂದ್ರ ಹಾಗೂ ಆಯಾ ರಾಜ್ಯ ಸರ್ಕಾರಗಳು ಅವಿರತ ಪ್ರಯತ್ನ ಮಾಡುತ್ತಿದೆ. ದೇಶವನ್ನು ಕೊರೋನಾದಿಂದ ಮುಕ್ತ ಮಾಡಲು ನಿರಂತರ ಹೋರಾಟ ನಡೆಯುತ್ತಿದೆ. ಇದರ ನಡುವೆ ಸಮಾಜವಾದಿ ಪಕ್ಷದ ನಾಯಕ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಖಿಲೇಶ್ ಯಾದವ್ ವಿವಾದಾತ್ಮಕ ಹೇಳಿಕೆ ಬಳಿಕ ಇದೀಗ ಎಂಎಲ್‌ಸಿ ಅಶುತೋಶ್ ಸಿನ್ಹ, ಕೊರೋನಾ ಲಸಿಕೆ ಪಡೆದರೆ ಮಕ್ಕಳಾಗುವುದಿಲ್ಲ ಎಂದಿದ್ದಾರೆ.
ಭಾರತ್ ಬಯೋಟೆಕ್‌ನ ಕೋವಾಕ್ಸಿನ್ ಲಸಿಕೆ ತುರ್ತು ಬಳಕೆಗೆ ತಜ್ಞರ ಸಮಿತಿ ಶಿಫಾರಸು!
ಉತ್ತರ ಪ್ರದೇಶ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್ ಯಾದವ್, ಬಿಜೆಪಿ ವಿತರಿಸುವ ಕೊರೋನಾ ಲಸಿಕೆ ಪಡೆಯುವುದಿಲ್ಲ. ಬಿಜೆಪಿ ಮೇಲೆ ತನಗೆ ವಿಶ್ವಾಸವಿಲ್ಲ ಎಂದಿದ್ದದರು. ಇದೀಗ ಅಶುತೋಶ್ ಸಿನ್ಹ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ಕೊರೋನಾ ಲಸಿಕೆಯಿಂದ ಮಕ್ಕಳಾಗದಿರುವ ಸಮಸ್ಯೆ ಉಂಟಾಗಲಿದೆ ಎಂದಿದ್ದಾರೆ.
ಆಸ್ಟ್ರಾಝೆನಿಕಾ ಕೊರೋನಾ ಲಸಿಕೆ ತುರ್ತು ಬಳಕೆಗೆ ಭಾರತ ಡ್ರಗ್ ರೆಗ್ಯೂಲೇಟರಿ ಅನುಮತಿ !
ಬಿಜೆಪಿ ನೀಡುವ ಲಸಿಕೆಯಿಂದ ದೂರವಿರಲು ನಮ್ಮ ನಾಯಕ ಅಖಿಲೇಶ್ ಈಗಾಗಲೇ ಉತ್ತರ ಪ್ರದೇಶ ಜನರನ್ನು ಎಚ್ಚರಿಸಿದ್ದಾರೆ. ಇದೀಗ ಜನತೆಗೆ ನಾನು ಮತ್ತೊಂದು ಎಚ್ಚರಿಕೆ ನೀಡುತ್ತಿದ್ದೇನೆ. ಕೊರೋನಾ ಲಸಿಕೆ ಪಡೆದರೆ ಮಕ್ಕಳಾಗುವುದಿಲ್ಲ ಸೇರಿದಂತೆ ಹಲವು ಅಡ್ಡಪರಿಣಾಮಗಳು ಕಾಡಲಿದೆ ಎಂದು ಅಶುತೋಶ್ ಸಿನ್ಹ ಹೇಳಿದ್ದಾರೆ.
ಉತ್ತರ ಪ್ರದೇಶದ ಸಂಪೂರ್ಣ ನಾಗರೀಕರು ಬಿಜೆಪಿಯ ಕೊರೋನಾ ಲಸಿಕೆಯಿಂದ ದೂರವಿರಬೇಕು ಎಂದು ಅಶುತೋಶ್ ಸಿನ್ಹ ಆಗ್ರಹಿಸಿದ್ದಾರೆ. ಆದರೆ ಅಶುತೋಶ್ ಸಿನ್ಹ ಹೇಳಿಕೆಗೆ ಭಾರಿ ವಿರೋಧ ವ್ಯಕ್ತವಾಗಿದೆ. ಇಂತವರೆಲ್ಲಾ ಜನ ನಾಯಕರು ಹೇಗಾದರು ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.