ಆಸ್ಟ್ರಾಝೆನಿಕಾ ಕೊರೋನಾ ಲಸಿಕೆ ತುರ್ತು ಬಳಕೆಗೆ ಭಾರತ ಡ್ರಗ್ ರೆಗ್ಯೂಲೇಟರಿ ಅನುಮತಿ !
ಹೊಸ ವರ್ಷದಿಂದ ಕೊರೋನಾ ವೈರಸ್ ಲಸಿಕೆ ನೀಡುವುದಾಗಿ ಭಾರತ ಈಗಾಗಲೇ ಹೇಳಿದೆ. ಅದರಂತೆ ಭಾರತ ಡ್ರಗ್ ನಿಯಂತ್ರಕ ಇದೀಗ ಆಕ್ಸ್‌ಫರ್ಡ್ ಅಸ್ಟ್ರಾಝೆನಿಕಾ ಕೊರೋನಾ ಲಸಿಕೆಗೆ ಅನುಮತಿ ನೀಡಿದೆ ಎಂದು ಮೂಲಗಳು ಹೇಳಿವೆ. ಈ ಕುರಿತ ಹೆಚ್ಚಿನ ಮಾಹಿತಿ ಇಲ್ಲಿದೆ.
ನವದೆಹಲಿ(ಜ.01): ಹೊಸ ವರ್ಷದ ಮೊದಲ ದಿನವೇ ಭಾರತದಲ್ಲಿ ಲಸಿಕೆಗೆ ಹಂಚುವಿಕೆಗೆ ಮಹತ್ವದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತದಲ್ಲಿ ಕೊರೋನಾಗೆ ಆಕ್ಸಫರ್ಡ್ ಹಾಗೂ ಅಸ್ಟ್ರಾಝೆನಿಕ ಜಂಟಿಯಾಗಿ ಅಭಿವೃದ್ಧಿಪಡಿಸಿದ ಲಸಿಕೆ ತುರ್ತು ಬಳಕೆಗೆ ಭಾರತದ ಡ್ರಗ್ ರೆಗ್ಯೂಲೇಟರಿ ಬೋರ್ಡ್ ಅನುಮತಿ ನೀಡಿದೆ ಎಂದು ಮೂಲಗಳು ತಿಳಿಸಿವೆ ಎಂದು ರಾಯಟರ್ಸ್ ಸಂಸ್ಥೆ ವರದಿ ಮಾಡಿದೆ.
ಕೊರೋನಾ ತುರ್ತು ಲಸಿಕೆ ಅನುಮತಿಗೆ ಕೇಂದ್ರದ ಸಿದ್ಧತೆ!
ಆಕ್ಸ್‌ಫರ್ಡ್ ಅಸ್ಟ್ರಾಝೆನಿಕಾ ಕೊರೋನಾ ಲಸಿಕೆ ತುರ್ತು ಬಳಕೆ ಅನುಮತಿ ಕುರಿತು ಶೀಘ್ರದಲ್ಲೇ ಅಧೀಕೃತ ಪ್ರಕಟಣೆ ಹೊರಬೀಳಲಿದೆ. ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಶನ್ (CDSCO) ಪ್ರತಿನಿಧಿ ಹಾಗೂ ತಜ್ಞರ ಸಮತಿ ಸಭೆ ನಡೆಸಿದೆ. ಆದರೆ ಸಭೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ.
ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಏರಿಕೆಯಾಗ್ತಿದೆ ಹೊಸ ರೂಪಾಂತರಿ ಕೊರೋನಾ ವೈರಸ್.
ಆಸ್ಟ್ರಾಜೆನಿಕಾ ಕೊರೋನಾ ಲಸಿಕೆಗೆ ಇನ್ನು ಬ್ರಿಟನ್ ಸರ್ಕಾರ ಅನುಮತಿ ನೀಡಿಲ್ಲ. ಆದರೆ ಭಾರತ ಡ್ರಗ್ ರೆಗ್ಯೂಲೇಟರಿ ಕೆಲ ಮಾಹಿತಿ ನೀಡುವಂತ ಈ ಹಿಂದೆ ಕೋರಿತ್ತು. ಇದೀಗ ಸಂಪೂರ್ಣ ಮಾಹಿತಿ, ಪ್ರಯೋಗದ ವಿವರಗಳನ್ನು ನೀಡಿದೆ. ಸದ್ಯ ಅಭಿವೃದ್ಧಿ ಪಡಿಸಿರುವ ಕೊರೋನಾ ಲಸಿಕೆಗಳ ಪೈಕಿ ಆಸ್ಟ್ರಾಝೆನಿಕ್ ಕಡಿಮೆ ದರದ ಲಸಿಕೆ ಅನ್ನೋ ಹೆಗ್ಗಳಿಕಗೂ ಪಾತ್ರವಾಗಿದೆ.
ಅಸ್ಟ್ರಾಝೆನಿಕ ಭಾರತದಲ್ಲಿ ಸೆರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಜೊತೆ ಲಸಿಕೆ ಉತ್ಪಾದನೆ ಮಾಡಲಿದೆ. ಸದ್ಯ ಕೊರೋನಾಗೆ ಅಸ್ಟ್ರಾಝೆನಿಕಾ ಜೊತೆ ಭಾರತದಲ್ಲಿ ಅಭಿವೃದ್ಧಿ ಮಾಡಿರುವ ಕೊರೋನಾ ಲಸಿಕೆಗೂ ಅನುಮತಿ ಸಿಗುವ ಸಾಧ್ಯತೆ ಇದೆ.