Asianet Suvarna News Asianet Suvarna News

ಪೋಷಕರ ಆತಂಕ ದೂರ; ಮುಂದಿನ ತಿಂಗಳಿಂದ ಮಕ್ಕಳಿಕೆ ಕೊರೋನಾ ಲಸಿಕೆ ಅಭಿಯಾನ!

  • ಅಂತಿಮ ಹಂತದಲ್ಲಿದೆ ಮಕ್ಕಳ ಮೇಲಿನ ಕೊರೋನಾ ಲಸಿಕೆ ಪ್ರಯೋಗ 
  • ಮುಂದಿನ ತಿಂಗಳಿನಿಂದ ಮಕ್ಕಳಿಗೆ ಕೊರೋನಾ ಲಸಿಕಾ ಅಭಿಯಾನ ಆರಂಭ
  • ಆರೋಗ್ಯ ಸಚಿವರ ಹೇಳಿಕೆಯಿಂದ ಪೋಷಕರಲ್ಲಿ ನೆಮ್ಮದಿ
     
Coronavirus vaccine for children expected to launch from August 2021 says Mansukh Mandaviya ckm
Author
Bengaluru, First Published Jul 27, 2021, 4:05 PM IST
  • Facebook
  • Twitter
  • Whatsapp

ನವದೆಹಲಿ(ಜು.27): ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಅಭಿಯಾನ ವೇಗವಾಗಿ ನಡೆಯುತ್ತಿದೆ. ಈಗಾಗಲೇ 44 ಕೋಟಿಗೂ ಅಧಿಕ ಡೋಸ್ ನೀಡಲಾಗಿದೆ. ಇದರ ನಡುವೆ 3ನೇ ಅಲೆ ಭೀತಿ ಕಾಡುತ್ತಿದೆ. ವಿಶೇಷವಾಗಿ ಮಕ್ಕಳ ಮೇಲೆ ಪರಿಣಾಮ ಬೀರಲಿದೆ  ಅನ್ನೋ ತಜ್ಞರ ಮಾತುಗಳು ಪೋಷಕರ ಆತಂಕ ಹೆಚ್ಚಿಸಿದೆ. ಇದೀಗ ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಹೇಳಿಕೆ ಭಾರತೀಯರಲ್ಲಿ ನೆಮ್ಮದಿ ತಂದಿದೆ.

18 ವರ್ಷ ಮೇಲ್ಪಟ್ಟವರಿಗೆ 188 ಕೋಟಿ ಲಸಿಕೆ ಅವಶ್ಯಕತೆ ಇದೆ; ಸದ್ಯ 43 ಕೋಟಿ ಪೂರೈಕೆ!

ಮಕ್ಕಳಿಗೆ ಕೊರೋನಾ ಲಸಿಕೆ ಅಭಿಯಾನ ಮುಂದಿನ ತಿಂಗಳು(ಆಗಸ್ಟ್) ಆರಂಭಗೊಳ್ಳಲಿದೆ.2 ರಿಂದ 6 ವರ್ಷ ಹಾಗೂ 7 ರಿಂದ 17 ವರ್ಷದೊಳಗಿನ ಮಕ್ಕಳ ಕೊರೋನಾ ಲಸಿಕೆ ಪ್ರಯೋಗ ಅಂತಿಮ ಹಂತದಲ್ಲಿದೆ. ಈಗಾಗಲೇ ಉತ್ತಮ ಫಲಿತಾಂಶ ಲಭ್ಯವಾಗಿದೆ. ಹೀಗಾಗಿ ವೈದ್ಯಕೀಯ ಪ್ರಕ್ರಿಯೆ ಅಂತ್ಯಗೊಂಡ ಬೆನ್ನಲ್ಲೇ ಮಕ್ಕಳ ಲಸಿಕೆ ಲಭ್ಯವಾಗಲಿದೆ ಎಂದು ಮನ್ಸುಖ್ ಮಾಂಡವಿಯಾ ಹೇಳಿದ್ದಾರೆ.

ದೆಹಲಿ ಏಮ್ಸ್ ಆಸ್ಪತ್ರೆಯಲ್ಲಿ 2 ರಿಂದ 6 ವರ್ಷ ಮಕ್ಕಳ ಮೇಲೆ ಕೋವಾಕ್ಸಿನ್ ಲಸಿಕೆ ಪ್ರಯೋಗ ನಡೆಯುತ್ತಿದೆ. ಪ್ರಯೋಗ ಆರಂಭಗೊಂಡ ಬೆನ್ನಲ್ಲೇ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ, ಸೆಪ್ಟೆಂಬರ್ ವೇಳೆಗೆ ಮಕ್ಕಳಿಗೆ ಲಸಿಕೆ ಲಭ್ಯವಾಗುವುದಾಗಿ ಹೇಳಿದ್ದರು.

40 ಕೋಟಿ ಭಾರತೀಯರಿಗೆ ಕೊರೋನಾ ಅಪಾಯ; sero ಸಮೀಕ್ಷಾ ವರದಿ!

ಜೂನ್ 7 ರಿಂದ ದೆಹಲಿಯ ಎಮ್ಸ್ ಆಸ್ಪತ್ರೆಯಲ್ಲಿ 7 ರಿಂದ 17 ವರ್ಷದ ಮಕ್ಕಳಿಗೂ ಕೊರೋನಾ ಲಸಿಕೆ ಹಂತ ಹಂತದ ಪ್ರಯೋಗ ನಡೆಯುತ್ತಿದೆ. ಮೇ 12 ರಂದು ಭಾರತದ ಡ್ರಗ್ ಕಂಟ್ರೋಲರ್ 2 ವರ್ಷ ಮೇಲ್ಪಟ್ಟ ಮಕ್ಕಳ ಮೇಲೆ ಲಸಿಕೆ ಪ್ರಯೋಗಿಸಲು ಭಾರತ್ ಬಯೋಟೆಕ್ ಸಂಸ್ಥೆಗೆ ಅನುಮತಿ ನೀಡಿತ್ತು. 

ಇದೀಗ ಒಂದು ತಿಂಗಳು ಮೊದಲೇ ಲಸಿಕೆ ಲಭ್ಯತೆಯ ಸುಳಿವು ನೀಡಿದ್ದಾರೆ. ಮಕ್ಕಳಿಗೆ ಲಸಿಕೆ ನೀಡೋ ಮೂಲಕ ಕೊರೋನಾ ವಿರುದ್ಧದ ಭಾರತದ ಹೋರಾಟ ಮತ್ತಷ್ಟು ಚುರುಕುಗೊಳ್ಳಲಿದೆ.

Follow Us:
Download App:
  • android
  • ios