40 ಕೋಟಿ ಭಾರತೀಯರಿಗೆ ಕೊರೋನಾ ಅಪಾಯ; sero ಸಮೀಕ್ಷಾ ವರದಿ!
- sero ಸಮೀಕ್ಷೆ ತೆರೆದಿಟ್ಟಿದೆ ಭಾರತದ ಅಸಲಿ ಕೊರೋನಾ ಕತೆ
- ಮೂರನೇ ಎರಡರಷ್ಟ ಜನರಿಗೆ ಅಂಟಿಕೊಂಡಿದೆ ಕೊರೋನಾ ವೈರಸ್‌ಗೆ
- ಬರೋಬ್ಬರಿ 40 ಕೋಟಿ ಮಂದಿಗೆ ಕೊರೋನಾ ಅಪಾಯ ಇದೆ
ನವದೆಹಲಿ(ಜು.20): ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಸರ್ಕಾರ ಹಲವು ಅಂಕಿ ಅಂಶಗಳನ್ನು ಬಿಡುಗಡೆ ಮಾಡುತ್ತಿದೆ. ಕೊರೋನಾ ಸೋಂಕಿತರ ಸಂಖ್ಯೆ, ಗುಣಮುಖರ ಸಂಖ್ಯೆ, ಸಾವಿನ ಸಂಖ್ಯೆ ಮಾಹಿತಿಗಳು ಲಭ್ಯವಿದೆ. ಇದೀಗ ಸೆರೋ ಸಮೀಕ್ಷೆಯಲ್ಲಿ ಮತ್ತೊಂದು ಮಾಹಿತಿ ಬಯಲಾಗಿದೆ. ಭಾರತದಲ್ಲಿ ಬರೋಬ್ಬರಿ 40 ಕೋಟಿ ಮಂದಿ ಕೊರೋನಾ ಅಪಾಯದಲ್ಲಿದ್ದಾರೆ ಎಂದಿದೆ.
18 ವರ್ಷ ಮೇಲ್ಪಟ್ಟವರಿಗೆ 188 ಕೋಟಿ ಲಸಿಕೆ ಅವಶ್ಯಕತೆ ಇದೆ; ಸದ್ಯ 43 ಕೋಟಿ ಪೂರೈಕೆ!ಈ ಸಮೀಕ್ಷಾ ವರದಿ ಪ್ರಕಾರ ಭಾರತದಲ್ಲಿ ಇನ್ನೂ 40 ಕೋಟಿ ಜಜನ ಕೊರೋನಾ ಸೋಂಕಿನ ಅಪಾಯದಲ್ಲಿದ್ದಾರೆ ಎಂದಿದೆ. ಇದೇ ಅಧ್ಯಯನ ವರದಿ ಮತ್ತೊಂದು ಮಾಹಿತಿಯನ್ನು ಬಹಿರಂಗ ಪಡಿಸಿದೆ. ಭಾರತ ಶೇಕಡಾ 67.6% ಮಂದಿಯಲ್ಲಿ ಕೊರೋನಾ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳು ಅಭಿವೃದ್ಧಿಯಾಗಿದೆ ಎಂದಿದೆ.
ಈ ವರದಿ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮುಖ್ಯಸ್ಥ ಡಾ. ಬಲರಾಮ್ ಭಾರ್ಗವ ಎಚ್ಚರಿಕೆ ಮರೆತರೆ ಅಪಾಯ ಕಟ್ಟಿಟ್ಟ ಬುತ್ತಿ. 2ನೇ ಅಲೆ ತಗ್ಗಿದರೂ ಅಪಾಯ ಕಡಿಮೆಯಾಗಿಲ್ಲ ಎಂದಿದ್ದಾರೆ.
ಕೊರೋನಾ ಬಗ್ಗೆ ಚರ್ಚೆ: ಮೋದಿ ಕರೆದ ಸಭೆಗೆ ಕಾಂಗ್ರೆಸ್, ಅಕಾಲಿ ದಳ ಗೈರು!sero ಸಮೀಕ್ಷೆ ಜೂನ್ ಹಾಗೂ ಜುಲೈ ತಿಂಗಳಲ್ಲಿ ನಡೆಸಲಾಗಿದೆ. 21 ರಾಜ್ಯಗಳ 70 ಜಿಲ್ಲೆಗಳಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. 7,252 ಆರೋಗ್ಯ ಕಾರ್ಯಕರ್ತರು ಸೇರಿದಂತೆ 36,227 ಜನರ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಆರು ವರ್ಷಕ್ಕಿಂತ ಮೇಲ್ಪಟ್ಟ 67.6 ರಷ್ಟು ಭಾರತೀಯರು ಕೊರೋನಾ ಪ್ರತಿಕಾಯಗಳನ್ನು ಹೊಂದಿದ್ದಾರೆಂದು ವರದಿ ಹೇಳಿದೆ.
6 ರಿಂದ 17 ವರ್ಷದೊಳಗಿನ ಮಕ್ಕಳ ಪೈಕಿ ಶೇಕಡಾ 50ಕ್ಕಿಂತ ಹೆಚ್ಚಿನ ಮಕ್ಕಳ ದೇಹದಲ್ಲಿ ಕೋವಿಡ್ ವಿರುದ್ಧ ಹೋರಾಡಬಲ್ಲ ಪ್ರತಿಕಾಯಗಳನ್ನು ಹೊಂದಿದ್ದಾರೆ. ಆರೋಗ್ಯ ಕಾರ್ಯಕರ್ತರಲ್ಲಿ ಕೊರೋನಾ ವಿರುದ್ದ ಹೋರಾಡಬಲ್ಲ ಆ್ಯಂಟಿ ಬಾಡಿ ಶೇಕಡಾ 85ರಷ್ಟಿದೆ ಎಂದು ವರದಿ ಹೇಳುತ್ತಿದೆ.