ನವದೆಹಲಿ(ಜ.24): ಕೊರೋನಾ ವೈರಸ್ ವಿರುದ್ಧ ಹೋರಾಡಲು ಭಾರತ ಲಸಿಕೆ ಅಭಿವೃದ್ಧಿಪಡಿಸಿ ಇದೀಗ ಯಶಸ್ವಿಯಾಗಿ ವಿತರಣೆ ಕೂಡ ಮಾಡುತ್ತಿದೆ. ಇತರ ರಾಷ್ಟ್ರಗಳಿಗೂ ಭಾರತ ಲಸಿಕೆ ಪೂರೈಕೆ ಮಾಡಿದೆ. ಇದೀಗ ಭಾರತ ಮತ್ತೊಂದು ದಾಖಲೆ ಬರೆದಿದೆ. ಅತೀ ಕಡಿಮೆ ದಿನದಲ್ಲಿ ಗರಿಷ್ಠ ಕೊರೋನಾ ಲಸಿಕೆ ನೀಡಿದ ಹೆಗ್ಗಳಿಕೆಗೆ ಭಾರತ ಪಾತ್ರವಾಗಿದೆ.

ವಾಕ್ಸಿನೇಷನ್ ಮೇಲ್ವಿಚಾರಣೆ ಮಾಡಿದ ಮೋದಿ; ಮೊದಲ ದಿನ 1.91 ಲಕ್ಷ ಮಂದಿಗೆ ಲಸಿಕೆ!.

ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವರ್ಕಸ್‌ಗೆ ಮೊದಲ ಹಂತದಲ್ಲಿ ಕೊರೋನಾ ಲಸಿಕೆ ನೀಡಲಾಗುತ್ತಿದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಲಸಿಕೆ ವಿತರಣೆ ಮಾಡಲಾಗಿದೆ. ಆರಂಭಿಕ 6 ದಿನದಲ್ಲಿ 10 ಲಕ್ಷ ಮಂದಿಗೆ ಕೊರೋನಾ ಲಸಿಕೆ ನೀಡಲಾಗಿದೆ. ಈ ಮೂಲಕ ಅತೀ ಕಡಿಮೆ ಅವಧಿಯಲ್ಲಿ ಗರಿಷ್ಠ ಲಸಿಕೆ ನೀಡಿದ ಸಾಧನೆ ಮಾಡಿದೆ.

ಅಮೆರಿಕ ಹಾಗೂ ಇಸ್ರೇಲ್ 10 ಲಕ್ಷ ಮಂದಿಗೆ ಲಸಿಕೆ ನೀಡಲು 10 ದಿನ ತೆಗೆದುಕೊಂಡಿತ್ತು. ಭಾರತ ಈ ಸಂಖ್ಯೆಯನ್ನು 6 ದಿನದಲ್ಲೇ ಮುಗಿಸಿದೆ. ಇನ್ನು 9 ದಿನದಲ್ಲಿ ಭಾರತ 15.82 ಲಕ್ಷ ಮಂದಿಗೆ ಲಸಿಕೆ ನೀಡಿದೆ. ಲಸಿಕೆ ವಿತರಣೆಗೆ ಕೇಂದ್ರ ಸರ್ಕಾರ ಸಾಕಷ್ಟು ಪೂರ್ವ ತಯಾರಿ ನಡೆಸುತ್ತು. ಡ್ರೈ ರನ್ ಸೇರಿದಂತೆ ಎಲ್ಲಾ ಮುಖ್ಯಮಂತ್ರಿಗಳ ಜೊತೆ ಸಭೆ ಕೂಡ ಮಾಡಲಾಗಿತ್ತು.

ಭಾರತದಲ್ಲಿ ಲಸಿಕೆ ಅಭಿಯಾನ; ಇತರ ದೇಶಗಳಿಗೆ ವಿಶ್ವ ಆರೋಗ್ಯ ಸಂಸ್ಥೆ ವಿಶೇಷ ಮನವಿ !...

ಸಾರಿಗೆ ವ್ಯವಸ್ಥೆ, ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ವಿತರಣೆಗೆ ಎಲ್ಲಾ ತಯಾರಿ ಮಾಡಿಕೊಳ್ಳಲಾಗಿತ್ತು. ಹೀಗಾಗಿ ಭಾರತ ಯಶಸ್ವಿಯಾಗಿ ವಾಕ್ಸಿನೇಷನ್ ಮಾಡುತ್ತಿದೆ. ಎರಡನೇ ಹಂತದ ಲಸಿಕೆ ವಿತರಣೆ ಫೆಬ್ರವರಿ 15 ರಿಂದ  ಆರಂಭಗೊಳ್ಳಲಿದೆ. 2ನೇ ಹಂತದಲ್ಲಿ ಯಾರಿಲ್ಲಾ ಲಸಿಕೆ ಪಡೆಯಲಿದ್ದಾರೆ ಅನ್ನೋ ಅಧೀಕೃತ ಪ್ರಕಟಣೆ ಶೀಘ್ರದಲ್ಲೇ ಹೊರಬೀಳಲಿದೆ.