ನವದೆಹಲಿ(ಏ.17): ಗುರುವಾರವೂ ದೇಶಾದ್ಯಂತ ವಿವಿಧ ರಾಜ್ಯಗಳಲ್ಲಿ 981 ಜನರಿಗೆ ಕೊರೋನಾ ಸೋಂಕು ತಗುಲಿದ್ದು ದೃಢಪಟ್ಟಿದೆ. ಇದರೊಂದಿಗೆ ಭಾರತದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 13201ಕ್ಕೆ ತಲುಪಿದೆ. ಇನ್ನು ಗುರುವಾರ 27 ಜನ ಸಾವನ್ನಪ್ಪುವುದರೊಂದಿಗೆ ಒಟ್ಟು ಸಾವಿನ ಸಂಖ್ಯೆ 444ಕ್ಕೆ ಏರಿದೆ. 

ಮೋದಿ ಪ್ಲಾನ್ ವರ್ಕೌಟ್ ಆಗಲ್ಲ, ಕೊರೋನಾ ನಿಯಂತ್ರಿಸಲು ರಾಹುಲ್ ಗಾಂಧಿ ಹೊಸ ಸೂತ್ರ!

ಈ ನಡುವೆ ಇದುವರೆಗೆ ದೇಶದಲ್ಲಿ 1594 ಜನರು ಸೋಂಕಿನಿಂದ ಗುಣಮುಖರಾಗಿದ್ದಾರೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ತಿಳಿಸಿದೆ. ಆದರೆ ಕೇಂದ್ರ ಆರೋಗ್ಯ ಸಚಿವಾಲಯದ ದಾಖಲೆಗಳ ಅನ್ವಯ ಕಳೆದ 24 ಗಂಟೆಗಳ ಅವಧಿಯಲ್ಲಿ ಹೊಸದಾಗಿ 826 ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 12759ಕ್ಕೆ ತಲುಪಿದೆ. ಇನ್ನು ಸಾವಿನ ಸಂಖ್ಯೆ 420ಕ್ಕೆ ಏರಿದೆ.

ಮತ್ತೆ ಮಹಾ ಕೊರೋನಾ ಸ್ಫೋಟ 

ಮುಂಬೈ: ದೇಶದಲ್ಲೇ ಅತಿ ಹೆಚ್ಚು ಕೊರೋನಾ ವೈರಸ್‌ ಪ್ರಕರಣಗಳು ದಾಖಲಾಗಿರುವ ಮಹಾರಾಷ್ಟ್ರದಲ್ಲಿ ಗುರುವಾರ ಹೊಸದಾಗಿ 286 ಪ್ರಕರಣಗಳು ಪತ್ತೆಯಾಗಿವೆ. ಇದರೊಂದಿಗೆ ಸೋಂಕಿತರ ಸಂಖ್ಯೆ 3202ಕ್ಕೆ ತಲುಪಿದೆ. ಈ ಪೈಕಿ ರಾಜಧಾನಿ ಮುಂಬೈ ಒಂದರಲ್ಲೇ ಗುರುವಾರ 107 ಹೊಸ ಪ್ರಕರಣಗಳು ದಾಖಲಾಗಿdಛಿ. ರಾಜ್ಯದಲ್ಲಿ ಈವರೆಗೆ ಒಟ್ಟಾರೆ 197 ಜನ ಸಾವನ್ನಪ್ಪಿದ್ದಾರೆ.

ಧಾರಾವಿ ಸ್ಲಂನಲ್ಲಿ  86ಕ್ಕೇರಿದ ಸೋಂಕಿತರ ಸಂಖ್ಯೆ:

ಮುಂಬೈ: ಏಷ್ಯಾದ ಅತೀ ದೊಡ್ಡ ಕೊಳಗೇರಿ ಮುಂಬೈನ ಧಾರಾವಿಯಲ್ಲಿ ಗುರುವಾರ ಮತ್ತೆ 26 ಮಂದಿಗೆ ಕೊರೋನಾ ವೈರಸ್‌ ಸೋಂಕು ಖಚಿತ ಪಟ್ಟಿದೆ. ಆ ಮೂಲಕ ಅಲ್ಲಿ ಒಟ್ಟು ಪೀಡಿತರ ಸಂಖ್ಯೆ 71ಕ್ಕೇರಿದೆ. ಲಕ್ಷ್ಮೇ ಚೌಲ್‌ ಪ್ರದೇಶದ 58 ವರ್ಷದ ವ್ಯಕ್ತಿ ಗುರುವಾರ ಸೊಂಕಿಗೆ ಒಬ್ಬ ಬಲಿಯಾಗಿದ್ದು, ಆ ಮೂಲಕ ಸತ್ತವರ ಸಂಖ್ಯೆ 9ಕ್ಕೇರಿದೆ. ಪ್ರತೀ ಚದರ ಕಿ.ಮಿಗೆ 7.80 ಲಕ್ಷ ಜನಸಾಂಸದ್ರತೆ ಇರುವ ಇಲ್ಲಿನ ಪೀಡಿತರ ಸಂಖ್ಯೆ ಆತಂಕ ಹೆಚ್ಚಿಸಿದೆ. ಒಟ್ಟು 2.1 ಚದರ ಕಿ.ಮಿ ವಿಸ್ತೀರ್ಣ ಇರುವ ಈ ಸ್ಲಂನಲ್ಲಿ 15 ಲಕ್ಷ ಮಂದಿ ವಾಸಿಸುತ್ತಿದ್ದಾರೆ.

"