2ನೇ ಅಲೆ ನಿಯಂತ್ರಣಕ್ಕೆ ಬರುತ್ತಿದ್ದಂತೆ ಡೆಲ್ಟಾ ಪ್ಲಸ್ ವೈರಸ್ ಭೀತಿ ಡೆಲ್ಟಾ ಪ್ಲಸ್‌ಗೆ ಭಾರತದಲ್ಲಿ ಮೊದಲ ಬಲಿಯಾದ ಬೆನ್ನಲ್ಲೇ ಹೆಚ್ಚಿದ ಆತಂಕ 48 ಹೆಚ್ಚು ಡೆಲ್ಟಾ ಪ್ಲಸ್ ವೈರಸ್ ಪತ್ತೆ, ಮತ್ತೆ ಕಠಿಣ ನಿರ್ಬಂಧ ಜಾರಿಯಾಗುವ ಸಾಧ್ಯತೆ

ನವದೆಹಲಿ(ಜೂ.25):  ಕೊರೋನಾ ವೈರಸ್ ಆತಂಕ ದಿನೇ ದಿನೇ ಹೆಚ್ಚಾಗುತ್ತಿದೆ. 2ನೇ ಅಲೆ ತಗ್ಗಿದ ಪರಿಣಾಮ ಬಹುತೇಕ ರಾಜ್ಯಗಳಲ್ಲಿ ಅನ್‌ಲಾಕ್ ಪ್ರಕ್ರಿಯೆ ಆರಂಭಗೊಂಡಿದೆ. ಇದರ ನಡುವೆ ಭಾರತದಲ್ಲಿ ಡೆಲ್ಟಾ ಪ್ಲಸ್ ವೈರಸ್ ಒಂದರ ಮೇಲೊಂದರಂತೆ ಪ್ರಕರಣ ಪತ್ತೆಯಾಗುತ್ತಿದೆ. ಭಾರತದಲ್ಲಿ ಡೆಲ್ಟಾ ಪ್ಲಸ್‌ ವೈರಸ್‌ಗೆ ಮೊದಲ ಬಲಿ ಕೂಡ ಸಂಭವಿಸಿದೆ. ಇದೀಗ ದೇಶದಲ್ಲಿ 48ಕ್ಕೂ ಹೆಚ್ಚು ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ.

85 ದೇಶಗಳಿಗೆ ಹಬ್ಬಿದ ಡೆಲ್ಟಾ, ಭಾರೀ ಆತಂಕ!.

ಡೆಲ್ಟಾ ಪ್ಲಸ್ ವೇರಿಯೆಂಟ್ ಅತ್ಯಂತ ಅಪಾಯಕಾರಿ ವೈರಸ್. ಎರೆಡೆರಡು ಬಾರಿ ರೂಪಾಂತರಿಗೊಂಡ ವೈರಸ್ ಇದಾಗಿದ್ದು, ಅತೀ ವೇಗದಲ್ಲಿ ಹರಡುತ್ತಿದೆ. ಭಾರತದಲ್ಲಿ 48ಕ್ಕೂ ಹೆಚ್ಚು ಡೈಲ್ಟಾ ಪ್ರಕರಣ ವರದಿಯಾಗಿದ್ದು, ಮಹಾರಾಷ್ಟ್ರದಲ್ಲಿ 20 ಪ್ರಕರಣ ಪತ್ತೆಯಾಗಿದೆ. ಇನ್ನು ಕರ್ನಾಟಕದಲ್ಲೂ ಡೆಲ್ಟಾ ವೈರಸ್ ಪತ್ತೆಯಾಗಿದೆ.

ತಮಿಳುನಾಡಿನಲ್ಲಿ 9, ಮಧ್ಯಪ್ರದೇಶದಲ್ಲಿ 7, ಕೇರಳದಲ್ಲಿ 3, ಗುಜರಾತ್‌ನಲ್ಲಿ 2, ಪಂಜಾಬ್‌ನಲ್ಲಿ 3 ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ. ದೇಶದಲ್ಲಿ ಕೊರೋನಾ ಪ್ರಕರಣ ಜೊತೆಗೆ ಅಪಾಯಾಕಾರಿ ಡೆಲ್ಟಾ ಪ್ಲಸ್ ವೇರಿಯೆಂಟ್ ಇದೀಗ ಅತ್ಯಂತ ಸವಾಲಾಗಿ ಪರಿಣಮಿಸಿದೆ.

ಕೇರಳ ಮಹಾರಾ‍ಷ್ಟ್ರದಿಂದ ರಾಜ್ಯಕ್ಕೆ ಡೆಲ್ಟಾ ಪ್ಲಸ್ ಅಪಾಯ!. 

ಇದರ ನಡುವ 2ನೇ ಅಲೆ ತಗ್ಗಿದ ಕಾರಣ ಅನ್‌ಲಾಕ್ ಆರಂಭಗೊಂಡಿದೆ. ಹೀಗಾಗಿ ಡೆಲ್ಟಾ ಮತ್ತಷ್ಟು ತೀವ್ರವಾಗಿ ಹರಡುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಬ್ರಿಟನ್ ಸೇರಿದಂತೆ 50ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಡೆಲ್ಟಾ ಪ್ಲಸ್ ವೈರಸ್ ಪತ್ತೆಯಾಗಿದೆ. 3ನೇ ಅಲೆ ಇದೀಗ ಡೆಲ್ಟಾ ರೀತಿಯಲ್ಲೇ ಅಪ್ಪಳಿಸುವ ಸಾಧ್ಯತೆ ಬಲವಾಗುತ್ತಿದೆ.