ನವದೆಹಲಿ(ಏ.19): ರಾಷ್ಟ್ರವ್ಯಾಪಿ ಲಾಕ್‌ಡೌನ್‌ ಮಾಡಿ ಮೂರು ವಾರಗಳು ಕಳೆದ ಮೇಲೆ ದೇಶದಲ್ಲಿ ಕೊರೋನಾ ವೈರಸ್‌ ಹೇಗೆ ಹರಡಿದೆ ಎಂಬುದರ ವಿಶಿಷ್ಟಟ್ರೆಂಡ್‌ ಪತ್ತೆಯಾಗಿದೆ. ಸಾಮಾನ್ಯವಾಗಿ ದೇಶದ ಎಲ್ಲಾ ರಾಜ್ಯಗಳಲ್ಲೂ ತಲಾ ಮೂರು ಜಿಲ್ಲೆಗಳಲ್ಲಿ ಅತಿಹೆಚ್ಚು ಪ್ರಕರಣಗಳು ಕೇಂದ್ರೀಕೃತವಾಗಿವೆ.

ದೇಶದ ಸರಾಸರಿಯನ್ನು ತೆಗೆದುಕೊಂಡರೆ ಪ್ರತಿ ರಾಜ್ಯದ ಮೂರು ಜಿಲ್ಲೆಗಳಲ್ಲಿ ಆ ರಾಜ್ಯದ ಒಟ್ಟು ಕೊರೋನಾ ಪ್ರಕರಣಗಳ ಪೈಕಿ ಶೇ.69ರಷ್ಟುಪ್ರಕರಣಗಳಿವೆ. ಈ ಜಿಲ್ಲೆಗಳಲ್ಲೇ ಸಾವಿನ ಸಂಖ್ಯೆಯೂ ಹೆಚ್ಚಿದ್ದು, ಅದರ ಪ್ರಮಾಣ ಸೇ.63.9ರಷ್ಟಿದೆ. ಬಹುತೇಕ ರಾಜ್ಯಗಳಲ್ಲಿ ಈ ಮೂರು ಜಿಲ್ಲೆಗಳು ಪರಸ್ಪರ ಗಡಿ ಹಂಚಿಕೊಂಡಿರುವ ಜಿಲ್ಲೆಗಳೇ ಆಗಿವೆ.

ಕೊಡಗಿನಲ್ಲಿ ಚೈನ್‌ಬ್ರೇಕ್‌: ಸತತ 26 ದಿನಗಳಿಂದ ಹೊಸ ಸೋಂಕು ಇಲ್ಲ!

ಇನ್ನು, ಈ ಮೂರು ಜಿಲ್ಲೆಗಳಲ್ಲಿ ಗುಣಮುಖರಾದವರ ರಾಷ್ಟ್ರೀಯ ಸರಾಸರಿ ಶೇ.55.55ರಷ್ಟಿದೆ. ಕೊರೋನಾ ಸಂಖ್ಯೆ ಹೆಚ್ಚಿರುವ 25 ರಾಜ್ಯಗಳ 170 ಜಿಲ್ಲೆಗಳಲ್ಲಿ ಈ ಟ್ರೆಂಡ್‌ ಇದೆ. ಆದರೆ, ತಮಿಳುನಾಡಿನಲ್ಲಿ ಮಾತ್ರ ಹೀಗಿಲ್ಲ. ಅಲ್ಲಿ ಎಲ್ಲಾ ಜಿಲ್ಲೆಗಳಲ್ಲೂ ಕೊರೋನಾ ಪ್ರಕರಣಗಳು ಹಂಚಿಹೋಗಿವೆ.

ಕೊಡಗಿನಲ್ಲಿ ಚೈನ್‌ಬ್ರೇಕ್‌: ಸತತ 26 ದಿನಗಳಿಂದ ಹೊಸ ಸೋಂಕು ಇಲ್ಲ!

ದೇಶದಲ್ಲಿ ಕೊರೋನಾ ವೈರಸ್‌ ಹೇಗೆ ಹರಡಿದೆ ಎಂಬುದರ ಈ ಟ್ರೆಂಡ್‌ ಬೆಳಕಿಗೆ ಬರುವುದರೊಂದಿಗೆ ವೈರಸ್‌ ಸೋಂಕು ತಡೆಯಲು ಕೈಗೊಳ್ಳಬೇಕಾದ ಕ್ರಮಗಳನ್ನು ಕೂಡ ಇದಕ್ಕೆ ತಕ್ಕಂತೆ ಪರಿಣಾಮಕಾರಿಯಾಗಿ ರೂಪಿಸಲು ಸಾಧ್ಯವಿದೆ ಎಂದು ತಜ್ಞರು ಹೇಳಿದ್ದಾರೆ.

ಮಹಾರಾಷ್ಟ್ರ: ಮುಂಬೈ, ಪುಣೆ, ಥಾಣೆ: ಶೇ.89ರಷ್ಟುಪಾಲು

ಗುಜರಾತ್‌: ಅಹಮದಾಬಾದ್‌, ವಡೋದರಾ, ಸೂರತ್‌: ಶೇ.84 ಪಾಲು

ಮಧ್ಯಪ್ರದೇಶ: ಇಂದೋರ್‌, ಭೋಪಾಲ್‌, ಖರ್ಗಾಂವ್‌: ಶೇ.81 ಪಾಲು

ಕೇರಳ: ಕಾಸರಗೋಡು, ಕಣ್ಣೂರು, ಎರ್ನಾಕುಲಂ: ಶೇ. 63 ಪಾಲು

ಕರ್ನಾಟಕ: ಬೆಂಗಳೂರು, ಮೈಸೂರು, ಬೆಳಗಾವಿ: ಶೇ.63 ಪಾಲು

ಕೊರೋನಾ ಪ್ರಯೋಗಾಲಯದಲ್ಲಿ ಕೊಪ್ಪಳದ ವಿಜ್ಞಾನಿ...!

ಒಟ್ಟು ಕೇಸಲ್ಲಿ ಶೇ. 63 ಪಾಲು

ಆಂಧ್ರಪ್ರದೇಶ: ಗುಂಟೂರ್‌, ಕರ್ನೂಲ್‌, ನೆಲ್ಲೋರ್‌: ಶೇ. 63 ಪಾಲು

ತೆಲಂಗಾಣ: ಹೈದರಾಬಾದ್‌, ನಿಜಾಮಾಬಾದ್‌, ವಿಕರಾಬಾದ್‌: ಶೇ. 63 ಪಾಲು

ಉತ್ತರ ಪ್ರದೇಶ: ಆಗ್ರಾ, ಲಖನೌ, ಗೌತಮ ಬುದ್ಧ: ಶೇ.45 ಪಾಲು

ಬಿಹಾರ, ಹರ್ಯಾಣ, ಪಂಜಾಬ್‌ ಹಾಗೂ ರಾಜಸ್ಥಾನದ ತಲಾ ಮೂರು ಜಿಲ್ಲೆಗಳಲ್ಲಿ ಶೇ.60ರಷ್ಟುಪ್ರಕರಣಗಳಿವೆ.