ಚೆನ್ನೈ, (ಆ.16): ಕೊರೋನಾ ಸೋಂಕಿನಿಂದ ಐಸಿಯುಗೆ ಹೋಗಿದ್ದ ಖ್ಯಾತ ಗಾಯಕ ಎಸ್‌.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯದಲ್ಲಿ ಮತ್ತು ಸುಧಾರಣೆ ಕಂಡಿದೆ.

ಶನಿವಾರಗಿಂತಲೂ ಭಾನುವಾರಕ್ಕೆ ಸ್ವಲ್ಪ ಚೇತರಿಸಿಕೊಂಡಿದ್ದು, ಅವರಲ್ಲಿ ಚಲನೆ ಕಂಡುಬರುತ್ತಿದೆ. ಹಾಗೇ ಚಿಕಿತ್ಸೆ ನೀಡುತ್ತಿರುವ ವೈದ್ಯರನ್ನು ಗುರುತಿಸುತ್ತಿದ್ದಾರೆ ಎಂದು ಅವರ ಪುತ್ರ ಎಸ್​.ಪಿ. ಚರಣ್​ ತಿಳಿಸಿದ್ದಾರೆ.

SPB ಆರೋಗ್ಯದಲ್ಲಿ  ಚೇತರಿಕೆ, ಆಸ್ಪತ್ರೆಯಿಂದಲೇ ಗಾಯಕ ಸಂದೇಶ

ಫೇಸ್‌ಬುಕ್ ವಿಡಿಯೋ ಮೂಲಕ ತಮ್ಮ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ನೀಡಿರುವ  ಚರಣ್​,  ಎಸ್​ಪಿಬಿ ಶೀಘ್ರವೇ ಗುಣಮುಖರಾಗುತ್ತಾರೆ ಎಂಬ ಭರವಸೆಯನ್ನು ವೈದ್ಯರು ನೀಡಿದ್ದಾರೆ. ಹಾಗೇ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದು, ಮತ್ತೊಮ್ಮೆ ಅವರ ಆರೋಗ್ಯ ಸ್ಥಿತಿ ಗಂಭೀರವಾಗುವುದಿಲ್ಲ ಎಂದಿದ್ದಾರೆ ಎಂದು ತಿಳಿಸಿದ್ದಾರೆ.

ನನ್ನ ಅಪ್ಪನನ್ನು ಐಸಿಯುದಿಂದ ಎಕ್ಸ್ಲ್ಯೂಸಿವ್​ ಐಸಿಯುಗೆ ಸ್ಥಳಾಂತರಿಸಲಾಗಿದೆ. ಅವರಲ್ಲಿ ಚಲನೆ ಕಂಡುಬರುತ್ತಿದೆ ಎಂಬುದೇ ಸಮಾಧಾನ. ಇನ್ನೂ ವೆಂಟಿಲೇಟರ್​​ ಸಹಾಯದಲ್ಲೇ ಇದ್ದಾರೆ. ಕಳೆದ ಕೆಲವು ದಿನಗಳಿಂದ ಉಸಿರಾಟಕ್ಕೆ ತೀವ್ರ ಕಷ್ಟಪಡುತ್ತಿದ್ದರು. ಆದರೆ ಈಗ ಸ್ವಲ್ಪ ಆರಾಮಾಗಿ ಉಸಿರಾಡುತ್ತಿದ್ದಾರೆ ಎಂದೂ ಚರಣ್​ ಮಾಹಿತಿ ನೀಡಿದ್ದಾರೆ.

ವೈದ್ಯಕೀಯ ಸಿಬ್ಬಂದಿ ಅವರ ಶಕ್ತಿ ಮೀರಿ ಕೆಲಸ ಮಾಡುತ್ತಿದ್ದಾರೆ. ಈಗ ನನ್ನ ತಂದೆ ಸಂಪೂರ್ಣ ನಿದ್ರಾವಸ್ಥೆಯಲ್ಲಿಲ್ಲ. ಆರೋಗ್ಯ ಸುಧಾರಿಸುತ್ತಿದೆ. ಹಾಗೇ ಹಲವರು ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸುತ್ತಿದ್ದಾರೆ. ಎಲ್ಲರಿಗೂ ಕೃತಜ್ಞತೆಗಳು ಎಂದು ಹೇಳಿದ್ದಾರೆ.