ದೆಹಲಿ(ಎ.02): ಕೊರೋನಾದ 2ನೇ ಅಲೆ ಯುವ ಸಮುದಾಯಕ್ಕೆ ಮತ್ತು ಮಕ್ಕಳಿಗೆ ಮಾರಕವಾಗಿ ಪರಿಣಮಿಸುತ್ತಿದೆ. ಗ್ರಾಮೀಣ ಹಾಗು ಬುಡಕಟ್ಟು ಪ್ರದೇಶಗಳು ಮೊದಲ ಅಲೆಯಲ್ಲಿ ಹೆಚ್ಚಿನ ಪರಿಣಾಮದಿಂದ ತಪ್ಪಿಸಿಕೊಂಡಿದ್ದರೂ ಕೂಡ 2ನೇ ಅಲೆಯ ಭೀತಿ ಆ ಪ್ರದೇಶಗಳಿಗೂ ತಟ್ಟಲಿದೆ ಎಂದು ತಜ್ಞರ ಸಮಿತಿ ಎಚ್ಚರಿಸಿದೆ.

ಇದರ ನಡುವೆ ಕೊರೊನಾ ಕೇಸ್ ಗಳು ದೇಶದಲ್ಲಿ ತೀವ್ರಗತಿಯಲ್ಲಿ ಎರುತ್ತಿವೆ. ಈಗ ಸರಕಾರವೂ ಎಚ್ಚೆತ್ತುಕೊಂಡು ಲಸಿಕಾ ಅಭಿಯಾನದ ವೇಗವನ್ನು ಹೆಚ್ಚಿಸಿದೆ. 45 ವರ್ಷಕ್ಕೆ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ನೀಡಲು ಗುರುವಾರದಿಂದ ಚಾಲನೆ ನೀಡಲಾಗಿದೆ.

"

ಈಗಾಗಲೆ ದೇಶದ ಹಲವು ಪ್ರಮುಖ ರಾಜ್ಯಗಳಲ್ಲಿ ಕೊರೋನ ವೇಗವಾಗಿ ಹಬ್ಬುತ್ತಿದ್ದು ಹೆಚ್ಚಾಗಿ ಯುವ ಸಮುದಾಯ ಮತ್ತು ಪುಟ್ಟ ಮಕ್ಕಳು ಕೊರೋನಾದ ಸೋಂಕಿತರಾಗುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಅಂದರೆ ಬಹುತೇಕ ಶಾಲಾ ಕಾಲೇಜುಗಳು ಮತ್ತು ಕಚೇರಿಗಳು ಪುನರ್ ಆರಂಭವಾಗಿವೆ.

ಬಂದ್ ಕೋಣೆಗಳಲ್ಲಿ ಕೆಲಸಗಳು ಹಾಗು ತರಗತಿಗಳು ನಡೆಯತ್ತಿರುವುದು ಸೋಂಕು ಹರಡಲು ಕಾರಣವಾಗುತ್ತಿರುವುದು. ಮುಚ್ಚಿದ ಆವರಣಗಳಲ್ಲಿ ವೈರಸ್ ವೇಗವಾಗಿ ಹಬ್ಬುತ್ತವೆ. ಮತ್ತು ಅಲ್ಲಿ ನಡೆಯುತ್ತಿರುವ ಕೆಲವೊಂದು ಕಾರ್ಯಕ್ರಮಗಳು ಸುಪರ್ ಸ್ಪ್ರೆಡರ್‌ಗಳಾಗಿ ಪರಿಣಮಿಸುತ್ತಿವೆ. ತಜ್ಞರ ಪ್ರಕಾರ ಕೋವಿಡ್ ಕೇಸ್ ಗಳು ಮೇ ತಿಂಗಳಲ್ಲಿ ಉತ್ತುಂಗಕ್ಕೆ ಹೋಗುವ ಸಾದ್ಯತೆ ಇದೆ ಎನ್ನಲಾಗಿದೆ.

ರಾತ್ರಿ 8.30ಕ್ಕೆ ಜನತೆಯನ್ನುದ್ದೇಶಿ ಸಿಎಂ ಭಾಷಣ; ಮಹಾರಾಷ್ಟ್ರದಲ್ಲಿ ಮತ್ತೊಂದು ಲಾಕ್‌ಡೌನ್?

ಇದು ಹೀಗೆ ಮುಂದುವರಿದರೆ ಆರೋಗ್ಯ ಇಲಾಖೆಯ ಮೇಲೆ ಒತ್ತಡ ಹೆಚ್ಚಾಗಲಿದೆ ಅನ್ನುತ್ತಿದ್ದಾರೆ ಸಾರ್ವಜನಿಕ ಆರೋಗ್ಯ ಪ್ರತಿಷ್ಠಾನದ, ಸಾಂಕ್ರಾಮಿಕ ರೋಗಶಾಸ್ತ್ರದ, ಲೈಫ್ ಕೋರ್ಸ್ ಮುಖ್ಯಸ್ಥ ಗಿರಿಧರ್ ಆರ್. ಬಾಬು. 

ದೇಶದಲ್ಲಿ ಮಹರಾಷ್ಟ್ರ ಅತಿ ಹೆಚ್ಚು ಸೋಂಕಿಗೆ ಒಳಗಾದ ಪ್ರದೇಶವಾಗಿದೆ. ಆದರೆ ಲಸಿಕೆಯನ್ನು ಎಲ್ಲಾ ವಯೋಮಾನದ ಜನರಿಗೆ ತಲುಪಿಸುವ ಜೊತೆಗೆ ದುರ್ಬಲರು, ಅಪೌಷ್ಟಿಕತೆಯಿಂದ ಬಳಲುತ್ತಿರುವವರಿಗೆ ತಲುಪುವಂತೆ ನೋಡಿಕೊಳ್ಳಬೇಕು ಇದರಿಂದ ಹೆಚ್ಚಿನ ಅಪಾಯ ಹಾಗು ಸಾವಿನ ಸಂಭವವನ್ನ ತಡೆಯಬಹುದಾಗಿದೆ ಎಂದು ಡಾ. ಬಾಬು ಅಭಿಪ್ರಾಯ ಪಟ್ಟರು.

ಕೊರೊನಾ ಸೋಂಕು ಹೆಚ್ಚಳ: ಮತ್ತೆ ಟಫ್ ರೂಲ್ಸ್ ಜಾರಿಯಾಗುವುದು ಪಕ್ಕಾ..?

ಗ್ರಾಮೀಣ  ಹಾಗು ಬುಡಕಟ್ಟು ಪ್ರದೇಶಗಳು ಈಗಾಗಲೇ ಭೀಕರ ಪರಿಸ್ಥಿತಿಯನ್ನು ಎದುರಿಸುತ್ತಿವೆ ಎಂದು ತಿಳಿಸಿದ ಭಾರತೀಯ ವೈದ್ಯಕೀಯ ಸಂಘದ ಸದಸ್ಯ (ಐಎಮ್ಎ) ರವಿ ವಾಂಖೆಡ್ಕರ್, ಅಪೌಷ್ಟಿಕತೆಯು ರೋಗ ನಿರೋದಕ ಶಕ್ತಿ ಕಡಿಮೆ ಆಗಲು ಕಾರಣವಾಗಿದೆ. ಅದರೊಂದಿಗೆ ಕೊರೊನಾದ ನೀತಿಯ ಉಲ್ಲಂಘನೆ ಮಾಡಿ ನಡೆಯುತ್ತಿರುವ ಸಾರ್ವಜನಿಕ ಕಾರ್ಯಕ್ರಮಗಳು, ಮದುವೆ ಸಮಾರಂಭಗಳು, ಇತರ ಸಭೆ ಸಮಾರಂಭಗಳು ಕೂಡ ಕೇಸ್ ಹೆಚ್ಚಳಕ್ಕೆ ಕಾರಣವಾಗಿದೆ ಎಂದರು.

ಮೂರನೆ ಹಂತದ ಲಸಿಕಾ ಅಭಿಯಾನಕ್ಕೆ ಈಗಾಗಲೆ ಚಾಲನೆದೊರೆತಿದ್ದು ಇದರಲ್ಲಿ 45 ವರ್ಷಕ್ಕೂ ಮೇಲ್ಪಟ್ಟವರಿಗೆ ಇದರ ಪ್ರಯೋಜನ ದೊರೆಯಲಿದೆ. ಈ ಭಾರಿ ಉತ್ತಮ ಪ್ರತಿಕ್ರೀಯೆ ದೊರೆಯುತ್ತಿದ್ದು ವಾರಾಂತ್ಯದಲ್ಲಿ ಇನ್ನೂ ಹೆಚ್ಚಿನ ಜನ ಇದರ ಪ್ರಯೋಜನ ಪಡೆಯುವ ನಿರೀಕ್ಷೇಯಿದೆ. ಹಾಗು ಆಸ್ಪತ್ರೆಗಳಲ್ಲಿ ಈಗಾಗಲೆ ಸಾಕಷ್ಟು ಲಸಿಕೆಗಳು ದಾಸ್ತಾನಿದ್ದು ಲಸಿಕೆಯ ಕೊರತೆ ಆಗಲಾರದು. ದಿನವೊಂದಕ್ಕೆ 2000 ಲಸಿಕೆಗಳನ್ನ ಪ್ರತಿ ಆಸ್ಪತ್ರೆಯಲ್ಲಿ ನೀಡಬಹುದಾಗಿದೆ. ಹಾಗು ಈಗ ಆನ್ ಲೈನ್ ನೊಂದಣಿಯೊಂದಿಗೆ, ವಾಕ್ ಇನ್ ಡ್ರೈವ್, ಸ್ಥಳದಲ್ಲೇ ನೊಂದಣಿ ಮಾಡಿಕೊಳ್ಳುವುದರ ಮೂಲಕ ಫಲಾನುಭವಿಗಳು ಲಸಿಕೆಯನ್ನ ಪಡೆಯಬಹುದಾಗಿದೆ. ಸದ್ಯ ಸೋಮವಾರದಿಂದ ಶನಿವಾರದ ವರೆಗೆ ಬೆಳಗ್ಗೆ 9 ರಿಂದ ರಾತ್ರಿ 9 ರ ವರೆಗೆ ಲಸಿಕೆ ಹಾಕಲಾಗುತ್ತಿದೆ. ಅವಶ್ಯಕತೆ ಬಿದ್ದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಯದವರೆಗೂ ವಿಸ್ತರಿಸ ಬಹುದು ಎಂದು ಮ್ಯಾಕ್ಸ ಸುಪರ್ ಸ್ಪೆಷಾಲಿಟಿ ಆಸ್ಪತ್ರೆಯ ಮೆಡಿಕಲ್ ಸುಪರಿಡೆಂಟ್ ಆದ ಸಹಾರ ಕುರೇಶಿ ಅವರು ತಿಳಿಸಿದರು.