ಅಯೋಧ್ಯೆ(ಮೇ.26): ಕೊರೋನಾ ಪರಿಣಾಮ ಅಯೋಧ್ಯೆ ರಾಮಮಂದಿರ ನಿರ್ಮಾಣದ ದೇಣಿಗೆ ಸಂಗ್ರಹದ ಮೇಲೂ ಪರಿಣಾಮ ಬೀರಿದೆ. ಮಂದಿರ ನಿರ್ಮಾಣಕ್ಕೆಂದು ರಚನೆ ಆಗಿರುವ ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ಗೆ ಹೆಸರಲ್ಲಿ ಮಾಚ್‌ರ್‍ನಲ್ಲಿ 2 ಬ್ಯಾಂಕ್‌ ಖಾತೆ ತೆರೆಯಲಾಗಿದೆ.

ಈ ಪೈಕಿ ಒಂದರಲ್ಲಿ 2 ಕೋಟಿ ಹಾಗೂ ಇನ್ನೊಂದರಲ್ಲಿ 2.7 ಕೋಟಿ ರು. ದೇಣಿಗೆ ಸಂಗ್ರಹವಾಗಿದೆ. ಆದರೆ ಇದಕ್ಕೂ ಹೆಚ್ಚು ದೇಣಿಗೆ ಸಂಗ್ರಹ ಆಗಬಹುದು ಎಂದು ನಿರೀಕ್ಷಿಸಲಾಗಿತ್ತು.

ರಾಮ ಮಂದಿರ ನಿರ್ಮಾಣ ಕಾರ್ಯ: ಭೂಮಿ ಅಗೆದಾಗ ಸಿಕ್ತು ಮೂರ್ತಿ ಹಾಗೂ ಮಂದಿರದ ಅವಶೇಷ!

ಈ ಬಗ್ಗೆ ಪ್ರತಿಕ್ರಿಯಿಸಿದ ಟ್ರಸ್ಟ್‌ ಸದಸ್ಯರೊಬ್ಬರು, ‘ಒಂದೊಮ್ಮೆ ಮಂದಿರ ನಿರ್ಮಾಣ ಕಾಮಗಾರಿ ಆರಂಭವಾಯಿತು ಎಂದರೆ ದೇಣಿಗೆ ಸಂಗ್ರಹ ಹೆಚ್ಚಬಹುದು’ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಂದಿರವು ಈಗಾಗಲೇ 12 ಕೋಟಿ ರು. ನಿಶ್ಚಿತ ಠೇವಣಿ (ಎಫ್‌ಡಿ), ಚಿನ್ನದ ಆಭರಣಗಳು ಹಾಗೂ ರಾಮಜನ್ಮಭೂಮಿ ನ್ಯಾಸ್‌ ಕೊಟ್ಟ1 ಕೊಟಿ ರು.ವನ್ನೂ ಹೊಂದಿದೆ. ಆದರೆ ಇವು ಇನ್ನೂ ಟ್ರಸ್ಟ್‌ ಹೆಸರಿಗೆ ವರ್ಗಾವಣೆ ಆಗಿಲ್ಲ.