Asianet Suvarna News Asianet Suvarna News

ಕೊರೋನಾ ಭೀತಿ: ಪಬ್ಲಿಕ್‌ನಲ್ಲಿ ಸೀನಿದ್ದಕ್ಕೆ ಬಿತ್ತು ಗೂಸಾ..!

ಕೊರೋನಾ ವೈರಸ್ ಭೀತಿ ಜನರನ್ನು ಕಂಗಾಲಾಗಿಸಿದೆ. ವೖರಸ್ ಬಗ್ಗೆ ಜನ ಎಷ್ಟು ಭಯ ಪಡುತ್ತಿದ್ದಾರೆ ಎಂದರೆ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ವ್ಯಕ್ತಿ ಪಬ್ಲಿಕ್‌ನಲ್ಲಿ ಸೀನಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದೆ.

 

Coronavirus Man Beaten Up For Sneezing In Public
Author
Bangalore, First Published Mar 20, 2020, 10:05 AM IST

ಕೊಲ್ಹಾಪುರ[ಮಾ.20]: ಕೊರೋನಾ ವೈರಸ್ ಭೀತಿ ಜನರನ್ನು ಕಂಗಾಲಾಗಿಸಿದೆ. ವೖರಸ್ ಬಗ್ಗೆ ಜನ ಎಷ್ಟು ಭಯ ಪಡುತ್ತಿದ್ದಾರೆ ಎಂದರೆ ಮಹಾರಾಷ್ಟ್ರದ ಹಳ್ಳಿಯೊಂದರಲ್ಲಿ ವ್ಯಕ್ತಿ ಪಬ್ಲಿಕ್‌ನಲ್ಲಿ ಸೀನಿದ್ದಕ್ಕೆ ಆತನ ಮೇಲೆ ಹಲ್ಲೆ ಮಾಡಲಾಗಿದೆ.

ರಸ್ತೆಯಲ್ಲಿ ಸಾರ್ವಜನಿಕವಾಗಿ ಸೀನಿದ್ದಕ್ಕೆ ವ್ಯಕ್ತಿಗೆ ಗೂಸಾ ಬಿದ್ದಿದೆ. ಇಷ್ಟೇ ಅಲ್ಲ ಕೆಲ ಹೊತ್ತು ಆ ಪ್ರದೇಶದಲ್ಲಿ ಸಂಚಾರ ದಟ್ಟಣೆಯೂ ಉಂಟಾಗಿದೆ. ಕೊಲ್ಹಾಪುರದ ಗುಜಾರಿ ಎಂಬಲ್ಲಿ ಘಟನೆ ನಡೆದಿದ್ದು, ಬೈಕ್ ಸವಾರನೊಬ್ಬ ಬೈಕ್ ನಿಲ್ಲಿಸಿ ಇನ್ನೊಂದು ಬೈಕ್ಕ್‌ನಲ್ಲಿದ್ದ ವ್ಯಕ್ತಿಯನ್ನು ತರಾಟೆಗೆ ತೆಗೆದುಕೊಂಡಿದ್ದಾನೆ.

ಇನ್ಫಿ ಕ್ಯಾಂಪಸ್‌ನಿಂದ 10 ಸಾವಿರ ಜನ ವಾಪಸ್

ಸೀನುವಾಗ ಟಿಶ್ಯೂ ಅಥವಾ ಹ್ಯಾಂಡ್ ಕರ್ಚೀಫ್ ಯಾಕೆ ತೆಗೆದುಕೊಂಡಿಲ್ಲ ಎಂದು ಬೈಕ್ ಸವಾರ ಇನ್ನೊಬ್ಬ ಬೈಕ್ ಸವಾರನನ್ನು ಪ್ರಶ್ನಿಸಿದ್ದಾನೆ. ಇದೇ ವಿಚಾರವಾಗಿ ವಾಗ್ವಾದ ನಡೆದು ಇಬ್ಬರ ನಡುವೆ ಜಗಳವಾಗಿದೆ.

ಇಬ್ಬರ ನಡುವೆ ವಾಗ್ವಾದ ನಡೆದು ಪಬ್ಲಿಕ್‌ನಲ್ಲಿ ಸೀನಿದ ವ್ಯಕ್ತಿ ಮೇಲೆ ಹಲ್ಲೆ ನಡೆಸಲಾಗಿದೆ. ಟಿಶ್ಯೂ ಹಿಡಿಯದಿರುವುದಕ್ಕೆ ನಡು ರಸ್ತೆಯಲ್ಲೇ ರದ್ಧಾಂತ ನಡೆದಿದೆ. ಘಟನೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಘಟನೆ ಬಗ್ಗೆ ಯಾರೂ ದೂರು ದಾಖಲಿಸಿಲ್ಲ.

ಮಂಗಳೂರು: ಕಟೀಲಿಗೆ ಭೇಟಿ ನೀಡಿದ ಕೊರೋನಾ ಶಂಕಿತ

ಮಹಾರಾಷ್ಟ್ರದಲ್ಲಿ 49 ಕನ್ಫರ್ಮ್ ಕೊರೋನಾ ಪ್ರಕರಣಗಳು ಪತ್ತೆಯಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ಕೊರೋನಾ ವೖರಸ್ ಸೋಂಕು ತಗುಲಿದ ವ್ಯಕ್ತಿ ಸೀನುವುದರಿಂದ, ಕೆಮ್ಮುವುದರಿಂದ, ಉಗುಳುವುದರಿಂದ ಮತ್ತು ಮುಟ್ಟುವುದರಿಂದ ವೈರಸ್ ಹರಡುತ್ತದೆ.

Follow Us:
Download App:
  • android
  • ios