ಮಂಗಳವಾರ ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮೋದಿ ಮಾತು!
ಕೊರೋನಾ ವೈರಸ್ ತಾಂಡವ, ನಾಲ್ಕನೇ ಬಾರಿ ದೇಶವನ್ನುದ್ದೇಶಿಸಿ ಮೋದಿ ಮಾತು| ಮಂಗಳವಾರ ಬೆಳಗ್ಗೆ ಹತ್ತು ಗಂಟೆಗೆ ಲಾಕ್‌ಡೌನ್ ವಿಸ್ತರಿಸುವ ಬಗ್ಗೆ ಅಧಿಕೃತ ಘೋಷಣೆ?| ಟ್ವಿಟರ್ ಮೂಲಕ ಮಾಹಿತಿ ನೀಡಿದ ಪಿಎಂಒ
ನವದೆಹಲಿ(ಏ.13): ದೇಶವನ್ನಾವರಿಸಿರುವ ಕೊರೋನಾ ತಡೆಗೆ ವಿಧಿಸಲಾಗಿದ್ದ 21 ದಿನಗಳ ಲಾಕ್‌ಡೌನ್ ನಾಳೆ ಅಂತ್ಯವಾಗಲಿದೆ. ಹೀಗಿರುವಾಗ ಲಾಕ್‌ಡೌನ್ ವಿಸ್ತರಣೆ ಮಾಡಬೇಕೆಂಬ ಕೂಗು ಜೋರಾಗಿದೆ. ಈಗಾಗಲೇ ಸಿಎಂಗಳ ಜೊತೆ ಪಿಎಂ ಮೋದಿ ಸಭೆ ನಡೆಸಿ, ರಾಜ್ಯಾವಾರು ವರದಿ ಪಡೆದುಕೊಂಡಿದ್ದಾರೆ. ಅಲ್ಲದೇ ಪಿಎಂ ಮೋದಿ ಕೊರೋನಾ ಪ್ರಕರಣಗಳು ಹೆಚ್ಚುತ್ತಿರುವುದಕ್ಕೆ ಸಂಬಂಧಿಸಿದಂತೆ ಕಳವಳ ವ್ಯಕ್ತಪಡಿಸಿದ್ದು, ಲಾಕ್‌ಡೌನ್ ಮುಂದುವರೆಸುವ ಸೂಚನೆ ನೀಡಿರುವುದಾಗಿ ಈಗಾಗಲೇ ಸಿಎಂಗಳು ನಡೆಸಿರುವ ಸುದ್ದಿಗೋಷ್ಟಿಯಲ್ಲಿ ಸ್ಪಷ್ಟವಾಗಿದೆ. ಆದರೆ ಮಾರ್ಸೂಚಿಗಳೇನು ಎಂಉವುದು ಬಹಿರಂಗವಾಗಿರಲಿಲ್ಲ.
"
ದೇಶದಲ್ಲಿ ಮೂರು ವಲಯ ರಚಿಸಿ ಲಾಕ್‌ಡೌನ್ 2.0 ಜಾರಿ?
ಸದ್ಯ ಪ್ರಧಾನ ಮಂತ್ರಿಗಳ ಅಧಿಕೃತ ಟ್ವಿಟರ್ ಖಾತೆಯಿಂದ ಟ್ವೀಟ್ ಒಂದನ್ನು ಮಾಡಲಾಗಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಏಪ್ರಿಲ್ 14 ರಂದು ಬೆಳಗ್ಗೆ 10 ಗಂಟೆಗೆ ದೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ. ಕೊರೋನಾ ಸೋಂಕು ದೇಶದಲ್ಲಿ ಕಾಣಿಸಿಕೊಂಡ ಬಳಿಕ ನಾಲ್ಕನೇ ಬಾಋಇ ಮೋದಿ ದೇಶವನ್ನುದ್ದೇಶಿಸಿ ಮಾತನಾಡಲಿದ್ದು, ಅವರು ಏನು ಹೇಳಬುದು? ಲಾಕ್‌ಡೌನ್ ವಿಸ್ತರಣೆ ಕುರಿತು ಏನು ಹೇಳಬಹುದು? ಲಾಕ್‌ಡೌನ್ ಕುರಿತು ಯಾವೆಲಲಾ ಮಾರ್ಗಸೂಚಿಗಳನ್ನು ವಿಧಿಸಬಹುದೆಂಬ ಕುತೂಲ ಮನೆ ಮಾಡಿದೆ.
"
ಈಗಾಗಲೇ ತೆಲಂಗಾಣ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಇಡಿಶಾ ಹಾಗೂ ಪಂಜಾಬ್ ಸರ್ಕಾರ ತಮ್ಮ ರಾಜ್ಯದಲ್ಲಿ ಲಾಕ್‌ಡೌನ್ ವಿಸ್ತರಣೆ ಮಾಡಿದೆ. ಇತ್ತ ಕರ್ನಾಟಕ ಸಿಎಂ ಬಿ. ಎಸ್. ಯಡಿಯೂರಪ್ಪ ಕೂಡಾ ಲಾಕ್‌ಡೌನ್ ವಿಸ್ತರಣೆ ಮಾಡುವಂತೆ ಮನವಿ ಮಾಡಿದ್ದು, ಅನೇಕ ರಾಜ್ಯಗಳು ಇದೇ ಸಲಹೆ ನೀಡಿದ್ದಾರೆ. ಹೀಗಿರುವಾಗ ಲಾಕ್‌ಡೌನ್ ಏಪ್ರಿಲ್ 30ರವರೆಗೆ ವಿಸ್ತರಣೆಯಾಗೋದು ಬಹುತೇಕ ಖಚಿತವಾಗಿದೆ.
ಇನ್ನು ಭಾರತದಲ್ಲಿ ಕೊರೋನಾ ತಾಂಡವ ಹೆಚ್ಚಿದ್ದು, ಸೋಂಕಿತರ ಸಂಖ್ಯೆ 9,240ಕ್ಕೆ ತಲುಪಿದ್ದು, 331 ಮಂದಿ ಮೃತಪಟ್ಟಿದ್ದಾರೆ.