Asianet Suvarna News Asianet Suvarna News

ಟ್ರಂಪ್‌ ಪ್ರತೀಕಾರದ ಮಾತು: 24 ಔಷಧಗಳ ರಫ್ತು ನಿಷೇಧ ಹಿಂಪಡೆದ ಭಾರತ!

ಅಮೆರಿಕದ ಪ್ರತೀಕಾರದ ಮಾತು| ಟ್ರಂಪ್ ಎಚ್ಚರಿಕೆ ಬೆನ್ನಲ್ಲೇ ಔಷಧ ರಫ್ತು ಮತ್ತೆ ಅರಂಭಿಸಲು ಭಾರತದ ನಿರ್ಧಾರ| 24 ಔಷಧ ಮೇಲಿನ ರಫ್ತು ತೆರವು

Coronavirus India lifts restrictions on 24 drug exports as global crisis deepens
Author
Bangalore, First Published Apr 7, 2020, 12:53 PM IST

ನವದೆಹಲಿ(ಏ.07): ಕೊರೋನಾ ಪೀಡಿತರ ಚಿಕಿತ್ಸೆಗಾಗಿ ಬಳಸಲಾಗುವ ಮಲೇರಿಯಾ ತಡೆಗಟ್ಟುವ ಔಷಧಿ ಹೈಡ್ರಾಕ್ಸಿಕ್ಲೋರೋಕ್ವಿನ್  ರಫ್ತಿನ ಮೇಲಿನ ನಿಷೇಧವನ್ನು ಹಿಂಪಡೆಯದಿದ್ದಲ್ಲಿ  ಪ್ರತೀಕಾರ ಪಡೆಯುವ ಸಾಧ್ಯತೆ ಇದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ ಬೆನ್ನಲ್ಲೇ, 24 ಔಷಧಿಗಳ ರಫ್ತಿನ ಮೇಲಿನ ನಿರ್ಬಂಧವನ್ನು ಭಾಗಶಃ ತೆಗೆದು ಹಾಕಲು ಭಾರತ ಸರ್ಕಾರ ನಿರ್ಧರಿಸಿದೆ.

ಭಾರತ ಔ‍ಷಧಿ ರಫ್ತು ಮಾಡದಿದ್ದರೆ ಪ್ರತೀಕಾರ: ಟ್ರಂಪ್ ಎಚ್ಚರಿಕೆ!

ಈ ಸಂಬಂಧ ಪ್ರತಿಕ್ರಿಯಿಸಿರುವ ವಿದೇಶಾಂಗ ವ್ಯವಹಾರ ವಕ್ತಾರ ಅನುರಾಗ್ ಶ್ರೀವಾಸ್ತವ್ 'ಕೊರೋನಾ ವೈರಸ್‌ನಿಂದ ಜರ್ಝರಿತವಾಗಿರುವ ಕೆಲ ದೇಶಗಳಿಗೆ ಮಲೇರಿಯಾ ಚಿಕಿತ್ಸೆಗೆ ಬಳಸಲಾಗುವ ಔಷಧವನ್ನು ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಒಂದು ಜವಾಬ್ದಾರಿಯುತ ಸರ್ಕಾರವಾಗಿ ಜನರ ಅವಶ್ಯಕತೆಗಾಗಿ ಸಾಕಷ್ಟು ಔಷಧ ಸಂಗ್ರಹ ಇರುವುದನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಮೊದಲ ಆಧ್ಯತೆ. ಸಾಕಷ್ಟು ಔಷಧ ಲಭ್ಯತೆ ಇದೆ ಎಂಬುವುದನ್ನು ಖಚಿತಪಡಿಸಿಕೊಂಡ ಬಳಿಕ ಮಲೇರಿಯಾ ನಿರೋಧಕ ಔಷಧ ಮೇಲಿನ ನಿರ್ಬಂಧ ತೆಗೆದುಹಾಕಲಾಗಿದೆ'' ಎಂದಿದ್ದಾರೆ.

ಕೊರೋನಾ ತಾಂಡವ: ಭಾರತದ ಸಹಾಯ ಯಾಚಿಸಿದ ವಿಶ್ವದ ದೊಡ್ಡಣ್ಣ!

ಕೊರೋನಾ ವೈರಸ್​ ಪ್ರಕರಣಗಳು ಒಂದಾದ ಬಳಿಕ ಮತ್ತೊಂದರಂತೆ ವರದಿಯಾದ ಬೆನ್ನಲ್ಲೇ ಭಾರತ ದೇಶಾದ್ಯಂತ ಇಪ್ಪತ್ತೊಂದು ದಿನ ಲಾಕ್​ಡೌನ್ ಘೋಷಿಸಿತ್ತು. ಹೀಗಿರುವಾಗ ಇತರ ದೇಶಗಳೊಂದಿಗಿನ ಸಂಪರ್ಕವೂ  ನಿಂತು ಹೋಗಿತ್ತು. ಅಂತಾರಾಷ್ಟ್ರೀಯ ವಿಮಾನ, ಹಡಗು ಈಗೆ ಎಲ್ಲಾ ಸಾರಿಗೆ ಸಂಚಾರ ಸ್ಥಗಿತಗೊಂಡಿದ್ದರಿಂದ ಮತ್ತು ಲಾಕ್​ಡೌನ್​ನಿಂದ ಔಷಧ ತಯಾರಿಕೆಯೂ ನಿಂತ ಪರಿಣಾಮ ಭಾರತ 26 ಔಷಧಗಳ ರಫ್ತು ಮಾಡುವುದನ್ನೂ ತಡೆ ಹಿಡಿದಿತ್ತು. ಆದರೀಗ ಿವುಗಳಲ್ಲಿ 24 ಔಷಧಗಳ ಮೇಲಿನ ನಿಷೇಧ ತೆರವುಗೊಳಿಸಲಾಗಿದೆ.  ಹೀಗಿದ್ದರೂ ನೋವು ನಿವಾರಕವಾಗಿ ಬಳಸಲಾಗುವ ಪ್ಯಾರಾಸಿಟಮಲ್ ಮಾತ್ರೆಯ ಮೇಲಿನ ನಿಷೇಧವನ್ನು ತೆರವುಗೊಳಿಸಿಲ್ಲ. 

ಲಾಕ್​ಡೌನ್ ಅಂತ್ಯಗೊಳ್ಳುವ ಮೊದಲೇ ಏಕಾಏಕಿ 24 ಔಷಧಗಳ ರಫ್ತು ನಿಷೇಧ ತೆರವುಗೊಳಿಸಿದ್ದು ಏಕೆ ಎಂಬುವುದನ್ನು ಸರ್ಕಾರ ಬಹಿರಂಗಪಡಿಸಿಲ್ಲ. ಆದರೆ ಅಮೆರಿಕದ ಒತ್ತಡ ಹೆಚ್ಚಾಗಿದ್ದರಿಂದಲೇ ಈ ನಿಷೇಧವನ್ನು ತುರ್ತಾಗಿ ತೆರವುಗೊಳಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ.

ಅಮೆರಿಕಾದಲ್ಲಿ ಕೊರೋನಾ ತಾಂಡವ

ಸದ್ಯ ಅಮೆರಿಕಾದಲ್ಲಿ ಕೋವಿಡ್ 19 ಅಟ್ಟಹಾಸ ಮೆರೆಯುತ್ತಿದ್ದು 10,871 ಜನರು ಬಲಿಯಾಗಿದ್ದು, 3,67,004 ಜನ ಸೋಂಕು ಪೀಡಿತರಾಗಿದ್ದಾರೆ ಎಂದು ವರದಿ ತಿಳಿಸಿದೆ.

Follow Us:
Download App:
  • android
  • ios