ಬೀಜಿಂಗ್‌[ಫೆ.12]: ಚೀನಾದಲ್ಲಿ ಮಾರಕ ಕೊರೋನಾ ವೈರಸ್‌ ಮತ್ತಷ್ಟುವ್ಯಾಪಿಸಿದ್ದು, ಸೋಮವಾರ ಒಂದೇ ದಿನ 108 ಮಂದಿ ಸಾವಿಗೀಡಾಗಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಒಂದು ಸಾವಿರ ದಾಟಿದೆ. ಅಲ್ಲದೇ ಕೊರೋನಾ ವೈರಸ್‌ ಇರುವುದು ದೃಢ ಪಟ್ಟವರ ಸಂಖ್ಯೆ 42,638ಕ್ಕೆ ಏರಿಕೆ ಆಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ವಿಶ್ವ ಆರೋಗ್ಯ ಸಂಸ್ಥೆ ನೇತೃತ್ವದ ತಜ್ಞ ವೈದ್ಯರ ತಂಡವೊಂದು ಚೀನಾಕ್ಕೆ ಆಗಮಿಸಿದ್ದು, ರೋಗ ನಿಯಂತ್ರಣಕ್ಕೆ ಸೂಕ್ತ ನೆರವು ನೀಡುತ್ತಿದೆ.

ಕೊರೋನಾಗೆ ಹೋಮಿಯೋಪತಿ ಔಷಧ ಇಲ್ಲ: ಸರ್ಕಾರ ಸ್ಪಷ್ಟನೆ!

1016: ಈವರೆಗೆ ಚೀನಾದಲ್ಲಿ ವೈರಸ್‌ಗೆ ಬಲಿಯಾದವರು

2,478: ಹೊಸದಾಗಿ ಇಷ್ಟುಜನರಲ್ಲಿ ವೈರಸ್‌ ಪತ್ತೆ

21675: ಇಷ್ಟುಜನರಿಗೆ ಸೋಂಕು ತಗುಲಿರುವ ಶಂಕೆ

7,333: ಸೋಂಕಿನಿಂದಾಗಿ ಇನ್ನೂ ಗಂಭೀರ ಸ್ಥಿತಿಯಲ್ಲಿ ಇರುವವರು

1.87 ಲಕ್ಷ: ಇಷ್ಟುಜನರು ವೈದ್ಯಕೀಯ ನಿಗಾದಲ್ಲಿ ಇಟ್ಟು ತಪಾಸಣೆ