Asianet Suvarna News Asianet Suvarna News

ದೇಶದಲ್ಲಿ 40,000 ಗಡಿಗೆ ಸೋಂಕಿತರು: ಒಂದೇ ದಿನ 2,067 ಮಂದಿಗೆ ಸೋಂಕು!

40000 ಗಡಿಗೆ ಸೋಂಕಿತರು| ನಿನ್ನೆ ಮತ್ತೆ 2067 ಜನರಿಗೆ ಸೋಂಕು, 71 ಜನರ ಸಾವು| ಮಹಾರಾಷ್ಟ್ರ, ಗುಜರಾತ್‌ನಲ್ಲಿ ಹೆಚ್ಚು ಪ್ರಕರಣ, ಸಾವು

Coronavirus cases in India near 40000 highest jump in 24 hours
Author
Bangalore, First Published May 3, 2020, 11:33 AM IST
  • Facebook
  • Twitter
  • Whatsapp

ನವದೆಹಲಿ(ಮೇ.03): ಸತತ ಮೂರನೇ ದಿನವೂ ದೇಶದಲ್ಲಿ ಕೊರೋನಾ ಸೋಂಕಿತರ ಪ್ರಕರಣದಲ್ಲಿ ಭಾರೀ ಏರಿಕೆ ಕಂಡುಬಂದಿದ್ದು, ಶನಿವಾರ ಒಂದೇ ದಿನ ದೇಶಾದ್ಯಂತ 2067 ಜನರಲ್ಲಿ ಹೊಸದಾಗಿ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಒಟ್ಟಾರೆ ಸೋಂಕಿತರ ಸಂಖ್ಯೆ 39248ಕ್ಕೆ ತಲುಪಿದೆ. ಮತ್ತೊಂದೆಡೆ ಶನಿವಾರ ಮತ್ತೆ 71 ಜನ ಸೋಂಕಿಗೆ ಬಲಿಯಾಗಿದ್ದು, ಒಟ್ಟಾರೆ ಸಾವಿನ ಸಂಖ್ಯೆ 1293ಕ್ಕೆ ತಲುಪಿದೆ. ಶುಕ್ರವಾರ 2520 ಪ್ರಕರಣ ಬೆಳಕಿಗೆ ಬಂದಿದ್ದು, ಇದುವರೆಗಿನ ಗರಿಷ್ಠವಾಗಿತ್ತು.

ಈ ವರೆಗೆ ದೇಶದಲ್ಲಿ 10,017 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. ದೇಶದಲ್ಲಿ ಗುಣಮುಖರಾಗುವ ಪ್ರಮಾಣ ಶೇ.26.52ರಷ್ಟಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಜೊತೆಗೆ ಇದುವರೆಗೆ 10 ಲಕ್ಷ ಜನರನ್ನು ಕೊರೋನಾ ಸೋಂಕು ಪತ್ತೆ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ತಿಳಿಸಿದೆ.

ಭಾರೀ ಏರಿಕೆ: ಈ ನಡುವೆ ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ಶನಿವಾರ ದೇಶದಲ್ಲೇ ಅತಿ ಹೆಚ್ಚು ಸೋಂಕು ಪ್ರಕರಣಗಳು ಬೆಳಕಿಗೆ ಬಂದಿವೆ. ಮಹಾರಾಷ್ಟ್ರದಲ್ಲಿ ಶನಿವಾರ 790 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 12296ಕ್ಕೆ ತಲುಪಿದೆ.

ಜೊತೆಗೆ ರಾಜ್ಯದಲ್ಲಿ 36 ಜನ ಸಾವನ್ನಪ್ಪಿದ್ದು, ಒಟ್ಟಾರೆ ಸಾವಿನ ಸಂಖ್ಯೆ 521ಕ್ಕೆ ತಲುಪಿದೆ. ಇನ್ನು ಗುಜರಾತ್‌ನಲ್ಲಿ 353 ಹೊಸ ಪ್ರಕರಣಗಳೊಂದಿಗೆ, ಒಟ್ಟು ಸೋಂಕಿತರ ಸಂಖ್ಯೆ 5054ಕ್ಕೆ ತಲುಪಿದೆ. ಜೊತೆಗೆ ಒಂದೇ ದಿನ 26 ಜನ ಸಾವನ್ನಪ್ಪುವುದರೊಂದಿಗೆ ಒಟ್ಟಾರೆ ಸಾವಿನ ಸಂಖ್ಯೆ 262ಕ್ಕೆ ತಲುಪಿದೆ. ಇನ್ನು ತಮಿಳುನಾಡಿನಲ್ಲಿ ಶನಿವಾರ 231 ಜನರಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದೆ.

Follow Us:
Download App:
  • android
  • ios