Asianet Suvarna News Asianet Suvarna News

ಕೊರೋನಾ ಅವತಾರ;  ದೇಶದ ಲೆಕ್ಕದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ

ಕರ್ನಾಟಕದಲ್ಲಿ ಕೊರೋನಾ ಎರಡನೇ ಅಲೆ ಆರ್ಭಟ/ ದೇಶದಲ್ಲಿ ಕರ್ನಾಟಕಕ್ಕೆ ಮೂರನೇ ಸ್ಥಾನ/   ನಿಲ್ಲುತ್ತಿಲ್ಲ ಸೋಂಕಿನ ಆರ್ಭಟ/ ಮಹಾರಾಷ್ಟ್ರದ ಹಂತಕ್ಕೆ ಹೋಗ್ತಾ ಇದೆಯಾ ಕರ್ನಾಟಕ?

Coronavirus Active case in india karnataka 3rd place mah
Author
Bengaluru, First Published Apr 21, 2021, 9:56 PM IST

ಡೆಲ್ಲಿ ಮಂಜು

ನವದೆಹಲಿ (ಏ. 21)  ಕೊರೊನಾ ಆಕ್ಟೀವ್ ಕೇಸ್ ಇಂಡಿಯಾ ಲಸ್ಟ್ ನಲ್ಲಿ ಕರ್ನಾಟಕಕ್ಕೆ ಯಾವ ಸ್ಥಾನ ? ಶೇ.15ಕ್ಕೂ ಹೆಚ್ಚು ಪಾಸಿಟಿವ್ ರೇಟ್ ದೇಶದ ಎಷ್ಟು ಜಿಲ್ಲೆಗಳಲ್ಲಿದೆ ? ಈ ಪ್ರಶ್ನೆಗಳಿಗೆ ಕೇಂದ್ರ ಸರ್ಕಾರ ಇವತ್ತು ಉತ್ತರ ನೀಡಿದೆ.

ಕೊರೊನಾ ಮಹಾಮಾರಿಯ ಸೆರೆಗೂ ನಿತ್ಯ ಉದ್ದವಾಗುತ್ತಲೇ ಇದೆ. ಮೊದಲ ಅಲೆ ವೇಳೆ 98 ಸಾವಿರ ಸೋಂಕಿತ ಪ್ರಕರಣಗಳು ಬಂದಿದ್ದೇ ಅತಿ ಹೆಚ್ಚು ಎನ್ನಲಾಗುತ್ತಿತ್ತು. ಆದರೆ 2ನೇ ಅಲೆ ಆರಂಭದಲ್ಲೇ ಭಾರಿ ಹೊಡೆತ ಕೊಟ್ಟು ನಿತ್ಯದ ಸೋಂಕಿನ ಪ್ರಕರಣಗಳು ಮೂರು ಲಕ್ಷದ ಗಡಿ ದಾಟಿ ಗೂಳಿಯಂತೆ ಮುನ್ನುಗ್ಗುತ್ತಿದೆ. ಹೀಗೆ ಮುನ್ನುಗುತ್ತಿರುವ ಕೊರೊನಾ ಗ್ರಾಫ್ ಆಕ್ಟೀವ್ ಕೇಸ್ ಲಿಸ್ಟ್‍ನಲ್ಲಿ ಕರ್ನಾಟಕ 3 ನೇ ಸ್ಥಾನದಲ್ಲಿದೆ.

ಕರ್ನಾಟಕದಲ್ಲಿ ಲಭ್ಯವಿರುವ ಬೆಡ್ ಮಾಹಿತಿ ಕೊಟ್ಟ ಸುಧಾಕರ್

ಇಡೀ ದೇಶದಲ್ಲಿ ಅತಿ ಹೆಚ್ಚು ಸೋಂಕು ಅಥವಾ ಆಕ್ಟೀವ್ ಕೇಸ್ ಇರುವ ರಾಜ್ಯಗಳಲ್ಲಿ ಕರ್ನಾಟಕ 3 ನೇ ಸ್ಥಾನ ತಲುಪಿದೆ. ಮಹಾರಾಷ್ಟ್ರ-6.85 ಲಕ್ಷ, ಉತ್ತರಪ್ರದೇಶ-2.23 ಲಕ್ಷ, ಕರ್ನಾಟಕ-1.59 ಲಕ್ಷ, ಚತ್ತೀಸ್‍ಘಡ್-1.25 ಲಕ್ಷ ಹಾಗು ಕೇರಳ-1.18 ಸಕ್ರಿಯೆ ಪ್ರಕರಣಗಳು ಇವೆ ಅಂಥ ಕೇಂದ್ರ ಆರೋಗ್ಯ ಇಲಾಖೆ ಅಂಕಿ ಅಂಶಗಳು ಬಿಡುಗಡೆ ಮಾಡಿದೆ.

ಕರ್ನಾಟಕದಲ್ಲಿ ಕೊರೋನಾ ಅಲೆ ತಡೆಯಲು ಮಾರ್ಗಸೂಚಿ ಬಿಡುಗಡೆ ಮಾಡಲಾಗಿದೆ. ರಾಜ್ಯದಲ್ಲಿ ಬೆಡ್ ಕೊರತೆ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ ಸುಧಾಕರ್ ಮಾಹಿತಿ ನೀಡಿದ್ದಾರೆ.

 

Follow Us:
Download App:
  • android
  • ios