ಕೊರೋನಾ 2ನೇ ಅಲೆ: ಕಳೆದ 24 ಗಂಟೆಯಲ್ಲಿ 150 ಟನ್ ಆಕ್ಸಿಜನ್ ಪೂರೈಕೆ!


ಕೊರೋನಾ ವೈರಸ್ 2ನೇ ಅಲೆಗೆ ಇಡೀ ಭಾರತ ಬೆಚ್ಚಿ ಬಿದ್ದಿದೆ.  ಸೋಂಕಿತರ ಚಿಕಿಕ್ಸೆಗೆ ಆಕ್ಸಿಜನ್ ಕೊರತೆ ಕೇಂದ್ರ ಸರ್ಕಾರ ಶೀಘ್ರ ಸ್ಪಂದಿಸಿದೆ. ಕಳೆ 24 ಗಂಟೆಯಲ್ಲಿ 150 ಟನ್ ಆಕ್ಸಿಜನ್ ಪೂರೈಕೆ ಮಾಡಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

Coronav 2nd wave Oxygen Expresses deliver nearly 150 tonnes of Oxygen in last 24 hours india ckm

ನವದೆಹಲಿ(ಏ.24): ದೇಶದಲ್ಲಿ ತಲೆದೋರಿರುವ ಆಕ್ಸಿಜನ್ ಸಮಸ್ಯೆ ನಿವಾರಿಸಲು ಕೇಂದ್ರ ಸರ್ಕಾ ಅವಿರತ ಶ್ರಮ ವಹಿಸುತ್ತಿದೆ. ರೈಲ್ವೇ ಇಲಾಖೆ, ರಕ್ಷಣಾ ಇಲಾಖೆ ಸಹಯೋಗದೊಂದಿಗೆ ಭಾರತ ಆಕ್ಸಿಜನ್ ಪೂರೈಕೆ ಮಾಡುತ್ತಿದೆ. ಇದರ ಫಲವಾಗಿ ಕಳೆದ 24 ಗಂಟೆಯಲ್ಲಿ 150 ಟನ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ.

ಉತ್ತರ ಪ್ರದೇಶ ತಲುಪಿತು ಆಕ್ಸಿಜನ್ ಟ್ಯಾಂಕರ್ ಹೊತ್ತ ವಿಶೇಷ ರೈಲು; ಅರ್ಧ ಸಮಸ್ಯೆ ನಿವಾರಣೆ!

ಆಕ್ಸಿಜನ್ ಎಕ್ಸ್‌ಪ್ರೆಸ್ ರೈಲಿನಲ್ಲಿ  ಲಿಕ್ವಿಡ್ ಮೆಡಿಕಲ್ ಆಕ್ಸಿಜನ್ ಟ್ಯಾಂಕರ್‌ಗಳು  ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶಕ್ಕಾಗಿ ನಾಸಿಕ್ ಮತ್ತು ಲಕ್ನೋಗೆ ಬಂದಿವೆ. ವಾರಣಾಸಿ ಹಾಗೂ ನಾಗ್ಪುರದಲ್ಲಿ ಆಕ್ಸಿಜನ್ ಕಂಟೈನರ್‌ಗಳನ್ನು ಇಳಿಸಲಾಗಿದ್ದು, ಈ ಭಾಗದ ಆಸ್ಪತ್ರೆಗಳಿಗೆ ಪೂರೈಕೆ ಮಾಡಲಾಗುತ್ತಿದೆ.

ಸಿಂಗಾಪುರದಿದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿದ IAF ಏರ್‌ಕ್ರಾಫ್ಟ್!

ವಿಶಾಖಪಟ್ಟಣಂ ಮತ್ತು ಬೊಕಾರೊದಿಂದ ಆಕ್ಸಿಜನ್ ತುಂಬಿದ ಟ್ಯಾಂಕರ್ ಎಕ್ಸ್‌ಪ್ರೆಸ್ ವಿಶೇಷ ರೈಲಿನ ಮೂಲಕ ದೇಶದ ವಿವಿಧ ಭಾಗಗಳಿಗೆ ಸಾಗಿಸಲಾಗುತ್ತಿದೆ.  ಉತ್ತರಪ್ರದೇಶದಲ್ಲಿ ವೈದ್ಯಕೀಯ ಆಮ್ಲಜನಕದ ಅವಶ್ಯಕತೆಗಳನ್ನು ಪೂರೈಸಲು, ರೈಲಿನ ಚಲನೆಗಾಗಿ, ಲಕ್ನೋದಿಂದ ವಾರಣಾಸಿ ನಡುವೆ ಹಸಿರು ಕಾರಿಡಾರ್ ರಚಿಸಲಾಗಿದೆ. 270 ಕಿ.ಮೀ ದೂರವನ್ನು ರೈಲು 4 ಗಂಟೆ 20 ನಿಮಿಷಗಳಲ್ಲಿ ಸರಾಸರಿ 62.35 ಕಿ.ಮೀ ವೇಗದಲ್ಲಿ ಸಂಚರಿಸಿದೆ.

10 ಕಂಟೈನ್ ಈಗಾಗಲೇ ಪೂರೈಕೆ ಮಾಡಲಾಗಿದೆ. ಈ ಮೂಲಕ ಒಟ್ಟು 150 ಟನ್ ಆಕ್ಸಿಜನ್ ಪೂರೈಕೆ ಮಾಡಲಾಗಿದೆ. 

Latest Videos
Follow Us:
Download App:
  • android
  • ios