ಉತ್ತರ ಪ್ರದೇಶ ತಲುಪಿತು ಆಕ್ಸಿಜನ್ ಟ್ಯಾಂಕರ್ ಹೊತ್ತ ವಿಶೇಷ ರೈಲು; ಅರ್ಧ ಸಮಸ್ಯೆ ನಿವಾರಣೆ!
ಆಕ್ಸಿಜನ್ ಕೊರತೆ ನೀಗಿಸಲು ವಿಶೇಷ ರೈಲು ಆಕ್ಸಿಜನ್ ತುಂಬಿದ ಟ್ಯಾಂಕರ್ ಹೊತ್ತು ಉತ್ತರ ಪ್ರದೇಶದ ತಲುಪಿದೆ. ಇದೀಗ ಉತ್ತರ ಪ್ರದೇಶದಲ್ಲಿ ಎದುರಾದ ಆಕ್ಸಿಜನ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಸಿಕ್ಕಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.
ಲಕ್ನೌ(ಏ.24): ಕೊರೋನಾ ಹೆಚ್ಚಳ ಕಾರಣ ಭಾರತದಲ್ಲಿ ಸೋಂಕಿತರ ಚಿಕಿತ್ಸೆಗೆ ಆಕ್ಸಿಜನ್ ಕೊರತೆ ಎದುರಾಗಿದೆ. ಹಲವು ಆಸ್ಪತ್ರೆಗಳಲ್ಲಿ ಆಕ್ಸಿಜನ್ ಸಿಗದೆ ರೋಗಿಗಳು ಸಾವನ್ನಪ್ಪಿದ್ದಾರೆ. ಇನ್ನು ಹಲವು ಸೋಂಕಿತರಿಗೆ ಆಕ್ಸಿಜನ್ ಕೊರತೆ ಕಾರಣ ಬೆಡ್ ಸಿಕ್ಕಿಲ್ಲ. ಭಾರತದಲ್ಲಿ ತಲೆದೋರಿರುವ ಆಕ್ಸಿಜನ್ ಸಮಸ್ಯೆ ಪರಿಹರಿಸಲು ರೈಲ್ವೇ ಇಲಾಖೆ, ರಕ್ಷಣಾ ಇಲಾಖೆ ಸಹಯೋಗದಲ್ಲಿ ಆಕ್ಸಿಜನ್ ಪೂರೈಕೆ ಮಾಡಲಾಗುತ್ತಿದೆ. ಇದೀಗ ಆಕ್ಸಿಜನ್ ಟ್ಯಾಂಕರ್ ಹೊತ್ತ ವಿಶೇಷ ರೈಲು ಉತ್ತರ ಪ್ರದೇಶ ತಲುಪಿದ್ದು, ಆಕ್ಸಿಜನ್ ಕೊರತೆ ಬಹುತೇಕ ನಿವಾರಣೆಗೊಂಡಿದೆ.
ಸಿಂಗಾಪುರದಿದ ಆಕ್ಸಿಜನ್ ಟ್ಯಾಂಕ್ ಏರ್‌ಲಿಫ್ಟ್ ಮಾಡಿದ IAF ಏರ್‌ಕ್ರಾಫ್ಟ್!
3 ಆಕ್ಸಿಜನ್ ಟ್ಯಾಂಕರ್ ಹೊತ್ತ ವಿಶೇಷ ಆಕ್ಸಿಜನ್ ಎಕ್ಸ್‌ಪ್ರೆಸ್ ಇಂದು ಬೆಳಗ್ಗೆ ಉತ್ತರ ಪ್ರದೇಶ ತಲುಪಿದೆ. ಪ್ರತಿ ಟ್ಯಾಂಕರ್‌ನಲ್ಲಿ 15,000 ಲೀಟರ್ ಮೆಡಿಕಲ್ ಲಿಕ್ವಿಡ್ ಆಕ್ಸಿಜನ್ ತುಂಬಲಾಗಿದೆ. ಈ ರೀತಿಯ 3 ಆಕ್ಸಿಜನ್ ಟ್ಯಾಂಕರ್ ಉತ್ತರ ಪ್ರದೇಶದ ಆಕ್ಸಿಜನ್ ಸಮಸ್ಯೆಗೆ ತಾತ್ಕಾಲಿಕ ಪರಿಹಾರ ನೀಡಿದೆ.
ಭಾರತೀಯ ರೈಲ್ವೆ ಮಹತ್ವದ ಹೆಜ್ಜೆ; ಲಿಕ್ವಿಡ್ ಆಕ್ಸಿನ್ ಹಾಗೂ ಸಿಲಿಂಡರ್ ಸರಬರಾಜು!
ಈ ವಿಶೇಷ ರೈಲು ಆಕ್ಸಿಜನ್ ಟ್ಯಾಂಕರ್ ಹೊತ್ತು ಜಾರ್ಖಂಡ್‌ನಿಂದ ಆಗಮಿಸಿದೆ. 2 ಆಕ್ಸಿಜನ್ ಸಿಲಿಂಡರ್ ಲಕ್ನೌದ ಅರ್ಧ ಆಕ್ಸಿಜನ್ ಸಮಸ್ಯೆ ನೀಗಿಸಲಿದೆ. ಶೀಘ್ರದಲ್ಲೇ ಮತ್ತೆ 3 ಆಕ್ಸಿಜನ್ ಟ್ಯಾಂಕರ್ ಉತ್ತರ ಪ್ರದೇಶಕ್ಕೆ ಆಗಮಿಸಲಿದೆ. ಈ ಮೂಲಕ ಆಕ್ಸಿಜನ್ ಸಮಸ್ಯೆಗೆ ಪೂರ್ಣವಾಗಿ ನಿವಾರಣೆಯಾಗಲಿದೆ ಎಂದು ಉತ್ತರ ಪ್ರದೇಶದ ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ಹೇಳಿದ್ದಾರೆ.