ಕೊರೋನಾ ರೀತಿಯ ಲಕ್ಷಣ ಹೊಂದಿದ್ದ ಲಡಾಖ್‌ನ ಮಹಮ್ಮದ್‌ ಅಲಿ (76) ಎಂಬುವರು ಭಾನುವಾರ ಸಾವನ್ನಪ್ಪಿದ್ದಾರೆ. ರಕ್ತ ಪರೀಕ್ಷೆ ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. 

ನವದೆಹಲಿ [ಮಾ.09]: ಇರಾನ್‌ನಿಂದ ಮರಳಿದ್ದ, ಕೊರೋನಾ ರೀತಿಯ ಲಕ್ಷಣ ಹೊಂದಿದ್ದ ಲಡಾಖ್‌ನ ಮಹಮ್ಮದ್‌ ಅಲಿ (76) ಎಂಬುವರು ಭಾನುವಾರ ಸಾವನ್ನಪ್ಪಿದ್ದಾರೆ. ರಕ್ತ ಪರೀಕ್ಷೆ ವರದಿ ಬಳಿಕ ಸಾವಿನ ನಿಖರ ಕಾರಣ ತಿಳಿಯಲಿದೆ. ಕೊರೋನಾದಿಂದಲೇ ಸಾವನ್ನಪ್ಪಿದ್ದರೆ, ಆ ಸೋಂಕಿಗೆ ಬಲಿಯಾದ ದೇಶದ ಮೊದಲ ವ್ಯಕ್ತಿ ಅಲಿ ಆಗಲಿದ್ದಾರೆ.

Add Asianetnews Kannada as a Preferred SourcegooglePreferred

 ಕೊರೋನಾ ಸೋಂಕಿನ ರೀತಿಯ ಲಕ್ಷಣಗಳಿಂದ ಅಲಿ ಬಳಲುತ್ತಿದ್ದ ಹಿನ್ನೆಲೆಯಲ್ಲಿ, ಪ್ರಕರಣ ಸಾಕಷ್ಟುಆತಂಕಕ್ಕೆ ಕಾರಣವಾಗಿದೆ. ಆದರೆ ರಕ್ತಪರೀಕ್ಷೆ ವರದಿ ಬಂದ ಬಳಿಕವಷ್ಟೇ ಮಹಮ್ಮದ್‌ ಅಲಿ ಅವರ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ. ಇರಾನ್‌ನಿಂದ ಅಲಿ ಬಂದ ವಿಮಾನದಲ್ಲಿದ್ದ ಇನ್ನಿಬ್ಬರು ವ್ಯಕ್ತಿಗಳಲ್ಲಿ ಕೂಡಾ ಈಗಾಗಲೇ ಕೊರೋನಾ ಸೋಂಕು ಖಚಿತಪಟ್ಟಿತ್ತು.

ಕೊರೋನಾ ಎಫೆಕ್ಟ್: ಮಾರ್ಚ್ 31ರ ವರೆಗೆ ಶಾಲೆಗಳಿಗೆ ರಜಾ...

ಒಂದು ವೇಳೆ ಅಲಿ ಅವರು ಕೊರೋನಾದಿಂದಲೇ ಸಾವನ್ನಪ್ಪಿದ್ದು ಖಚಿತವಾದರೆ, ಅದು ಸೋಂಕಿಗೆ ದೇಶದಲ್ಲಿ ಆದ ಮೊದಲ ಬಲಿಯಾಗಲಿದೆ.

ವಿಶ್ವಾದ್ಯಂತ ಈಗಾಗಲೇ ತೀವ್ರ ಆತಂಕ ಮೂಡಿಸಿರುವ ಮಾರಕ ಕೊರೋನಾ ವೈರಸ್‌ ವ್ಯಾಧಿ ತನ್ನ ಕಬಂಧ ಬಾಹುವನ್ನು ಮತ್ತಷ್ಟುವಿಸ್ತರಿಸಿದೆ. ಕೇರಳದಲ್ಲಿ ಮತ್ತೆ ಐವರಲ್ಲಿ ಕೊರೋನಾ ವೈರಸ್‌ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಭಾರತದ ಕೊರೋನಾಪೀಡಿತರ ಸಂಖ್ಯೆ ಭಾನುವಾರ 39ಕ್ಕೇರಿದೆ. ಹೊಸ ಕೊರೋನಾ ಪ್ರಕರಣಗಳ ಹಿನ್ನೆಲೆಯಲ್ಲಿ ಕೇರಳದಲ್ಲಿ ಹೈ ಅಲರ್ಟ್‌ ಸಾರಲಾಗಿದೆ.