ಮುಂಬೈ (ಫೆ.20): ಕೊರೋನಾ ವೈರಸ್‌ನ 2ನೇ ಅಲೆಯ ಆತಂಕಕ್ಕೆ ಕಾರಣವಾಗಿರುವ ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಉದ್ಧವ ಠಾಕ್ರೆ ಅವರ ಮಂತ್ರಿಮಂಡಲದ ಅನೇಕ ಸಚಿವರಿಗೆ ಹಾಗೂ ರಾಜಕೀಯ ಮುಖಂಡರಿಗೆ ಏಕಕಾಲದಲ್ಲಿ ಸೋಂಕು ತಗುಲಿದೆ.

ಸಚಿವರಾದ ಓಂಪ್ರಕಾಶ್‌ ಕಡು, ರಾಜೇಶ್‌ ಟೋಪೆ, ಜಯಂತ ಪಾಟೀಲ್‌, ರಾಜೇಂದ್ರ ಶಿಂಗಣೆ ಅವರಿಗೆ ಕಳೆದ 2-3 ದಿನಗಳಲ್ಲಿ ಕೊರೋನಾ ಬಂದಿದೆ. ಇತ್ತೀಚೆಗೆ ಗೃಹ ಸಚಿವ ಅನಿಲ್‌ ದೇಶಮುಖ್‌ ಅವರಿಗೂ ಸೋಂಕು ತಗುಲಿದೆ.

ಇನ್ನು ಎನ್‌ಸಿಪಿ ನಾಯಕ, ಏಕನಾಥ ಖಾಡ್ಸೆ, ಅವರ ಸೊಸೆ ಹಾಗೂ ಬಿಜೆಪಿ ಸಂಸದೆ ರಕ್ಷಾ ಖಾಡ್ಸೆ ಅವರೂ ತಮಗೆ ಕೊರೋನಾ ಸೋಂಕು ತಗುಲಿರುವುದನ್ನು ದೃಢಪಡಿಸಿದ್ದಾರೆ.

ಮತ್ತಷ್ಟು‘ಕೊರೋನಾ ನಿರ್ಬಂಧ’ : ಯಾವ್ಯಾವುದಕ್ಕೆ ನಿಯಂತ್ರಣ .

ಮಹಾರಾಷ್ಟ್ರದಲ್ಲಿ ಮತ್ತೊಂದು ಪ್ರಭೇದದ ವೈರಸ್ ಪತ್ತೆಯಾಗಿದ್ದು, ದಿನದಿನವೂ ಹೆಚ್ಚಾಗುತ್ತಲೇ ಇದೆ. ಇದರಿಂದ ಅನೇಕ ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ನೀತಿ ನಿಯಮಗಳನ್ನು ಸರ್ಕಾರ ಸಿದ್ಧಮಾಡಿದೆ.