ನವದೆಹಲಿ (ಫೆ.21):  ದೇಶದಲ್ಲಿ ಕೊರೋನಾ ಹಾವಳಿ ಕಡಿಮೆ ಆಗುತ್ತಿದೆ ಎನ್ನುವಾಗಲೇ ಶನಿವಾರ ದೇಶದಲ್ಲಿ 13,993 ಹೊಸ ಪ್ರಕರಣಗಳು ದೃಢಪಟ್ಟಿವೆ. ಇದು ಕಳೆದ 22 ದಿನಗಳ ಅತ್ಯಧಿಕ ಏಕದಿನದ ಅಂಕಿಸಂಖ್ಯೆಯಾಗಿದೆ. ಇದೇ ವೇಳೆ, ಒಂದೇ ದಿನ 101 ಜನರು ಸೋಂಕಿಗೆ ಬಲಿಯಾಗಿದ್ದಾರೆ.

ಈ ಹಿಂದೆ ಜನವರಿ 29ರಂದು 18,855 ಪ್ರಕರಣಗಳು ದಾಖಲಾಗಿದ್ದವು. ಇದಾದ ನಂತರ ದೈನಂದಿನ ಪ್ರಕರಣಗಳ ಸಂಖ್ಯೆ ಇಳಿಮುಖದತ್ತ ಸಾಗಿತ್ತು. 3 ಬಾರಿ 10 ಸಾವಿರಕ್ಕಿಂತ ಕಡಿಮೆ ಕೇಸುಗಳು ವರದಿಯಾಗಿದ್ದವು.

ನೆರೆ ರಾಜ್ಯಗಳಲ್ಲಿ ಹೆಚ್ಚುತ್ತಿದೆ ಕೊರೊನಾ ಕೇಸ್‌: ಆರೋಗ್ಯ ಸಚಿವರಿಂದ ಸುದ್ಧಿಗೋಷ್ಠಿ

ಈ ನಡುವೆ, 13,993 ಹೊಸ ಪ್ರಕರಣಗಳೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1.09 ಕೋಟಿಗೆ ಏರಿದೆ. ಇದೇ ವೇಳೆ,1.06 ಲಕ್ಷ ಮಂದಿ ಗುಣಮುಖರಾಗಿದ್ದಾರೆ. ಸಕ್ರಿಯ ಕೊರೋನಾ ಪ್ರಕರಣಗಳ ಸಂಖ್ಯೆ 1.43 ಲಕ್ಷ ಇದೆ. ಇದು ಕಳೆದ ವಾರ 1.36 ಲಕ್ಷಕ್ಕೆ ಕುಸಿದಿತ್ತು ಎಂಬುದು ಇಲ್ಲಿ ಗಮನಾರ್ಹ.