ನವದೆಹಲಿ (ಡಿ.18): ಗುರುವಾರ ಬೆಳಗ್ಗೆ 8 ಗಂಟೆವರೆಗಿನ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ ಹೊಸದಾಗಿ 24,010 ಮಂದಿಗೆ ಕೊರೋನಾ ದೃಢವಾಗುವ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 99.56 ಲಕ್ಷಕ್ಕೆ ಏರಿಕೆಯಾಗಿದೆ.

ಸೋಂಕು ಇದೇ ಗತಿಯಲ್ಲಿ ಮುಂದುವರಿದರೆ 2 ದಿನಗಳಲ್ಲಿ ದೇಶದ ಒಟ್ಟು ಸೋಂಕಿತರ ಸಂಖ್ಯೆ 1 ಕೋಟಿ ಗಡಿ ದಾಟುವ ಸಾಧ್ಯತೆ ಇದೆ. ಇದೇ ವೇಳೆ ಸೋಂಕಿನಿಂದ ಗುಣಮುಖರಾದವರ ಪ್ರಮಾಣ 94.89 ಲಕ್ಷ ದಾಟಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ-ಅಂಶಗಳು ತಿಳಿಸಿವೆ.

ಕೊರೋನಾ ವೈರಸ್‌ನ ಹೊಸ ಮಾದರಿ ಪತ್ತೆ, ಎಚ್ಚರ ವಹಿಸದಿದ್ರೆ ಆಪತ್ತು ಗ್ಯಾರಂಟಿ..!

ಈ ನಡುವೆ, ದೇಶದಲ್ಲಿ ಗುರುವಾರ ಬೆಳಗ್ಗೆ 8ರ ವರೆಗಿನ ಅವಧಿಯಲ್ಲಿ 355 ಮಂದಿ ಸಾವಿಗೀಡಾಗಿದ್ದು, ಈ ಮೂಲಕ ಕೊರೋನಾ ಸೋಂಕಿಗೆ ಈವರೆಗೆ ಬಲಿಯಾದವರ ಸಂಖ್ಯೆ 1,44,451ಕ್ಕೆ ಏರಿಕೆಯಾಗಿದೆ.

ಅಲ್ಲದೆ ಈವರೆಗೆ ರೋಗದಿಂದ 94,89,740 ಲಕ್ಷ ಮಂದಿ ಚೇತರಿಸಿಕೊಂಡಿದ್ದಾರೆ.

ದಿನಾಂಕ ಸೋಂಕಿತರು

ಆ.7 20 ಲಕ್ಷ

ಆ.23 30 ಲಕ್ಷ

ಸೆ.5 40 ಲಕ್ಷ

ಸೆ.16 50 ಲಕ್ಷ

ಸೆ.28 60 ಲಕ್ಷ

ಅ.11 70 ಲಕ್ಷ

ಅ.29 80 ಲಕ್ಷ

ನ. 20 90 ಲಕ್ಷ