4 ಗಂಟೆಗಳ ಅವಧಿಯಲ್ಲಿ ಒಟ್ಟು 2,927 ಕೋವಿಡ್ ಪ್ರಕರಣ ಸಕ್ರಿಯ ಪ್ರಕರಣಗಳ ಸಂಖ್ಯೆ 16,2799ಕ್ಕೆ ಏರಿಕೆ ದೆಹಲಿಯಲ್ಲಿ ಒಂದೇ ದಿನ 1367 ಕೇಸು ದಾಖಲು
ನವದೆಹಲಿ(ಏ.27): ದೇಶದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಮತ್ತಷ್ಟುಏರಿಕೆ ಕಂಡುಬಂದಿದ್ದು, ಬುಧವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 2,927 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಇದು ಮಂಗಳವಾರದ ಪ್ರಕರಣಗಳ ಸಂಖ್ಯೆಗಿಂತ ಸುಮಾರು 500 ಅಧಿಕವಾಗಿದೆ. ಇದೇ ವೇಳೆ 32 ಸೋಂಕಿತರು ಸಾವನ್ನಪ್ಪಿದ್ದಾರೆ. ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 16,279ಕ್ಕೆ ಏರಿಕೆಯಾಗಿದೆ.
ದೈನಂದಿನ ಪಾಸಿಟಿವಿಟಿ ದರವು ಶೇ. 0.58ಕ್ಕೆ ಏರಿಕೆಯಾಗಿದ್ದು, ವಾರದ ಪಾಸಿಟಿವಿಟಿ ದರವು ಶೇ. 0.59ರಷ್ಟಿದೆ. ಕೋವಿಡ್ ಚೇತರಿಕೆ ದರವು ಶೇ. 98.75ರಷ್ಟಿದೆ. ದೇಶದಲ್ಲಿ ಈವರೆಗೆ 188.19 ಕೋಟಿ ಡೋಸು ಕೋವಿಡ್ ಲಸಿಕೆಯನ್ನು ವಿತರಿಸಲಾಗಿದೆ.
ದಿಲ್ಲಿಯಲ್ಲಿ 1367 ಕೇಸು
ರಾಷ್ಟ್ರ ರಾಜಧಾನಿಯಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಮುಂದುವರೆದಿದೆ. ಕಳೆದ 24 ಗಂಟೆಗಳಲ್ಲಿ ಹೊಸದಾಗಿ 1367 ಕೋವಿಡ್ ಪ್ರಕರಣಗಳು ದಾಖಲಾಗಿವೆ. ಓರ್ವ ಸೋಂಕಿತ ಸಾವಿಗೀಡಾಗಿದ್ದಾನೆ. ಪಾಸಿಟಿವಿಟಿ ದರದಲ್ಲೂ ಏರಿಕೆ ಕಂಡು ಬಂದಿದ್ದು ಶೇ.4.64ಕ್ಕೆ ಏರಿಕೆಯಾಗಿದೆ.
ದ.ಕ.: 1 ಕೊರೋನಾ ಕೇಸ್ ಪತ್ತೆ
ದ.ಕ.ಜಿಲ್ಲೆಯಲ್ಲಿ ಬುಧವಾರ ಒಂದು ಕೊರೋನಾ ಕೇಸ್ ಪತ್ತೆಯಾಗಿದೆ. ಯಾವುದೇ ಡಿಸ್ಚಾಜ್‌ರ್ ಹಾಗೂ ಕೋವಿಡ್ ಸಾವು ಸಂಭವಿಸಿಲ್ಲ. ಪ್ರಸಕ್ತ ಮೂರು ಸಕ್ರಿಯ ಕೇಸ್ ಇದ್ದು, ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇ.0.20 ಆಗಿದೆ.
ಇಲ್ಲಿವರೆಗೆ ಒಟ್ಟು ಪಾಸಿಟಿವ್ ಕೇಸ್‌ಗಳ ಸಂಖ್ಯೆ 1,35,506ಕ್ಕೆ ಏರಿಕೆಯಾಗಿದೆ. ಒಟ್ಟು 1,33,651 ಮಂದಿ ಡಿಸ್ಚಾಜ್‌ರ್ ಆಗಿದ್ದಾರೆ. ಒಟ್ಟು ಸಾವಿನ ಸಂಖ್ಯೆ 1,850 ಆಗಿದೆ ಎಂದು ಜಿಲ್ಲಾ ಹೆಲ್ತ್ ಬುಲೆಟಿನ್ ತಿಳಿಸಿದೆ.
ಉಡುಪಿ: ಕೋವಿಡ್ ಪ್ರಕರಣ ಶೂನ್ಯ
ಜಿಲ್ಲೆಯಲ್ಲಿ ಮಂಗಳವಾರ 90 ಮಂದಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, ಯಾರಲ್ಲಿಯೂ ಸೋಂಕು ಪತ್ತೆಯಾಗಿಲ್ಲ. ಜಿಲ್ಲೆಯಲ್ಲಿ ಪ್ರಸ್ತುತ 1 ಸಕ್ರಿಯ ಕೋವಿಡ್ ಪ್ರಕರಣ ಮಾತ್ರ ಇದೆ. ಜಿಲ್ಲೆಯಲ್ಲಿ ಇದುವರೆಗೆ 539 ಸೋಂಕಿತರು ಮೃತಪಟ್ಟಿದ್ದಾರೆ.
ಮಕ್ಕಳಿಗೂ ಕೊರೋನಾ ಲಸಿಕೆ ಏರಿಕೆ
ಕೊರೋನಾ ಲಸಿಕಾಕರಣ ವಿಚಾರದಲ್ಲಿ ಭಾರತ ಇನ್ನೊಂದು ಹೆಜ್ಜೆ ಮುಂದಿಟ್ಟಿದೆ. 5-12ರ ವಯೋಮಾನದ ಮಕ್ಕಳಿಗೆ ಕೋರ್ಬೆವ್ಯಾಕ್ಸ್ ಮತ್ತು 6-12 ವರ್ಷದ ಮಕ್ಕಳಿಗೆ ಕೋವ್ಯಾಕ್ಸಿನ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಭಾರತೀಯ ಔಷಧ ನಿಯಂತ್ರಣ ಪ್ರಾಧಿಕಾರ (ಡಿಸಿಜಿಐ) ಮಂಗಳವಾರ ಅನುಮೋದನೆ ನೀಡಿದೆ.
ಜೊತೆಗೆ 12 ವರ್ಷ ಮೇಲ್ಪಟ್ಟಮಕ್ಕಳಿಗೆ ಕ್ಯಾಡಿಲಾ ಕಂಪನಿ ಅಭಿವೃದ್ಧಿಪಡಿಸಿರುವ ಝೈಕೋವ್-ಡಿ ಲಸಿಕೆ ನೀಡಿಕೆಯಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಹಾಲಿ ಝೈಕೋವ್-ಡಿ ಲಸಿಕೆಯನ್ನು 2 ಎಂಜಿಯಂತೆ 3 ಡೋಸ್ ನೀಡಲಾಗುತ್ತಿದೆ. ಅದರ ಬದಲು ಇನ್ನು ತಲಾ 28 ದಿನಗಳ ಅಂತರದಲ್ಲಿ 3 ಎಂಜಿಯ 2 ಡೋಸ್ ಮಾದರಿ ಅನುಸರಿಸಲು ಅನುಮತಿ ನೀಡಲಾಗಿದೆ.
