Asianet Suvarna News Asianet Suvarna News

ಇಂದು ರಾತ್ರಿ 8 ಗಂಟೆಗೆ ಜನತೆಯನ್ನುದ್ದೇಶಿ ಸಿಎಂ ಉದ್ಧವ್ ಠಾಕ್ರೆ ಭಾಷಣ!

ಕೊರೋನಾ ವೈರಸ್ ಭೀಕತರೆ ಮಹಾರಾಷ್ಟ್ರ ಸಂಪೂರ್ಣ ತತ್ತರಿಸಿದೆ. ನಿಯಂತ್ರಣಕ್ರೆ ಸೆಕ್ಷನ್ 144, ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‌ಡೌನ್ ಸೇರಿದಂತೆ ಹಲವು ಕ್ರಮಗಳನ್ನು ಮಹಾರಾಷ್ಟ್ರ ಸರ್ಕಾರ ಕೈಗೊಂಡಿದೆ. ಆದರೆ ಕೊರೋನಾ ಮಾತ್ರ ಕಡಿಮೆಯಾಗುತ್ತಿಲ್ಲ. ಇದರ ಬೆನ್ನಲ್ಲೇ ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾತ್ರಿ 8 ಗಂಟೆಗೆ ಜನತೆಯನ್ನುದ್ದೇಶಿ ಮಾತನಾಡುವ ಸಾಧ್ಯೆತೆ ಇದೆ

Corona 2nd wave Maharastra CM Uddhav Thackeray likely to address state after 8 pm today ckm
Author
Bengaluru, First Published Apr 21, 2021, 2:52 PM IST

ಮುಂಬೈ(ಏ.21): ಕೊರೋನಾ ವೈರಸ್ ನಿಯಂತ್ರಣಕ್ಕೆ ಲಾಕ್‌ಡೌನ್ ಕೊನೆಯ ಅಸ್ತ್ರವಾಗಿರಲಿ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಒತ್ತಿ ಹೇಳಿದ್ದರು. ಮೋದಿ ಭಾಷಣ ಮಾಡಿದ ಮರುದಿನವೇ ಇದೀಗ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಇಂದು(ಏ.21) ರಾತ್ರಿ 8 ಗಂಟೆಗೆ ಭಾಷಣ ಮಾಡುವ ಸಾಧ್ಯತೆ ಇದೆ.

ದೇಶವನ್ನುದ್ದೇಶಿ ಮೋದಿ ಮಾತು: ಕೊರೋನಾ ನಿಯಂತ್ರಣಕ್ಕೆ ಮಹತ್ವದ ಸಲಹೆ ನೀಡಿದ ಪ್ರಧಾನಿ

ಸಿಎಂ ಉದ್ಧವ್ ಠಾಕ್ರೆ ಭಾಷಣ ಸುದ್ದಿ ಬಹಿರಂಗವಾಗುತ್ತಿದ್ದಂತೆ ಮಹಾರಾಷ್ಟ್ರ ಸಂಪೂರ್ಣ ಲಾಕ್‌ಡೌನ್ ಮಾತುಗಳು ಕೇಳಿಬರುತ್ತಿದೆ. ಕೊರೋನಾ ನಿಯಂತ್ರಣಕ್ಕೆ ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಇದೀಗ ಮೋದಿ ಹೇಳಿದ ರೀತಿಯಲ್ಲಿ ಕೊನೆಯ ಲಾಕ್‌ಡೌನ್ ಅಸ್ತ್ರವನ್ನು ಮಹಾರಾಷ್ಟ್ರ ಪ್ರಯೋಗಿಸುತ್ತಾ ಅನ್ನೋ ಮಾತುಗಳು ಕೇಳಿಬರುತ್ತಿದೆ.

ಕೊರೋನಾ ನಿಯಂತ್ರಣಕ್ಕೆ ಮಹಾರಾಷ್ಟ್ರ ಸರ್ಕಾರ ಎಲ್ಲಾ ಪ್ರಯತ್ನ ಮಾಡಿದೆ. ಇದೀಗ ಕೊನೆಯ ಅಸ್ತ್ರವೊಂದೆ ಉಳಿದಿದೆ. ಈ ಕುರಿತು ಭುದವಾರ ಮುಖ್ಯಮಂತ್ರಿ ಸ್ಪಷ್ಟ ನಿರ್ಧಾರ ಘೋಷಿಸಲಿದ್ದಾರೆ ಎಂದು ಆಹಾರ ಸಚಿವ ಚಗನ್ ಬುಜಬಲ್ ಹೇಳಿದ್ದಾರೆ.  

ಆರೋಗ್ಯ ಸಚಿವ ರಾಜೇಶ್ ತೊಪೆ ಕೂಡ ಮಹಾರಾಷ್ಟ್ರ ಲಾಕ್‌ಡೌನ್ ಕುರಿತು ಮಾತುಗಳನ್ನಾಡಿದ್ದಾರೆ. ಇದೀಗ ಎಲ್ಲ ಚಿತ್ತ ಮಹಾರಾಷ್ಟ್ರದತ್ತ ನೆಟ್ಟಿದೆ. ಕೊರೋನಾ ನಿಯಂತ್ರಣಕ್ಕೆ ಮಹಾರಾಷ್ಟ್ರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಅನ್ನೋ ಆತಂಕವೂ ಜನರನ್ನು ಕಾಡುತ್ತಿದೆ.

Follow Us:
Download App:
  • android
  • ios