Asianet Suvarna News Asianet Suvarna News

ಸಮ್ಮತಿ ಸೆಕ್ಸ್‌ಗೆ ವಯೋಮಿತಿ ಕಡಿತವಾಗುತ್ತಾ? ಕೇಂದ್ರ ಸರ್ಕಾರಕ್ಕೆ ಕಾನೂನು ಆಯೋಗ ಹೇಳಿದ್ದೀಗೆ..

ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಪೋಕ್ಸೋ ಕಾಯ್ದೆಯಡಿ ಸಮ್ಮತಿಯ ಸೆಕ್ಸ್‌ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸಬೇಕು ಎಂಬ ಅಭಿಪ್ರಾಯಗಳು ಹಲವು ವಲಯಗಳಿಂದ ಕೇಳಿಬಂದಿದ್ದವು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಾನೂನು ಆಯೋಗದ ಸಲಹೆ ಕೇಳಿತ್ತು.

consensual sex lowering minimal age to 16 is not advisable law commission ash
Author
First Published Sep 30, 2023, 9:06 AM IST

ನವದೆಹಲಿ (ಸೆಪ್ಟೆಂಬರ್ 30, 2023): ‘ಪೋಕ್ಸೋ ಕಾಯ್ದೆಯಡಿ ಸಮ್ಮತಿಯ ಸೆಕ್ಸ್‌ಗೆ ಇರುವ 18 ವರ್ಷದ ವಯೋಮಿತಿಯನ್ನು ಬದಲಾವಣೆ ಮಾಡುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಕಾನೂನು ಆಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೆ ಈ ವಯೋಮಿತಿ ಇಳಿಕೆಯ ಯಾವುದೇ ಪ್ರಯತ್ನವು, ಬಾಲ್ಯ ವಿವಾಹ, ಮಕ್ಕಳ ಕಳ್ಳಸಾಗಣೆ ವಿರುದ್ಧದ ಹೋರಾಟಕ್ಕೆ ಅಡ್ಡಿ ಉಂಟುಮಾಡಲಿದೆ’ ಎಂದು ಹೇಳಿದೆ.

ಬದಲಾದ ಸನ್ನಿವೇಶಕ್ಕೆ ಅನುಗುಣವಾಗಿ ಪೋಕ್ಸೋ ಕಾಯ್ದೆಯಡಿ ಸಮ್ಮತಿಯ ಸೆಕ್ಸ್‌ ವಯೋಮಿತಿಯನ್ನು 18ರಿಂದ 16ಕ್ಕೆ ಇಳಿಸಬೇಕು ಎಂಬ ಅಭಿಪ್ರಾಯಗಳು ಹಲವು ವಲಯಗಳಿಂದ ಕೇಳಿಬಂದಿದ್ದವು. ಜೊತೆಗೆ ಇಂಥ ಬದಲಾವಣೆ ಆಗದೇ ಹೋದಲ್ಲಿ ಬಾಲಕಿಯರ ಸಮ್ಮತಿಯಿಂದಲೇ ಲೈಂಗಿಯ ಕ್ರಿಯೆ ನಡೆಸಿದ 18ಕ್ಕಿಂತ ಕೆಳಗಿನ ವಯೋಮಾನದ ಬಾಲಕರು ಕೂಡಾ ಕ್ರಿಮಿನಲ್‌ ಅಪರಾಧ ಹೊರಬೇಕಾಗಿ ಬಂದಿದೆ ಎಂಬ ವಾದಗಳು ಕೇಳಿಬಂದಿದ್ದವು. ಕರ್ನಾಟಕ ಹೈಕೋರ್ಟ್‌ ಕೂಡ ಇದೇ ಅಭಿಪ್ರಾಯ ವ್ಯಕ್ತಪಡಿಸಿತ್ತು. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕಾನೂನು ಆಯೋಗದ ಸಲಹೆ ಕೇಳಿತ್ತು.

ಇದನ್ನು ಓದಿ: ಭಾರತದಲ್ಲಿ ಜಾರಿಯಾಗುತ್ತಾ ರೋಮಿಯೋ - ಜೂಲಿಯೆಟ್‌ ಕಾನೂನು? ಕೇಂದ್ರದ ಪ್ರತಿಕ್ರಿಯೆ ಕೇಳಿದ ಸುಪ್ರೀಂಕೋರ್ಟ್‌

ಶಿಫಾರಸು ಏನು?:
ಆದರೆ ಇದಕ್ಕೆ ವಿರುದ್ಧವಾದ ಅಭಿಪ್ರಾಯ ವ್ಯಕ್ತಪಡಿಸಿರುವ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ನೇತೃತ್ವದ ಕೇಂದ್ರ ಕಾನೂನು ಆಯೋಗವು, ‘16-18ರ ವಯೋಮಾನದ ಮಕ್ಕಳ ವಿರುದ್ಧ ದಾಖಲಾದ ಸಮ್ಮತಿಯ ಸೆಕ್ಸ್‌ ಪ್ರಕರಣಗಳನ್ನು ನಿರ್ವಹಿಸುವ ವಿಷಯದಲ್ಲಿ ನ್ಯಾಯಾಲಯಗಳಿಗೆ ವಿವೇಚನಾಧಿಕಾರ ನೀಡಬೇಕು. ಇದಕ್ಕಾಗಿ ಕೆಲವೊಂದು ಶಾಸನಾತ್ಮಕ ತಿದ್ದುಪಡಿ ತರಬೇಕು. ಅದನ್ನು ಹೊರತುಪಡಿಸಿ ಸಮ್ಮತಿಯ ಸೆಕ್ಸ್‌ ವಯೋಮಿತಿಯನ್ನೇ ಕಡಿತ ಮಾಡಬಾರದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.

ಅಲ್ಲದೆ, ‘16-18ರ ವಯೋಮಾನದ ಮಕ್ಕಳ ಪ್ರಕರಣದಲ್ಲಿ ನ್ಯಾಯಾಲಯಗಳು ಕೂಡಾ ಹದಿಹರೆಯದ ಮಕ್ಕಳ ಪ್ರೀತಿಯನ್ನು ನಿಯಂತ್ರಿಸಲಾಗದು ಮತ್ತು ಸೆಕ್ಸ್‌ ಹಿಂದೆ ಕ್ರಿಮಿನಲ್‌ ಉದ್ದೇಶ ಇಲ್ಲದೇ ಇದ್ದಾಗ ಅದನ್ನು ಕೂಡಾ ಪರಿಗಣಿಸಬೇಕು’ ಎಂದು ಕಾನೂನು ಆಯೋಗ, ಕೇಂದ್ರ ಕಾನೂನು ಸಚಿವಾಲಯಕ್ಕೆ ಸಲ್ಲಿಸಿದ ತನ್ನ ವರದಿಯಲ್ಲಿ ಶಿಫಾರಸು ಮಾಡಿದೆ.

ಇದನ್ನೂ ಓದಿ:  ಲೈಂಗಿಕ ಸಂಬಂಧ ಹೊಂದಿ ಮಾತು ತಪ್ಪಿದರೆ ರೇಪ್‌ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಹಾಲಿ ಕಾನೂನು ಏನೆನ್ನುತ್ತೆ?:
ಹಾಲಿ ಇರುವ ಪೋಕ್ಸೋ ಕಾಯ್ದೆಗಳ ಅನ್ವಯ 18 ವರ್ಷಕ್ಕಿಂತ ಕೆಳಗಿನ ಬಾಲಕ ಮತ್ತು ಬಾಲಕಿಯರ ನಡುವೆ ಸಮ್ಮತಿ ಲೈಂಗಿಕ ಸಂಪರ್ಕ ನಡೆದರೆ, ಅದನ್ನು ಕ್ರಿಮಿನಲ್‌ ಅಪರಾಧ ಎಂದು ಪರಿಗಣಿಸಲಾಗುತ್ತದೆ. ಇಂಥ ಪ್ರಕರಣಗಳಲ್ಲಿ ಬಾಲಕರು ಕ್ರಿಮಿನಲ್‌ ಶಿಕ್ಷೆ ಎದುರಿಸಬೇಕಾಗುತ್ತದೆ.

ಇದನ್ನೂ ಓದಿ: ಸಮ್ಮತಿ ಸೆಕ್ಸ್‌ಗೆ ಒಪ್ಪಿಗೆ ವಯಸ್ಸು 16 ಆಗಿರ್ಬೇಕು: 17 ವರ್ಷದ ಹುಡುಗನ ವಿರುದ್ಧ ಎಫ್‌ಐಆರ್ ರದ್ದು ಮಾಡಿದ ಹೈಕೋರ್ಟ್‌

Follow Us:
Download App:
  • android
  • ios