ಲೈಂಗಿಕ ಸಂಬಂಧ ಹೊಂದಿ ಮಾತು ತಪ್ಪಿದರೆ ರೇಪ್‌ ಎನ್ನಲಾಗದು: ಹೈಕೋರ್ಟ್‌ ತೀರ್ಪು

ಉದ್ದೇಶಪೂರ್ವಕವಾಗಿ ಮದುವೆ ಭರವಸೆಯನ್ನು ಮುರಿಯುವುದಕ್ಕೂ, ಅನಿವಾರ್ಯ ಕಾರಣಗಳಿಂದ ಭರವಸೆಯನ್ನು ಮುರಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಪ್ರಕರಣದಲ್ಲಿ ನಡೆದಿರುವ ಲೈಂಗಿಕ ಸಂಪರ್ಕವನ್ನು ಐಪಿಸಿ ಸೆಕ್ಷನ್‌ 376ರ ಅಡಿಯಲ್ಲಿ ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಕೋರ್ಟ್‌ ಹೇಳಿದೆ. 

consensual sex not rape if promise of marriage is broken orissa high court ash

ಕಟಕ್‌ (ಜುಲೈ 8, 2023): ಉತ್ತಮ ಬಾಂಧವ್ಯದಿಂದ ಆರಂಭವಾದ ಸ್ನೇಹ ಸಂಬಂಧದಲ್ಲಿ ಮದುವೆ ಮುರಿದುಕೊಳ್ಳಬೇಕಾದ ಪರಿಸ್ಥಿತಿ ಎದುರಾದರೆ, ಅದಕ್ಕೂ ಮುನ್ನ ಸ್ನೇಹ ಸಂಬಂಧದಲ್ಲಿ ನಡೆದ ಲೈಂಗಿಕ ಸಂಪರ್ಕವನ್ನು ಅತ್ಯಾಚಾರ ಎಂದು ಪರಿಗಣಿಸಲಾಗದು ಎಂದು ಒರಿಸ್ಸಾ ಹೈಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 7 ವರ್ಷಗಳ ಬಳಿಕ ಸಂಬಂಧ ಮುರಿದುಬಿದ್ದ ಪ್ರಕರಣದಲ್ಲಿ ಪುರುಷನ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸುತ್ತಿರುವ ನ್ಯಾಯಮೂರ್ತಿ ಆರ್‌.ಕೆ.ಪಟ್ನಾಯಕ್‌ ಅವರು ಜುಲೈ 3ರಂದು ಈ ಆದೇಶ ನೀಡಿದ್ದಾರೆ. 

‘ಉದ್ದೇಶಪೂರ್ವಕವಾಗಿ ಮದುವೆ ಭರವಸೆಯನ್ನು ಮುರಿಯುವುದಕ್ಕೂ, ಅನಿವಾರ್ಯ ಕಾರಣಗಳಿಂದ ಭರವಸೆಯನ್ನು ಮುರಿಯುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ. ಈ ಪ್ರಕರಣದಲ್ಲಿ ನಡೆದಿರುವ ಲೈಂಗಿಕ ಸಂಪರ್ಕವನ್ನು ಐಪಿಸಿ ಸೆಕ್ಷನ್‌ 376ರ ಅಡಿಯಲ್ಲಿ ಅತ್ಯಾಚಾರ ಎಂದು ಪರಿಗಣಿಸಲಾಗದು’ ಎಂದು ಕೋರ್ಟ್‌ ಹೇಳಿದೆ.

ಇದನ್ನು ಓದಿ: ಪಾಪಿಗೆ ತಕ್ಕ ಶಿಕ್ಷೆ! ಮನೆಗೆ ನುಗ್ಗಿ ರೇಪ್‌ ಮಾಡಿದವನ ಮರ್ಮಾಂಗವನ್ನೇ ಸೀಳಿದ ಸಂತ್ರಸ್ತೆ

‘ಮೊದಲಿಗೆ ಮದುವೆಯಾಗುವುದಾಗಿ ಇಬ್ಬರು ಒಪ್ಪಿಕೊಂಡಿದ್ದರು. ಆದರೆ ಹಲವು ವರ್ಷಗಳ ಬಳಿಕ ಮದುವೆಯಾಗಲು ಸಾಧ್ಯವಿಲ್ಲ ಎಂಬುದನ್ನು ಇಬ್ಬರು ಒಪ್ಪಿಕೊಂಡಿರುವುದನ್ನು ಕೋರ್ಟ್‌ ಗಮನಿಸಿದೆ. ಹಾಗಾಗಿ ಇದನ್ನು ಕೇವಲ ಲೈಂಗಿಕ ಕಿರುಕುಳ ಎಂದು ಪರಿಗಣಿಸಲಾಗದು’ ಎಂದು ಕೋರ್ಟ್‌ ಹೇಳಿದೆ.

ಮನೆಗೆ ನುಗ್ಗಿ ರೇಪ್‌ ಮಾಡಿದವನ ಮರ್ಮಾಂಗವನ್ನೇ ಸೀಳಿದ ಸಂತ್ರಸ್ತೆ
ಅತ್ಯಾಚಾರ ಮಾಡಿದ ಪುರುಷನಿಗೆ ಸಂತ್ರಸ್ತೆಯೊಬ್ಬರು ತಕ್ಕ ಶಿಕ್ಷೆಯನ್ನೇ ನೀಡಿದ್ದಾರೆ. ಪತಿ ಇಲ್ಲದಿದ್ದಾಗ ತನ್ನ ಮನೆಗೆ ನುಗ್ಗಿ ಅತ್ಯಾಚಾರ ಎಸಗಿದ ನಂತರ ಮಹಿಳೆಯೊಬ್ಬರು ಪುರುಷನ ಮರ್ಮಾಂಗವನ್ನು ಭಾಗಶಃ ಸೀಳಿರುವ ಘಟನೆ ಬಿಹಾರದ ಬಂಕಾ ಜಿಲ್ಲೆಯಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ ಎಂದು ತಿಳಿದುಬಂದಿದೆ.

20ರ ಹರೆಯದ ಮಹಿಳೆ ಶುಕ್ರವಾರ ರಾತ್ರಿ ಮಲಗಿದ್ದಾಗ 27ರ ಹರೆಯದ ಆರೋಪಿ ಮನೆಯ ಮಾಳಿಗೆಯಿಂದ ನುಗ್ಗಿ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಆರಂಭದಲ್ಲಿ ಅತ್ಯಾಚಾರಕ್ಕೆ ಆಕೆ ವಿರೋಧಿಸಿದರೂ ಅವನನ್ನು ತಡೆಯಲು ಸಾಧ್ಯವಾಗಲಿಲ್ಲ. ಬಳಿಕ, ಆಕೆ  ಹತ್ತಿರದಲ್ಲಿದ್ದ ಶೇವಿಂಗ್ ಬ್ಲೇಡ್ ಅನ್ನು ಎತ್ತಿಕೊಂಡು ಅವನ ಜನನಾಂಗಗಳ ಮೇಲೆ ದಾಳಿ ಮಾಡಿ, ಭಾಗಶಃ ಸೀಳಿದಳು ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಸಮ್ಮತಿ ಸೆಕ್ಸ್‌ಗೆ ಒಪ್ಪಿಗೆ ವಯಸ್ಸು 16 ಆಗಿರ್ಬೇಕು: 17 ವರ್ಷದ ಹುಡುಗನ ವಿರುದ್ಧ ಎಫ್‌ಐಆರ್ ರದ್ದು ಮಾಡಿದ ಹೈಕೋರ್ಟ್‌

ಬಳಿಕ, ಆಕೆ ನೋವಿನಿಂದ ಮಲಗಿದ್ದಾಗ, ಮಹಿಳೆ ಅವನ ಹಿಡಿತದಿಂದ ಹೊರಬಂದು ಇತರರಿಗೆ ವಿಚಾರ ತಿಳಿಸಿದ್ದಾಳೆ. ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿದರೂ ಆರೋಪಿ ಆ ವೇಳೆಗೆ ಪರಾರಿಯಾಗಿದ್ದ ಎಂದು ತಿಳಿದುಬಂದಿದೆ. ಬಳಿಕ, ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಮಧ್ಯೆ, ಮಲಗುವ ವೇಳೆ ಒಳಗಿನಿಂದ ಛಾವಣಿಯ ಬಾಗಿಲಿಗೆ ಚಿಲಕ ಹಾಕುವುದನ್ನು ಮರೆತಿದ್ದೆ ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಇನ್ನು, ಈ ಬಗ್ಗೆ ಮಾಹಿತಿ ನೀಡಿದ ಬಂಕಾ ಟೌನ್‌ ಎಸ್‌ಎಚ್‌ಒ ಶಂಭು ಯಾದವ್ "ಆತ್ಮ ರಕ್ಷಣೆಗಾಗಿ ವ್ಯಕ್ತಿಯ ಜನನಾಂಗಗಳನ್ನು ಭಾಗಶಃ ಸೀಳಲಾಗಿದೆ. ಅತ್ಯಾಚಾರ ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸುತ್ತಿರುವಾಗ ನಾವು ಆರೋಪಿಯನ್ನು ಬಂಧಿಸಿದ್ದೇವೆ" ಎಂದು ಶನಿವಾರ ರಾಷ್ಟ್ರೀಯ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

ಇದನ್ನೂ ಓದಿ: ಪತ್ನಿಯನ್ನೇ ವ್ಯಭಿಚಾರಿ ಮಾಡಿದ ಪತಿ: ಮಾದಕ ದ್ರವ್ಯ ನೀಡಿ 90ಕ್ಕೂ ಹೆಚ್ಚು ಜನರಿಂದ ರೇಪ್‌ಗೊಳಗಾದ ಮಹಿಳೆ!

Latest Videos
Follow Us:
Download App:
  • android
  • ios