Asianet Suvarna News Asianet Suvarna News

ಕಾಂಗ್ರೆಸ್‌ನಲ್ಲಿ ಯಾರು ಉಳಿಯುತ್ತಾರೆ ಅನ್ನೋ ಭರವಸೆ ನಾಯಕರಿಗಿಲ್ಲ, ಬಿರುಕು ಹೆಚ್ಚಿಸಿದ ಕೇರಳ ಸಿಎಂ ಮಾತು!

ಕಾಂಗ್ರೆಸ್ ಪಕ್ಷದಲ್ಲಿ ನಾಳೆ ಯಾರು ಉಳಿಯುತ್ತಾರೆ ಅನ್ನೋ ಖಚಿತತದೆ ಅವರ ಪಕ್ಷದ ಪ್ರಮುಖ ನಾಯಕರಿಗೇ ಇಲ್ಲ ಎಂದು ಕೇರಳ ಸಿಎಂ ವಾಗ್ದಾಳಿ ನಡೆಸಿದ್ದಾರೆ. ಈ ಮಾತಿನಿಂದ ಕೇರಳದಲ್ಲಿ ಇಂಡಿಯಾ ಮೈತ್ರಿ ಮತ್ತಷ್ಟು ದೂರವಾಗಿದೆ. 

Congress Top leaders not sure who will remain party tomorrow says Kerala CM Pinarayi Vijayan ckm
Author
First Published Feb 25, 2024, 11:38 PM IST

ಕಣ್ಮೂರು(ಫೆ.25)ಲೋಕಸಭಾ ಚುನಾವಣೆಗೆ ಇಂಡಿಯಾ ಮೈತ್ರಿಯಲ್ಲಿ ಮುನಿಸಿಕೊಂಡಿದ್ದ ಪಕ್ಷಗಳು ಅಂತಿಮ ಹಂತದಲ್ಲಿ ಮೈತ್ರಿ ಮುಂದುವರಿಸುತ್ತಿದೆ. ಆದರೆ ಕೇರಳದಲ್ಲಿ ಮೈತ್ರಿ ಮುಂದುವರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತೆ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಉಳಿಯತ್ತಾರೆ ಅನ್ನೋ ನಂಬಿಕೆ ಅವರ ಪಕ್ಷದ ನಾಯಕರಿಗೇ ಇಲ್ಲ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ. ಕಾಂಗ್ರೆಸ್ ಒಂದು ಪಕ್ಷವಾಗಿ ಸಮರ್ಥ ನಿರ್ಧಾರ ತೆಗೆದುಕೊಳ್ಳುವಲ್ಲಿ ವಿಫಲವಾಗುತ್ತಿದೆ ಎಂದಿದ್ದಾರೆ.

ಕಣ್ಣೂರಿನಲ್ಲಿ ಅಭಿವೃದ್ಧಿ ಕಾಮಾಗಾರಿಗಳಿಗೆ ಶಂಕುಸ್ಥಾನಪನೆ ನೆರವೇರಿಸಿ ಮಾತನಾಡಿದ ಪಿಣರಾಯಿ ವಿಜಯನ್, ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ. ಬಿಜೆಪಿ ಸೋಲಿಸಲು ಒಂದಾಗಿರುವ ಇಂಡಿಯಾ ಮೈತ್ರಿಯಲ್ಲಿ ಕಾಂಗ್ರೆಸ್ ಹಾಗೂ ಸಿಪಿಐ ಪಾಲುದಾರರಾಗಿದ್ದಾರೆ. ಆದರೆ ಕೇರಳದಲ್ಲಿ ಬದ್ಧವೈರಿಗಳಾಗಿರುವ ಈ ಪಕ್ಷಗಳು ಇದೀಗ ಪರಸ್ಪರ ವಿರುದ್ಧ ಹೇಳಿಕೆ ನೀಡುತ್ತಿದೆ. ಇದರಿಂದ ಕೇರಳದಲ್ಲಿ ಇಂಡಿಯಾ ಮೈತ್ರಿ ದೂರ ದೂರವಾಗಿದೆ.

ಆನೆಗೂ ಬಂತಾ ಆಧಾರ್ ಕಾರ್ಡ್? ವಿವಾದಕ್ಕೆ ಗುರಿಯಾದ ಕೇರಳ ವ್ಯಕ್ತಿಗೆ ಕರ್ನಾಟಕದ ಪರಿಹಾರ!

ಕಾಂಗ್ರೆಸ್ ಒಂದು ನಿರ್ಧಾರ ತೆಗೆದುಕೊಳ್ಳಲು ಮೀನಮೇಷ ಎಣಿಸುತ್ತಿದೆ. ಇಷ್ಟೇ ಅಲ್ಲ ಒಲೈಕೆಯಲ್ಲೇ ನಿರ್ಧಾರ ತೆಗೆದುಕೊಳ್ಳಲಾಗದೆ ಸೋಲುತ್ತಿದೆ ಎಂದು ವಿಜಯನ್ ಹೇಳಿದ್ದಾರೆ. ಕಳೆದ ತಿಂಗಳು ರಾಮ ಮಂದಿರ ಪ್ರಾಣಪ್ರತಿಷ್ಠೆ ನಡೆದಿತ್ತು. ಕಮ್ಯೂನಿಸ್ಟ್ ಪಾರ್ಟಿ ರಾಮ ಮಂದಿರ ಉದ್ಘಾಟನೆ ಆಹ್ವಾನ ತರಿಸ್ಕರಿಸಿತ್ತು. ಈ ಮೂಲಕ ತನ್ನ ಸಿದ್ಧಾಂತಕ್ಕೆ ಬದ್ಧವಾಗಿತ್ತು. ಜೊತೆಗೆ ಅಲ್ಪಸಂಖ್ಯಾತರ ಭಾವನೆಗೆ ಧಕ್ಕೆ ತರುವ ಈ ವಿಚಾರದಲ್ಲಿ ಸ್ಪಷ್ಟ ನಿರ್ಧಾರ ತೆಗೆದುಕೊಂಡಿತ್ತು. ಆದರೆ ಕಾಂಗ್ರೆಸ್ ಆಹ್ವಾನ ತಿರಸ್ಕರಿಸಲು ಹಲವು ದಿನ ತೆಗೆದುಕೊಂಡಿತ್ತು. ಯಾರಿಗೆ ನೋವಾಗಲಿದೆ, ರಾಜಕೀಯ ಲಾಭ ನಷ್ಟವೇನು ಅನ್ನೋದು ಲೆಕ್ಕ ಹಾಕಿ ನಿರ್ಧಾರ ಹೇಳಿತ್ತು. ಈ ರೀತಿ ಸಿದ್ಧಾಂತವಿಲ್ಲದ ರಾಜಕೀಯದಿಂದ ಬಿಜೆಪಿ ಲಾಭ ಪಡೆಯುತ್ತಿದೆ ಎಂದು ವಿಜಯನ್ ಹೇಳಿದ್ದಾರೆ.

ಸಂಘ ಪರಿವಾರವನ್ನು ಸಮರ್ಥವಾಗಿ ಎದುರಿಸಲು ಕೇವಲ ಎಡ ಪಕ್ಷಗಳಿಗೆ ಮಾತ್ರ ಸಾಧ್ಯ.ಕಾಂಗ್ರೆಸ್ ಈ ವಿಚಾರದಲ್ಲಿ ಮುಗ್ಗರಿಸುತ್ತಿದೆ. ಮೋದಿ ಆಯೋಧ್ಯೆ ರಾಮ ಮಂದಿರಕ್ಕೆ ಭೇಟಿ ನೀಡಿದಾಗ ಇತ್ತ ರಾಹುಲ್ ಗಾಂಧಿ ಅಸ್ಸಾಂನಲ್ಲಿ ದೇವಸ್ಥಾನ ಮುಂದೆ ಪ್ರತಿಭಟನೆ ಮಾಡುತ್ತಿದ್ದರು. ದೇವಸ್ಥಾನಕ್ಕೆ ತೆರಳುವುದು, ಭಕ್ತಿ, ಭಜನೆ ಮಾಡುವುದು ಅವರ ಹಕ್ಕು. ಆದರೆ ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋದ ಸಮಯ ನೋಡಿದರೆ ರಾಜಕೀಯ ಉದ್ದೇಶ ಸ್ಪಷ್ಟವಾಗುತ್ತದೆ ಎಂದು ವಿಜಯನ್ ಹೇಳಿದ್ದಾರೆ.

ಕೇರಳ ಸಿಎಂ ಪುತ್ರಿಯ 135 ಕೋಟಿ ವಂಚನೆ ಕೇಸ್, ವೀಣಾ ವಿಜಯನ್ ಅರ್ಜಿ ವಜಾಗೊಳಿಸಿದ ಕರ್ನಾಟಕ ಹೈಕೋರ್ಟ್
 

Follow Us:
Download App:
  • android
  • ios