ಸೋನಿಯಾ ಉತ್ತರಾಧಿಕಾರಿ ಯಾರು?: ಅ.16ಕ್ಕೆ ಕಾಂಗ್ರೆಸ್ ಸಭೆ
* ಹೊಸ ಅಧ್ಯಕ್ಷರ ಆಯ್ಕೆ, ಸದ್ಯದ ರಾಜಕೀಯ ಪರಿಸ್ಥಿತಿ ಬಗ್ಗೆ ಚರ್ಚೆ
* ಸೋನಿಯಾ ಉತ್ತರಾಧಿಕಾರಿ ಯಾರು?: ಅ.16ಕ್ಕೆ ಕಾಂಗ್ರೆಸ್ ಸಭೆ
ನವದೆಹಲಿ(ಅ.10): ಅ.16ರಂದು ಮಹತ್ವದ ಕಾಂಗ್ರೆಸ್ ಕಾರ್ಯಕಾರಿಣಿ ಸಭೆ(CWC Meet) ನಡೆಯಲಿದೆ. ನೂತನ ಕಾಂಗ್ರೆಸ್ ಅಧ್ಯಕ್ಷರ(AICC President) ಆಯ್ಕೆಯ ಬಗ್ಗೆ ಚರ್ಚೆ ನಡೆದು, ಅಧ್ಯಕ್ಷೀಯ ಚುನಾವಣೆಯ ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ,
ಇದೇ ವೇಳೆ, ಲಖೀಂಪುರ ಹಿಂಸಾಚಾರ(Lakhimpur Violence), ಆಂತರಿಕ ಚುನಾವಣೆ(Internal Election), ಸದ್ಯದ ರಾಜಕೀಯ ಪರಿಸ್ಥಿತಿ ಹಾಗೂ ಪಕ್ಷದಲ್ಲಿನ ಭಿನ್ನಮತ ನಿವಾರಣೆ ಸೇರಿದಂತೆ ಹಲವು ಇತರ ಚರ್ಚೆಗಳೂ ನಡೆಯಲಿವೆ.
ಈ ಬಗ್ಗೆ ಟ್ವೀಟ್ ಮಾಡಿರುವ ಎಐಸಿಸಿ ಪ್ರಧಾನ ಕಾರ‍್ಯದರ್ಶಿ ಕೆ.ಸಿ.ವೇಣುಗೋಪಾಲ್(KC Venugopal), ‘ಅ.16ರಂದು ದೆಹಲಿಯ ಕಾಂಗ್ರೆಸ್ ಮುಖ್ಯ ಕಚೇರಿಯಲ್ಲಿ ಪಕ್ಷದ ಕಾರ‍್ಯಕಾರಿ ಸಭೆ ಆಯೋಜಿಸಲಾಗಿದೆ. ಈ ವೇಳೆ ಸದ್ಯದ ರಾಜಕೀಯ ಪರಿಸ್ಥಿತಿ, ಮುಂಬರುವ ವಿಧಾನಸಭೆ ಮತ್ತು ಸಾಂಸ್ಥಿಕ ಚುನಾವಣೆಗಳು ಸೇರಿದಂತೆ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಾಗುತ್ತದೆ’ ಎಂದು ತಿಳಿಸಿದ್ದಾರೆ.
ಹಾಗೆಯೇ ಪಕ್ಷದ ನೂತನ ಅಧ್ಯಕ್ಷರನ್ನು ಚುನಾಯಿಸುವ ಬಗ್ಗೆಯೂ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ. ಕಳೆದ ಜನವರಿಯಲ್ಲಿ ನಡೆದ ಕಾರ‍್ಯಕಾರಿ ಸಭೆಯಲ್ಲಿ ಜೂನ್ ಒಳಗಾಗಿ ನೂತನ ಅಧ್ಯಕ್ಷರನ್ನು ಚುನಾಯಿಸಲು ನಿರ್ಧಾರ ಕೈಗೊಳ್ಳಲಾಗಿತ್ತು. ಆದರೆ ಕೊರೋನಾದಿಂದಾಗಿ ಅದು ಕಾರ‍್ಯರೂಪಕ್ಕೆ ಬಂದಿರಲಿಲ್ಲ. ಸೋನಿಯಾಗಾಂಧಿ 2019ರಲ್ಲಿ ಕಾಂಗ್ರೆಸ್ ಪಕ್ಷದ ಮಧ್ಯಂತರ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದರು.
ಬಿಜೆಪಿ ಹಾದಿಯಲ್ಲಿ ಕಾಂಗ್ರೆಸ್: ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಹೊಸ ಮುಖ?
ಕಾಂಗ್ರೆಸ್ ಯುವ ಮುಖ ಹಾಗೂ ಪಕ್ಷಕ್ಕೆ ನಿಷ್ಠರಾಗಿರುವವರಿಗೆ ಮಹತ್ವದ ಜವಾಬ್ದಾರಿ ನೀಡಲು ಮುಂದಾಗಿದೆ. ಸದ್ಯ ಪಕ್ಷ ಬಲವರ್ಧನೆಗೆ ಪೈಲಟ್(Sachin Pilot) ಅಥವಾ ಗೆಹ್ಲೋಟ್‌ಗೆ ಎಐಸಿಸಿ(AICC) ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ
.